Gunturu Karam ರಾಜಮೌಳಿ ಹೆಸರು ಪ್ರಸ್ತಾಪಿಸಿ ಸಂಚಲನ ಸೃಷ್ಟಿಸಿದ ನಿರ್ಮಾಪಕ: ನಾಗವಂಶಿ ಮಾತಿಗೆ ಬೆಚ್ಚಿದ ಟಾಲಿವುಡ್!
Gunturu Karam ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಪ್ರಸ್ತುತ ನಟಿಸುತ್ತಿರುವ ಸಿನಿಮಾ ಗುಂಟೂರು ಕಾರಂ ಸಾಕಷ್ಟು ವಿಷಯಗಳಿಗಾಗಿ ಆಗಾಗ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಹಾ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಿದೆ. ಸಿನಿಮಾದ ಸುತ್ತ ಒಂದಷ್ಟು ವದಂತಿಗಳು ಸಹಾ ಹರಡುತ್ತಾ ಇದರಲ್ಲಿ ಕೆಲವು ವಿಷಯಗಳು ಸತ್ಯ ಆಗಿದೆ.
ಆರಂಭದಲ್ಲಿ ಈ ಸಿನಿಮಾಕ್ಕೆ ನಾಯಕಿ ಪೂಜಾ ಹೆಗ್ಡೆ (Pooja Hegde) ಆಗಿದ್ದರು, ಆದರೆ ಅನಂತರ ನಟಿ ತಮ್ಮ ಡೇಟ್ ಗಳು ಸರಿ ಹೊಂದುತ್ತಿಲ್ಲ ಎನ್ನುವ ಕಾರಣ ನೀಡಿ ಸಿನಿಮಾದಿಂದ ಹೊರಬಂದ ಮೇಲೆ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿದ್ದ ಶ್ತೀಲೀಲಾ (Sreeleela) ಅವರನ್ನು ಮುಖ್ಯ ನಾಯಕಿಯನ್ನಾಗಿ ಮಾಡಿ, ಮತ್ತೊಬ್ಬ ನಾಯಕಿಯಾಗಿ ಬೇರೊಬ್ಬ ನಟಿಯನ್ನು ಕರೆತರಲಾಯಿತು.
ಈ ಸುದ್ದಿಯ ಬೆನ್ನಲ್ಲೇ ನಟ ಮಹೇಶ್ ಬಾಬು ಅವರಿಗೆ ಈ ಸಿನಿಮಾದ ಸಂಗೀತ ನಿರ್ದೇಶಕ ತಮನ್ (Thaman) ಅವರ ಟ್ಯೂನ್ ಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದೂ, ಹೊಸ ಟ್ಯೂನ್ ಮಾಡಲು ಹೇಳಿದ್ದಾರೆಂದೂ ಹಾಗೂ ತಮನ್ ಅವರನ್ನು ಕೈ ಬಿಡುವಂತೆ ಚಿತ್ರತಂಡ ಆಲೋಚನೆ ಮಾಡುತ್ತಿದೆ ಎನ್ನುವ ಒಂದಷ್ಟು ಸುದ್ದಿಗಳು ಕೂಡ ಹರಿದಾಡಿತ್ತು.
ಈಗ ಈ ಸಿನಿಮಾದ ನಿರ್ಮಾಪಕ ನಾಗವಂಶಿ (Naga Vamsi) ತಮ್ಮ ಸಿನಿಮಾದ ಬಗ್ಗೆ ಬಹಳ ಖುಷಿಯಿಂದ ಆಡಿರುವ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ನಾಗವಂಶಿ ಅವರು ತಮ್ಮ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಪಡೆದುಕೊಳ್ಳುವುದು ಖಚಿತ ಎನ್ನುವಂತೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಾಗವಂಶಿ ಅವರು ಮಾತನಾಡುತ್ತಾ, ನಾನು ಹೇಳುವ ವಿಚಾರಗಳನ್ನ ನೀವು ಗರ್ವ ಅಂತ ಅಂದು ಕೊಳ್ಳಬಹುದು. ಆದರೆ ನಮ್ಮ ಸಿನಿಮಾ ಬಿಡುಗಡೆಯಾಗುವ ಪ್ರತಿ ಏರಿಯಾದಲ್ಲೂ ಸಕ್ಸಸ್ ವಿಚಾರದಲ್ಲಿ ಎಸ್ ಎಸ್ ರಾಜಮೌಳಿ ಅವರ ನಂಬರ್ ಗೆ ಹತ್ತಿರ ಹೋಗೋದು ಖಚಿತ ಎನ್ನುವ ಮಾತನ್ನು ಹೇಳಿ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ.