ರಿಯಲ್ ನಾಯಕ, ನಾಯಕಿಗೆ ದಕ್ಕಲಿದೆ ದೊಡ್ಡ ಸತ್ಕಾರ: ಇದಲ್ಲವೇ ಅಸಲಿ ಗೆಲುವು? ಸುದ್ದಿ ತಿಳಿದರೆ ಹೌದು ಅಂತೀರ

Written by Soma Shekar

Published on:

---Join Our Channel---

The Elephant Whisperers: ಈ ಬಾರಿ ಆಸ್ಕರ್ ಪ್ರಶಸ್ತಿ (Oscar Award) ಭಾರತೀಯರಿಗೆ ಬಹಳ ವಿಶೇಷವಾಗಿತ್ತು ಏಕೆಂದರೆ ತ್ರಿಬಲ್ ಆರ್ ಸಿನಿಮಾದ ಹಾಡಿಗೆ ಮತ್ತು ತಮಿಳಿನ ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿಗಳನ್ನು ಪಡೆದು ಬೀಗಿದೆ ಭಾರತೀಯ ಸಿನಿಮಾ ರಂಗ. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಾಯಕ ಮತ್ತು ನಾಯಕಿ ಯಾರು ಎನ್ನುವುದಾದರೆ ಬೊಮ್ಮನ್ (Bomman) ಹಾಗೂ ಬೆಳ್ಳಿ (Belli). ಕೆಲವೇ ದಿನಗಳ ಹಿಂದೆ ಬೊಮ್ಮನ್ ಮತ್ತು ಬೆಳ್ಳಿ ವಿಮಾನ ಯಾನ ವೇಳೆಯಲ್ಲಿ ವಿಮಾನದ ಸಿಬ್ಬಂದಿ ಮತ್ತು ಇತರೆ ಪ್ರಯಾಣಿಕರು ಇವರಿಗೆ ಚಪ್ಪಾಳೆಯ ಮೂಲಕ ಆಸ್ಕರ್ ಗೆದ್ದಿರುವ ಹಿನ್ನೆಲೆಯಲ್ಲಿ ಶುಭ ಹಾರೈಸಿದ್ದರು.

ಈಗ ಅದರ ಬೆನ್ನಲ್ಲೇ ಬೊಮ್ಮನ್ ಮತ್ತು ಬೆಳ್ಳಿಗೆ ಮತ್ತೊಂದು ಸತ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಕಡೆಯಿಂದ ದಕ್ಕುತ್ತಿದೆ. ಹೌದು, ಪ್ರಧಾನಿ ಮೋದಿ (Narendra Modi) ಈ ದಂಪತಿ ಇರುವ ಸ್ಥಳಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಇವರಿಗೆ ಸನ್ಮಾನ ಮಾಡಲಿದ್ದಾರೆ. ಈ ಹಿಂದೆ ಆಸ್ಕರ್ ಬಂದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಸೋಶಿಯಲ್ ಮೀಡಿಯಾ ಮೂಲಕ ಈ ದಂಪತಿಗೆ ಶುಭಾಶಯವನ್ನು ಕೋರಿದ್ದರು. ಈಗ ಅವರನ್ನು ನೇರವಾಗಿ ಭೇಟಿ ಮಾಡಲು ಪ್ರಧಾನಿ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಸಾರ್ಥಕ ಎನಿಸಿದೆ, ಜೊತೆ ಜೊತೆಯಲಿ ಸೀರಿಯಲ್ ಬಗ್ಗೆ ನಟನ ಅಚ್ಚರಿಯ ಮಾತಗಳು: ಪ್ರೇಕ್ಷಕರು ಇದನ್ನು ಒಪ್ಪಿದ್ದಾರಾ?

ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿದ್ದವು. ಸಿನಿಮಾ ಸ್ಟಾರ್ ಗಳು, ರಾಜಕೀಯ ಮುಖಂಡರು, ದೇಶದ ಇತರೆ ಗಣ್ಯರು ಸಹಾ ಎರಡೂ ಚಿತ್ರತಂಡ ಶ್ರಮವನ್ನು ಮೆಚ್ಚಿ ಪ್ರಶಂಸಿಸಿದ್ದರು. ಇನ್ನು ತಮಿಳು ನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ಅವರು ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ಬಹುಮಾನವನ್ನು ಸಹಾ ಘೋಷಣೆ ಮಾಡುವ ಮೂಲಕ ಸುದ್ದಿಯಾಗಿದ್ದರು.

ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಸಿನಿಮಾ ಮಾವುತ ದಂಪತಿಯಾದ ಬೊಮ್ಮನ್ ಮತ್ತು ಬೆಳ್ಳಿಯ ಜೀವನವನ್ನು ಆಧರಿಸಿ ನಿರ್ಮಾಣವಾಗಿತ್ತು. ಆದ್ದರಿಂದಲೇ ಸ್ಟಾಲಿನ್ ಅವರು ಈ ದಂಪತಿಯನ್ನು ತಮ್ಮ ಕಛೇರಿಗೆ ಆಹ್ವಾನ ನೀಡಿ, ನೆನಪಿನ ಫಲಕವನ್ನು ಮತ್ತು ಎರಡು ಲಕ್ಷ ರೂಪಾಯಿಗಳ ಹಣವನ್ನು ಬಹುಮಾನವಾಗಿ ನಡೆಸಿದ್ದರು. ಇದೇ ವೇಳೆ ಆನೆ ಶಿಬಿರದಲ್ಲಿ ಇರುವ ಒಟ್ಟು 91 ಮಾವುತರಿಗೆ ಸಹಾ ತಲಾ ಒಂದೊಂದು ಲಕ್ಷ ರೂ.ಗಳ ಬಹುಮಾನವನ್ನು ಸ್ಟಾಲಿನ್ ಅವರು ನೀಡಿದ್ದರು. ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿ ಕೊಡುವ ಭರವಸೆ ಸಹಾ ನೀಡಿದ್ದಾರೆ.

Leave a Comment