OTT ಯಲ್ಲಿ ಬಿಂದಾಸ್ ಬಿಗ್ ಬಾಸ್: ಸ್ಪರ್ಧಿಗಳ ಸಂಭಾವನೆ ತಿಳಿದು ಶಾಕ್ ಆದ ನೆಟ್ಟಿಗರು: ಯಾರಿಗೆ ಎಷ್ಟು ಸಂಭಾವನೆ??

0 0

ಬಿಗ್ ಬಾಸ್ ರಿಯಾಲಿಟಿ ಶೋ ಎಷ್ಟು ಜನಪ್ರಿಯತೆ ಪಡೆದಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದರಲ್ಲೂ ಹಿಂದಿ ಬಿಗ್ ಬಾಸ್ ಶೋ ಈಗಾಗಲೇ ಭರ್ಜರಿ, ಯಶಸ್ವಿ ಎನಿಸುವ ಹದಿನಾಲ್ಕು ಸೀಸನ್ ಗಳನ್ನು ಮುಗಿಸಿದೆ. ಬಿಗ್ ಬಾಸ್ ಹಿಂದಿ ಪ್ರತಿಯೊಂದು ಸೀಸನ್ ನಲ್ಲಿ ಸಹಾ ಟಿ ಆರ್ ಪಿ ವಿಷಯದಲ್ಲಿ ದಾಖಲೆಯನ್ನು ಬರೆಯುತ್ತದೆ. ಸಾಕಷ್ಟು ಕಾಂ ಟ್ರ ವರ್ಸಿಗಳು ಸೃಷ್ಟಿಯಾಗುತ್ತದೆ, ಬಿಗ್ ಬಾಸ್ ಸ ಸ್ಪರ್ಧಿಗಳ ಹೆಸರಿನಲ್ಲೇ ಪೇಜ್ ಗಳು ಸೃಷ್ಟಿಯಾಗುತ್ತದೆ. ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳಗಳ ಬಿಗ್ ಬಾಸ್ ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಸೇರುತ್ತಾರೆ. ಇಷ್ಟೆಲ್ಲಾ ಸದ್ದು ಮಾಡುವ ಹಿಂದಿ ಬಿಗ್ ಬಾಸ್ ಈ ಬಾರಿ ಓಟಿಟಿ ಯಲ್ಲಿ ಸಹಾ ಆರಂಭವಾಗಿದೆ. ಕರಣ್ ಜೋಹರ್ ನಿರೂಪಣೆ ಮಾಡುತ್ತಿರುವ ಈ ಶೋ ಈಗಾಗಲೇ ಸಾಕಷ್ಟು ವಿ ವಾ ದಗಳನ್ನು ಹುಟ್ಟು ಹಾಕಿದೆ. ಆದರೆ ಅದರ ನಡುವೆಯೇ ಭರ್ಜರಿ ಮನರಂಜನೆಯನ್ನು ನೀಡುತ್ತಾ ಮುಂದೆ ಸಾಗಿದೆ.

ಇನ್ನು ಮಾದ್ಯಮವೊಂದು ಮಾಡಿರುವ ವರದಿಯ ಪ್ರಕಾರ ಬಿಗ್ ಬಾಸ್ ಓಟಿಟಿಯಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸದ್ದು ಮಾಡುತ್ತಿದ್ದರೂ ಅಲ್ಲಿ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳು ಇದ್ದಾರೆ ಎನ್ನುವುದು ವಿಶೇಷ. ಹಾಗಾದರೆ ಬಿಗ್ ಬಾಸ್ ಮನೆಯಲ್ಲಿ ಯಾರು ಯಾರು ಎಷ್ಟೆಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವುದನ್ನು ಒಮ್ಮೆ ತಿಳಿಯೋಣ ಬನ್ನಿ. ಶಮಿತಾ ಬಾಲಿವುಡ್ ಸೆಲೆಬ್ರಿಟಿ ಎನ್ನುವ ಹೆಸರಿನ ಹೊರತಾಗಿಯೂ ಸಹಾ ಅವರನ್ನು ಮೀರಿದ ಸಂಭಾವನೆ ಪಡೆಯುತ್ತಿರುವ ಆ ಸ್ಟಾರ್ ಗಳು ಯಾರು ಎನ್ನುವ ನಿಮ್ಮ‌ ಕುತೂಹಲಕ್ಕೆ ಇಲ್ಲಿದೆ ಉತ್ತರ.

ರಿಧಿಮಾ ಪಂಡಿತ್ : ಬಹು ಹಮಾರಿ ರಜನೀ ಕಾಂತ್ ಸೀರಿಯಲ್ ನ ಖ್ಯಾತಿಯ ನಟಿ ರಿಧಿಮಾ ಪಂಡಿತ್ ಅವರಿಗೆ ಬಿಗ್ ಬಾಸ್ ಓಟಿಟಿ ಯಲ್ಲಿ ವಾರವೊಂದಕ್ಕೆ 5 ಲಕ್ಷ ರೂಪಾಯಿಗಳ ಸಂಭಾವನೆಯನ್ನು ನೀಡಲಾಗುತ್ತಿದ್ದು, ಇದು ಈ ಬಾರಿಯ ಅತಿ ಹೆಚ್ಚು ಸಂಭಾವನೆ ಎನಿಸಿಕೊಂಡಿದೆ ಎನ್ನಬಹುದಾಗಿದೆ.

ಶಮಿತಾ ಶೆಟ್ಟಿ: ಶಮಿತಾ ಈ ಹಿಂದೆ ಟಿವಿ ಯ ಬಿಗ್ ಬಾಸ್ ಆವೃತ್ತಿಯೊಂದರಲ್ಲಿ ಸ್ಪರ್ಧಿಯಾಗಿದ್ದರು. ಈಗ ಓಟಿಟಿ ಯಲ್ಲಿ ಅವರು ಮತ್ತೊಮ್ಮೆ ಸ್ಪರ್ಧಿಯಾಗಿದ್ದು, ಶಮಿತಾ ಅವರಿಗೆ ವಾರಕ್ಕೆ 3.75 ಲಕ್ಷ ರೂಗಳ ಸಂಭಾವನೆ ನಿಗಧಿಯಾಗಿದೆ.

ಉರ್ಫಿ ಜಾವೇದ್ : ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಎಲಿಮಿನೇಟ್ ಆದ ಸದಸ್ಯ ಇವರಾಗಿದ್ದು, ಇವರಿಗೆ ವಾರವೊಂದಕ್ಕೆ 2.75 ಲಕ್ಷ ರೂ ಸಂಭಾವನೆ ನಿಗಧಿಯಾಗಿತ್ತು.

ಜೀಶಾನ್ ಖಾನ್ : ಕುಂಕುಮ ಭಾಗ್ಯ ಸೀರಿಯಲ್ ಖ್ಯಾತಿಯ ಈ ನಟನಿಗೆ ವಾರವೊಂದಕ್ಕೆ 2.5 ಲಕ್ಷ ರೂ‌ಗಳ ಸಂಭಾವನೆಯನ್ನು ನಿಗಧಿ ಮಾಡಲಾಗಿದೆ.

ದಿವ್ಯ ಅಗರ್ವಾಲ್ ಮತ್ತು ನೇಹಾ ಬಸೀನ್ : ಈ ಇಬ್ಬರೂ ನಟಿಯರಿಗೂ ಸಹಾ ವಾರಕ್ಕೆ ತಲಾ 2 ಲಕ್ಷ ರೂಪಾಯಿ ಗಳ ಸಂಭಾವನೆಯನ್ನು ನಿಗಧಿ ಮಾಡಲಾಗಿದೆ.

ಮಿಲಿಂದ್ ಗಾಬಾ, ಮೂಸೆ ಜಟ್ಟನಾ, ಕರಣ್ ನಾಥ್, ಅಕ್ಷರಾ ಸಿಂಗ್ : ಈ ನಾಲ್ಕು ಜನ ಸೆಲೆಬ್ರಿಟಿ ಸ್ಪರ್ಧಿಗಳಿಗೆ ವಾರವೊಂದಕ್ಕೆ ತಲಾ 1.75 ಲಕ್ಷ ರೂಪಾಯಿಗಳ ಸಂಭಾವನೆ ನಿಗಧಿ ಮಾಡಲಾಗಿದೆ.

ನಿಶಾಂತ್ ಭಟ್ , ರಾಕೇಶ್ ಬಾಪಟ್ : ಕೊರಿಯೋಗ್ರಫರ್ ಆಗಿ ಹೆಸರು ಮಾಡಿರುವ ನಿಶಾಂತ್ ಭಟ್ ಹಾಗೂ ನಟ ರಾಕೇಶ್ ಬಾಪಟ್ ಅವರಿಗೆ ವಾರವೊಂದಕ್ಕೆ ತಲಾ 1.2 ಲಕ್ಷ ಸಂಭಾವನೆಯನ್ನು ನಿಗಧಿ ಮಾಡಲಾಗಿದೆ.

ಪ್ರತೀಕ್ ಸೆಹಜ್ವಾಲ್ : ಓಟಿಟಿ ಬಿಗ್ ಬಾಸ್ ನಲ್ಲಿ ಎಲ್ಲರಿಗಿಂತ ಕಡಿಮೆ ಅಂದರೆ 1 ಲಕ್ಷ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಮೊದಲ ಬಾರಿಗೆ ಓಟಿಟಿ ಯಲ್ಲಿ ಬಂದಿರುವ ಬಿಗ್ ಬಾಸ್ ಸಖತ್ ಸದ್ದು ಮಾಡುತ್ತಿರುವುದು ಮಾತ್ರ ನಿಜವಾಗಿದೆ. ಟಿವಿಯಲ್ಲಿ ನೋಡಿದ ಬಿಗ್ ಬಾಸ್ ಗೂ, ಓಟಿಟಿ ಬಿಗ್ ಬಾಸ್ ಗೂ ಬಹಳ ವ್ಯತ್ಯಾಸ ಇದ್ದು, ಓಟಿಟಿ ಟಿವಿ ಬಿಗ್ ಬಾಸ್ ಗಿಂತಲೂ ಹೆಚ್ಚು ಸದ್ದು ಮಾಡುತ್ತಿದೆ ಎನ್ನುವುದು ನಿಜವಾಗಿದೆ. ಸೆನ್ಸಾರ್ ನ ಭಯ ಇಲ್ಲದ ಕಾರಣ ಬಿಂದಾಸ್ ಆಗಿದೆ ಓಟಿಟಿ ಯಲ್ಲಿನ ಬಿಗ್ ಬಾಸ್.

Leave A Reply

Your email address will not be published.