Prabhas: ಸಿನಿಮಾ ಗೆದ್ರೂ ಕಲ್ಕಿಗಾಗಿ ಪಡೆದ ಸಂಭಾವನೆಯಲ್ಲಿ ಪ್ರಭಾಸ್ ಕೋಟಿ ಕೋಟಿ ಹಣ ವಾಪಸ್ ಕೊಟ್ಟಿದ್ಯಾಕೆ?

Written by Soma Shekar

Published on:

---Join Our Channel---

Prabhas: ಸದ್ಯಕ್ಕೆ ಎಲ್ಲಾ ಕಡೆ ಕಲ್ಕಿ 2898 AD (Kalki 2898 AD) ಸಿನಿಮಾದ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ. ಟಾಲಿವುಡ್ ಮಾತ್ರವೇ ಅಲ್ಲ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರೋದ್ರಿಂದ ದೇಶದಾದ್ಯಂತ ಸಹಾ ಈ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾದ ಕುರಿತಾಗಿ ಸುದ್ದಿಗಳು ಹರಿದಾಡಿದೆ.‌ ಪ್ರಭಾಸ್ (Prabhas) ಅಭಿಮಾನಿಗಳಂತೂ ಕಲ್ಕಿ ಬಿಡುಗಡೆಯನ್ನು ಹಬ್ಬದ ಹಾಗೆ ಸಂಭ್ರಮಿಸುತ್ತಿದ್ದಾರೆ.

ನಾಗ ಅಶ್ವಿನ್ (Nag Ashwin) ಅವರ ನಿರ್ದೇಶನ ಹಾಗೂ ಅವರ ಕಲ್ಪನೆಯನ್ನು ವಿಮರ್ಶಕರು ಸಹಾ ಮೆಚ್ಚಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸದೊಂದು ವಿಚಾರವು ಸದ್ದು ಮಾಡಿದೆ. ಅದೇನೆಂದರೆ ನಟ ಪ್ರಭಾಸ್ ಅವರು ಈ ಸಿನಿಮಾಕ್ಕಾಗಿ ಪಡೆದುಕೊಂಡಿದ್ದ ಸಂಭಾವನೆಯನ್ನು ತ್ಯಾಗ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯ ಕೇಳಿ ಎಲ್ಲರಿಗೂ ದೊಡ್ಡ ಶಾಕ್ ಆಗಿದೆ.

ಕಲ್ಕಿ ಸಿನಿಮಾಕ್ಕಾಗಿ ನಟ ಪ್ರಭಾಸ್ ಅವರು ಬರೋಬ್ಬರಿ 150 ಕೋಟಿ ರೂ.ಗಳ ಸಂಭಾವನೆಯನ್ನು ಪಡೆದಿದ್ದರು. ಆದರೆ ಸಿನಿಮಾದ ಬಜೆಟ್ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದರಿಂದ ನಟ ಪ್ರಭಾಸ್ ತಮ್ಮ ಸಂಭಾವನೆಯಲ್ಲಿ 70 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿದ್ದಾರೆನ್ನುವ ವಿಷಯ ಎಲ್ಲರಿಗೂ ಸಹಾ ದೊಡ್ಡ ಅಚ್ಚರಿಯನ್ನೇ ಉಂಟು ಮಾಡಿದೆ.

ಸಿನಿಮಾದ ಗುಣಮಟ್ಟಕ್ಕಾಗಿ ಕೊಟ್ಟ ಸಂಭಾವನೆಯನ್ನೇ ಹಿಂತಿರುಗಿ ಕೊಡುವುದು ಖಂಡಿತವಾಗಿಯೂ ಸಾಮಾನ್ಯವಾದ ವಿಚಾರವಲ್ಲ. ಅದರಲ್ಲೂ ಒಂದೆರಡಲ್ಲ ಸಿನಿಮಾ ಗುಣಮಟ್ಟಕ್ಕಾಗಿ ನಟ ಬರೋಬ್ಬರಿ 70 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿರುವುದು ಈಗ ಅಭಿಮಾನಿಗಳ ಮೆಚ್ಚುಗೆಗಳು ಹರಿದು ಬರುತ್ತಿದೆ. ಇನ್ನು ಕಲ್ಕಿ ಸಿನಿಮಾದ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆಗಳು ದಕ್ಕುತ್ತಿವೆ‌.

Leave a Comment