Pink Unicorn: ರಸ್ತೆಯಲ್ಲಿ ಬಿದ್ದ ಹಿಮ ಸ್ವಚ್ಛ ಮಾಡಿದ ಒಂದು ಕೊಂಬಿನ ಕುದುರೆ: ವೀಡಿಯೋ ವೈರಲ್

Entertainment Featured-Articles News Viral Video
61 Views

ಕೆಲವರು ತಾವು ಮಾಡುವ ಕೆಲಸ ಎಂತಹುದ್ದೇ ಆಗಿದ್ದರೂ ಸಹಾ ಅದರಲ್ಲೇ ಸಂತೋಷವನ್ನು ಹುಡುಕಿಕೊಳ್ಳುತ್ತಾರೆ. ತಾವು ಮಾಡುವ ಕೆಲಸವನ್ನು ಬಹಳ ಖುಷಿಯಿಂದ ಮಾಡುತ್ತಾರೆ. ತಮ್ಮ ಕೆಲಸವನ್ನು ಆಸಕ್ತಿಕರವಾಗಿ, ಆಕರ್ಷಕವಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಅಲ್ಲದೇ ಇಂತಹವರು ತಾವು ಮಾಡುವ ಕೆಲಸದಿಂದ ತಮಗೆ ಮಾತ್ರವೇ ಅಲ್ಲ ಬೇರೆಯವರಿಗೂ ಸಹಾ ಖುಷಿಯನ್ನು ನೀಡಲು ಬಯಸುತ್ತಾರೆ. ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡು, ಅನೇಕರಿಂದ ಶ್ಲಾಘನೆಗೆ ಪಾತ್ರವಾಗಿದೆ.

ವೈರಲ್ ವೀಡಿಯೋದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬೀಳುತ್ತಿರುವ ಹಿಮವನ್ನು ಸ್ವಚ್ಛ ಮಾಡುವ ಕೆಲಸವನ್ನು ಮಾಡುತ್ತಿರುವುದನ್ನು ನಾವು ನೋಡಬಹುದು. ಅದರಲ್ಲೇನಿದೆ ವಿಶೇಷ ಎನ್ನುವಿರಾ?? ಅಲ್ಲೇ ಇದೆ ವಿಶೇಷ. ಆ ವ್ಯಕ್ತಿ ತಾನು ಮಾಡುವ ಕೆಲಸವನ್ನೇ ಎಲ್ಲರ ಗಮನ ಸೆಳೆಯುವ ಹಾಗೆ ಮಾಡುತ್ತಿದ್ದಾರೆ. ಹೌದು ಆ ವ್ಯಕ್ತಿ ಕಥೆಗಳಲ್ಲಿ ಬರುವ ಕಲ್ಪನೆಯ ಪ್ರಾಣಿಯಾದ ಗುಲಾಬಿ ಬಣ್ಣದ ಒಂದು ಕೊಂಬಿನ ಕುದುರೆಯ( unicorn ) ಕಾಸ್ಟ್ಯೂಮ್ ಅನ್ನು ಧರಿಸಿಕೊಂಡಿರುವುದನ್ನು ನೋಡಬಹುದು.

ಈ ಸುಂದರವಾದ ವೀಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಈಗಾಗಲೇ ಎಪ್ಪತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ನೆಟ್ಟಿಗರು ವೀಕ್ಷಣೆಯನ್ನು ಮಾಡಿದ್ದು, ಸಾವಿರಾರು ಜನ ಲೈಕ್ ನೀಡಿದ್ದಾರೆ. ಈ ಘಟನೆ ನಡೆದಿರುವುದು ಅಮೇರಿಕಾದ ಲೇಕ್ ವುಡ್, ಕ್ಲೀವ್ ಲ್ಯಾಂಡ್ ನ ರಸ್ತೆಗಳಲ್ಲಿ. ಇಲ್ಲಿ ಭಾರೀ ಪ್ರಮಾಣದಲ್ಲಿ ಮಂಜು ಬೀಳುತ್ತಿದ್ದು, ಪ್ರತಿದಿನ ರಸ್ತೆಯಲ್ಲಿ ತುಂಬಿದ ಹಿಮವನ್ನು ಸ್ವಚ್ಛ ಮಾಡಲಾಗುತ್ತಿದೆ. ಹೀಗೆ ಸ್ವಚ್ಛ ಮಾಡುವಾಗ ಆ ಕೆಲಸ ಮಾಡುವ ವ್ಯಕ್ತಿ ಈಗ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ರಸ್ತೆಯಲ್ಲಿ ಯೂನಿಕಾರ್ನ್ ನಂತೆ ಡ್ರೆಸ್ ಧರಿಸಿ, ಪ್ರಕೃತಿಯ ಆ ನೋಟವನ್ನು ಎಂಜಾಯ್ ಮಾಡುತ್ತಾ ಆತ ತನ್ನ ಕೆಲಸವನ್ನು ಮಾಡುತ್ತಿರುವುದು ಅನೇಕರ ದೃಷ್ಟಿ ಆತನ ಕಡೆಗೆ ಹರಿದಿದೆ. ಆತ ತನ್ನ ಕೆಲಸವನ್ನು ಮಾಡುವ ವಿಧಾನಕ್ಕೆ ಜನ ಮನ ಸೋತಿದ್ದಾರೆ, ಮೆಚ್ಚುಗೆಯನ್ನು ಹರಿಸಿದ್ದಾರೆ. ಸುಜಿ ಲೀ ಎನ್ನುವ ಟ್ವಿಟರ್ ಬಳಕೆದಾರರು ಈ ಪೋಸ್ಟ್ ಅನ್ನು ರೀಟ್ವೀಟ್ ಮಾಡಿ ಲೇಕ್ ವುಡ್ ನಲ್ಲಿ ಒಬ್ಬರು ಯೂನಿಕಾರ್ನ್ ಡ್ರೆಸ್ ಧರಿಸಿ ಮಾಡುತ್ತಿರುವ ಕೆಲಸ ನನಗೆ ಬಹಳ ಇಷ್ಟವಾಗಿದೆ. ಇಂತಹ ಸಮುದಾಯವನ್ನೇ ನಾನು ಬಯಸಿದ್ದು ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *