Entertainment

Puttakkana Makkalu: ಚಿತೆ ಏರಿದ ಪುಟ್ಟಕ್ಕನ ಹಿರಿ ಮಗಳು; ಸಹನಾ ಪಾತ್ರವನ್ನ ಇಷ್ಟು ಬೇಗ ಮುಗಿಸಿದ್ಯಾಕೆ?

Puttakkana Makkalu: ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu) ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಪ್ರಸ್ತುತ ಕಥೆಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸ್ನೇಹ ಮನೆ ಬಿಟ್ಟು ಹೋದಳೆಂದು ನೋವಿನಲ್ಲಿ ಪುಟ್ಟಕ್ಕ ಇರವಾಗಲೇ ಈಗ ಮತ್ತೊಂದು ಬರ ಸಿಡಿಲಿನಂತಹ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಸಹನಾ ಶವವಾಗಿ ಪತ್ತೆಯಾಗಿದ್ದಾಳೆ. ಇದನ್ನು ನೋಡಿ ಮನೆ ಮಂದಿ ಕಣ್ಣೀರನ್ನು ಹಾಕಿದ್ದಾರೆ. ಮಗಳನ್ನು ಕಳೆದಕೊಂಡ ಪುಟ್ಟಕ್ಕನ‌ ಗೋಳು ಕಣ್ಣೀರನ್ನು ತರಿಸುವ ಹಾಗೆ ಆಗಿದೆ.

ಗಂಡ ಮುರುಳಿ (Muruli) ಜೊತೆ ವಿಚ್ಚೇದನ ಪಡೆಯಲು ನಿರ್ಧರಿಸಿದ್ದ ಸಹನಾ (Sahana) ತವರು ಮನೆಗೆ ತಾನು ಭಾರವಾಗಬಾರದು ಅಂತ ಮನೆ ಬಿಟ್ಟು ರಾತ್ರಿ ವೇಳೆ ಮನೆಯಿಂದ‌ ಹೊರಗೆ ಬಂದು, ಊರು ಬಿಟ್ಟು ಹೋಗಿದ್ದಾಳೆ. ಸ್ವಂತವಾಗಿ ಜೀವನ ನಡೆಸಬೇಕೆಂದು ನಿರ್ಧರಿಸಿ ಮನೆಯಿಂದ ಹೊರ ಬಂದವಳು ಈಗ ಶವವಾಗಿ ಪತ್ತೆಯಾಗಿದ್ಧಾಳೆ. ಆದರೆ ಅದು ನಿಜವಾಗಿ ಸಹನಾ ಶವನಾ? ಅಥವಾ ಬೇರೆ ಯಾರಾದ್ರೂ ಆಗಿರಬಹುದು ಎನ್ನುವ ಅನುಮಾನ ಮೂಡಿದೆ.

ಯಾವುದಾದರೂ ಸೀರಿಯಲ್ ನಲ್ಲಿ ಆ ಪಾತ್ರ ಮಾಡುವ ಕಲಾವಿದರು ಸೀರಿಯಲ್ ನಿಂದ ಹೊರ ಬಂದಾಗ ಕಥೆಯಲ್ಲಿ ಅಪಘಾತ ಅಥವಾ ಇನ್ನೇನಾದ್ರು ಆಗಿ ಪ್ಲಾಸ್ಟಿಕ್ ಸರ್ಜರಿ ಆಗಿ ಮುಖ ಬದಲಾವಣೆಯೊಂದಿಗೆ ಹೊಸ ಕಲಾವಿದರು ಎಂಟ್ರಿ ಕೊಡೋದು ನಡೀತಾ ಇರುತ್ತೆ. ಅದೇ ರೀತಿ ಸಹನಾ ಪಾತ್ರದಲ್ಲೂ ಏನಾದರೂ ಬದಲಾವಣೆ ಆಗಬಹುದಾ? ಅನ್ನೋ ಅನುಮಾನ ಕೂಡಾ ಈಗ ಮೂಡಿದೆ ಅಂತಾನೇ ಹೇಳಬಹುದು.

ಆದರೆ ಇದೇ ವೇಳೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸಹನಾ ಪಾತ್ರ ಕೂಡಾ ಬಹಳ ಮುಖ್ಯವಾದ ಪಾತ್ರಗಳಲ್ಲಿ ಒಂದಾಗಿರೋದ್ರಿಂದ ಆ ಪಾತ್ರವನ್ನ ಇಷ್ಟು ಬೇಗ ಮುಗಿಸೋದು ಸಾಧ್ಯವೇ ಇಲ್ಲ ಅನ್ನೋದು ಅನೇಕರ ಅಭಿಪ್ರಾಯ ಆಗಿದೆ.‌ ಆದರೆ ವಾಹಿನಿ ಹಂಚಿಕೊಂಡಿರೋ ಹೊಸ ಪ್ರೊಮೋ ಮಾತ್ರ ಸದ್ಯಕ್ಕೆ ಬಹಳಷ್ಟು ಕುತೂಹಲವನ್ನು ಮೂಡಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಸಹನಾ ಅತ್ತೆ ಮನೆಯಲ್ಲಿ ತನಗಾದ ಹಿಂಸೆಯನ್ನ ಗಂಡನ ಹತ್ರ ಹೇಳಿಕೊಂಡ್ರು, ವಿಷ ಹಾಕಿ ಸಾಯಿಸೋ ಪ್ರಯತ್ನ ಮಾಡಿದ್ದಾರೆ ಅಂದ್ರೂ ಮುರುಳಿ ಮೇಷ್ಟ್ರು ಅದನ್ನ ನಂಬೋಕೆ‌ ಸಿದ್ಧವಾಗಿರ್ಲಿಲ್ಲ. ತನ್ನ ಕುಟುಂಬದ ಮೇಲೆ ಇಟ್ಟ ನಂಬಿಕೆಯಿಂದ ಸಹನಾ ಮಾತನ್ನ ಒಪ್ಪದೇ ವಿಚ್ಚೇದನ ಪಡೆಯೋಕೆ ಕೋರ್ಟ್ ಗೆ ಹೋದಾಗ ಅಲ್ಲಿ ಮುರುಳಿಗೆ ಅಸಲಿ ವಿಷಯ ಅರ್ಥ ಆಗಿದೆ. ಸಹನಾಗೆ ವಿಷ ಹಾಕಿದ್ದು, ಅವರ ಕುಟುಂಬ ಸಹನಾನ ಬದುಕಿಸಿದ್ದು ಎಲ್ಲಾ ಸ್ಪಷ್ಟವಾಗಿದೆ.‌

ಮುರುಳಿಗೆ ತನ್ನ ತಪ್ಪಿನ ಅರಿವಾಗಿದೆ. ಅಲ್ಲದೇ ಅವರು ಕ್ಷಮೆ ಕೇಳೋಕು ಸಿದ್ಧವಾಗಿದ್ದಾರೆ. ಆದರೆ ಸಹನಾ ಮಾತ್ರ ಅದಕ್ಕೆ ಒಪ್ಪಿಕೊಂಡಿಲ್ಲ.‌ ತನ್ನ ಮೇಲೆ ನಂಬಿಕೆ ಇಲ್ದೇ ಇರೋ ಗಂಡನ ಜೊತೆ ಬದುಕೋದು ಕಷ್ಟ ಅಂತ ವಿಚ್ಚೇದನ ಪಡಿಲೇಬೇಕು ಅಂತ ದೃಢವಾದ ನಿರ್ಧಾರವನ್ನು ಮಾಡಿದ್ದಾಳೆ. ಸ್ವಂತವಾಗಿ ಬದುಕಬೇಕು ಅಂತ ಮನೆಯಿಂದ ಬಂದ ಸಹನಾ ಈಗ ಶವ ಆಗಿ ಪತ್ತೆ ಆಗಿದ್ದು, ಮುಂದೆ ಕಥೇಲಿ ಮತ್ತೇನು ಟ್ವಿಸ್ಟ್ ಇದೆ ಕಾದು ನೋಡಬೇಕಾಗಿದೆ.

Soma Shekar

Recent Posts

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

12 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

14 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

20 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

21 hours ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

23 hours ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

2 days ago

This website uses cookies.