Rakshith shetty- rashmika: ಸಪ್ತಸಾಗರದಾಚೆ ಎಲ್ಲೊ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಸಂದರ್ಭದಲ್ಲಿ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಗೆ ಮಾಜಿ ಪ್ರೇಮಿ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಎದುರಾಗಿದೆ.ತೆಲುಗು ಯೂ ಟ್ಯೂಬ್ ವಾಹಿನಿಯೊಂದಕ್ಕೆ ರಕ್ಷಿತ್ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ ನಿರೂಪಕ ರಕ್ಷಿತ್ ಶೆಟ್ಟಿ ಅವರ ಜೀವನದ ಕುರಿತು ಪ್ರಶ್ನೆ ಮಾಡಿದ್ದು, ಪ್ರಶ್ನೆ ಉತ್ತರ ಇಲ್ಲಿದೆ ನೋಡಿ
ಹಲವು ಮಾಧ್ಯಮಗಳಲ್ಲಿ ರಕ್ಷಿತ್ ಶೆಟ್ಟಿ ಹೆಸರಿನ ಮುನ್ನ ರಶ್ಮಿಕಾ ಮಂದಣ್ಣ ಮಾಜಿ ಪ್ರೇಮಿ ಅಂತ ಬರೆಯುತ್ತಿದ್ದಾರೆ ಇದಕ್ಕೆ ನಿಮ್ಮ ರಿಯಾಕ್ಷನ್ ಏನು ಅಂತ ಪ್ರಶ್ನಿಸಿದ್ದರು. ಇದಕ್ಕೆ ಸಿಂಪಲ್ ಆಗಿ ಉತ್ತರಿಸಿದ ರಕ್ಷಿತ್, ಇದರ ಯಾವುದೇ ಬೇರೆ ಫೀಲಿಂಗ್ ಇಲ್ಲ. ಅದು ನಿಜ ಅಲ್ವಾ. ಅದು ಹಾಗೆಯೇ ಇರಲಿ ಬಿಡಿ ಅಂತ ಹೇಳಿದರು.
ಸಂದರ್ಶಕರು ರಶ್ಮಿಕಾ ಜೊತೆ ಈಗಲೂ ಸಂಪರ್ಕದಲ್ಲಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಕ್ಷಿತ್ ‘ಹೌದು. ನಾವು ಸಂಪಕರ್ದಲ್ಲಿದ್ದೇವೆ. ಆಕೆಗೆ ದೊಡ್ಡ ಕನಸುಗಳಿದ್ದವು. ಅದನ್ನು ಇಂದು ನನಸು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಆಕೆಯನ್ನು ಮೆಚ್ಚಲೇಬೇಕು’ ಎಂದಿದ್ದಾರೆ.
ತಮ್ಮ ಮದುವೆ ಯಾವಾಗ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್, ನಾನು ತುಂಬಾ ಕ್ಯೂರಿಯಸ್ ಆಗಿ ಕಾಯ್ತಿದ್ದೇನೆ ಎಂದು ಹೇಳಿದ್ರು.