ಮತ್ತೆ ಡೆಡ್ ಲೈನ್ ವಿಸ್ತರಣೆ ಡೌಟ್: ಮಾರ್ಚ್ 31ರೊಳಗೆ ಪ್ಯಾನ್, ಆಧಾರ್ ಲಿಂಕ್ ಮಾಡೋಕೆ ಹೀಗೆ ಮಾಡಿ

Written by Soma Shekar

Updated on:

---Join Our Channel---

Pan Aadhar Linking last date : ಏಪ್ರಿಲ್ ಒಂದರಿಂದ ಆರ್ಥಿಕ ವಿಚಾರವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗಲಿದ್ದು, ಪ್ಯಾನ್ ಆಧಾರ್ ನಂಬರ್ ಗಳನ್ನು ಲಿಂಕ್ (Pan Aadhar link) ಮಾಡುವುದಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ. ಇನ್ನು ಕೇವಲ ನಾಲ್ಕು ದಿನಗಳು ಮಾತ್ರವೇ ಉಳಿದಿದ್ದು, ಈ ಬಾರಿ ಡೆ ಡ್ ಲೈನ್ ವಿಸ್ತರಣೆ ಮಾಡುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. ಆದ ಕಾರಣ ಮಾರ್ಚ್ 31ರ ಒಳಗೆ ಪ್ಯಾನ್ ಮತ್ತು ಆಧಾರ್ ನಂಬರನ್ನು ಲಿಂಕ್ ಮಾಡಿ ಇಲ್ಲದೇ ಹೋದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡುವ ವಿಚಾರವಾಗಿ ಈಗಾಗಲೇ ಸಾಕಷ್ಟು ಸುದ್ದಿಗಳು ಮತ್ತು ಮಾಹಿತಿಗಳು ಹೊರ ಬಂದಿವೆ. ಆದರೂ ಬಹಳಷ್ಟು ಜನರು ಇನ್ನೂ ಅದಕ್ಕೆ ಮುಂದಾಗಿಲ್ಲ, ಬಹುಶಃ ಗಡುವು ವಿಸ್ತರಣೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಈ ಹಿಂದೆ ಕೂಡಾ ಹಲವು ಬಾರಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಆದರೆ ಈ ಬಾರಿ ಮತ್ತೊಂದು ಸಲ ವಿಸ್ತರಣೆ ಮಾಡುವುದು ಮತ್ತು ಅದರ ಸಾಧ್ಯತೆಗಳು ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಅಂತಹದೊಂದು ಉದ್ದೇಶ ಕೂಡಾ ಇಲ್ಲವೆಂದು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಸಾವಿರ ರೂಪಾಯಿ ದಂಡದೊಂದಿಗೆ ಮಾರ್ಚ್ 31ರ ತನಕ ಬ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಅವಕಾಶ ಇದೆ. ಏಪ್ರಿಲ್ ಒಂದರ ಬಳಿಕ ಈ ಪ್ರಕ್ರಿಯೆ ನಡೆಯದೆ ಹೋದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದ್ದು ಹೊಸ ಕಾರ್ಡ್ ಪಡೆಯಲು ಮತ್ತು ಅದನ್ನು ಲಿಂಕ್ ಮಾಡಲು ಹತ್ತು ಸಾವಿರ ರೂಪಾಯಿಗಳ ದಂಡವನ್ನು ತೆರಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ. ಮಾರ್ಚ್ 31ರ ಒಳಗೆ ನೀವು ನಿಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಜೊತೆಗೆ ಲಿಂಕ್ ಮಾಡದೆ ಹೋದಲ್ಲಿ ಏಪ್ರಿಲ್ ಒಂದರಿಂದಲೇ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.

ಫ್ಯಾನ್ ನಂಬರ್ ಇಲ್ಲದೆ ಹಣಕಾಸಿನ ಕೆಲಸಗಳನ್ನು ನಿಭಾಯಿಸುವುದು ಕಷ್ಟವಾಗಲಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡುವಂತಹ ಕೆಲಸಗಳವರೆಗೆ ಪ್ರಸ್ತುತ ದಿನಗಳಲ್ಲಿ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದೆ. ಆದ್ದರಿಂದಲೇ ಅದನ್ನು ಆಧಾರ್ಗೆ ಲಿಂಕ್ ಮಾಡುವುದು ಈಗ ಅನಿವಾರ್ಯವಾಗಿದ್ದು ಸರಿಯಾದ ಸಮಯದಲ್ಲಿ ಈ ಕೆಲಸ ಆಗದೆ ಇದ್ದರೆ ನಿಮ್ಮ ಹಣಕಾಸಿನ ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ದೊಡ್ಡ ಸಮಸ್ಯೆಗಳು ಎದುರಾಗಬಹುದು ಎನ್ನುವ ಕಾರಣದಿಂದ ಸೂಕ್ತ ಸಮಯದಲ್ಲಿ ಈ ಪ್ರಕ್ರಿಯೆ ಮುಗಿಸಿ ಎಂದು ತಜ್ಞರು ಸಲಹೆಗಳನ್ನು ನೀಡಿದ್ದಾರೆ.

ಫ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಮೊದಲಿಗೆ ನೀವು www.incometax.gov.in. ಜಾಲತಾಣಕ್ಕೆ ಹೋಗಿ ಹಲ್ಲಿ ಎಡ ಭಾಗದಲ್ಲಿರುವ ಲಿಂಕ್ ಆಧಾರ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಆಗ ಅಗತ್ಯ ಮಾಹಿತಿಗಳು ತೆರೆದುಕೊಳ್ಳುತ್ತವೆ. ಇಲ್ಲವೇ ನೀವು ನೇರವಾಗಿ ಈ ಲಿಂಕ್ ಮೂಲಕ https://eportal.incometax.gov.in/iec/foservices/#/pre-login/bl-link-aadhaar ಮೂಲಕ ಒಂದು ಸಾವಿರಾರು ಶುಲ್ಕ ಪಾವತಿಸಿ ಆಧಾರ್ ಪ್ಯಾನ್ ಲಿಂಕ್ ಮಾಡಬಹುದಾಗಿದೆ.

ಎಸ್ಎಂಎಸ್ ಮೂಲಕವೂ ಈ ಪ್ರಕ್ರಿಯೆಗೆ ಅವಕಾಶವನ್ನು ನೀಡಲಾಗಿದೆ ಅದಕ್ಕಾಗಿ ನೀವು, ಮೆಸೇಜ್‌ ಬಾರ್‌ನಲ್ಲಿ UIDPAN (ಸ್ಪೇಸ್‌) 12 ಅಂಕಿಯ ಆಧಾರ್‌ ಸಂಖ್ಯೆ (ಸ್ಪೇಸ್‌) 10 ಅಂಕಿಯ ಪ್ಯಾನ್‌ ಸಂಖ್ಯೆಯನ್ನು ಟೈಪ್‌ ಮಾಡಿ. ಬಳಿಕ ನಿಮ್ಮ ನೋಂದಾಯಿತ ಸಂಖ್ಯೆಯಿಂದ 567678 ಅಥವಾ 56161 ಗೆ ಮಾತ್ರ ಎಸ್‌ಎಂಎಸ್ ಕಳುಹಿಸಿ ಆಧಾರ್‌ ಮತ್ತು ಪ್ಯಾನ್‌ ಅನ್ನು ಲಿಂಕ್‌ ಮಾಡಬಹುದಾಗಿದೆ.

Leave a Comment