ನಿಮ್ಮ ಬುದ್ಧಿ ಮತ್ತು ದೃಷ್ಟಿಗೆ ಸವಾಲ್: ಈ ಚಿತ್ರದಲ್ಲಿ ಎಷ್ಟು ಝೀಬ್ರಾಗಳಿವೆ? ಸರಿ ಉತ್ತರ ಕೊಟ್ರೆ ನೀವೇ ಜೀನಿಯಸ್

0 0

Optical illusion: ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಪ್ರತಿದಿನವೂ ಸಹಾ ಅನೇಕ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಉಂಟು ಮಾಡುವ ಚಿತ್ರಗಳು ನೆಟ್ಟಿಗರನ್ನು ಸಿಕ್ಕಾಪಟ್ಟೆ ಗೊಂದಲಕ್ಕೆ ದೂಡುತ್ತವೆ. ಮುಖ್ಯವಾಗಿ ಇಂತಹ ಫೋಟೋಗಳಲ್ಲಿ ಅಡಗಿರುವ ರಹಸ್ಯವನ್ನು ತಿಳಿದುಕೊಳ್ಳುವುದು, ಅದನ್ನು ನೋಡಿ ಅಚ್ಚರಿ ಪಡುವುದು ನಡೆಯುತ್ತಲೇ ಇರುತ್ತದೆ. ಅಲ್ಲದೇ ಅನೇಕರು ಆಪ್ಟಿಕಲ್ ಇಲ್ಯೂಷನ್ ಫೋಟೊಗಳಲ್ಲಿ ಅಡಗಿರುವ ರಹಸ್ಯಗಳನ್ನು ಬೇಧಿಸುವ ಕೆಲಸದಲ್ಲಿ ತೊಡಗಿಕೊಳ್ಳಲು ಬಹಳ ಆಸಕ್ತಿಯನ್ನು ತೋರಿಸುವುದು ಉಂಟು.

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಾವು ನೋಡುವ ಚಿತ್ರಗಳಿಗಿಂತ ಭಿನ್ನವಾಗಿರುತ್ತವೆ. ಬಹಳ ಆಸಕ್ತಿಕರ ವಾಗಿರುವ ಈ ಫೋಟೋಗಳು ನಮ್ಮ ಮೆದುಳಿಗೆ ಕೆಲಸವನ್ನು ನೀಡುವ ಜೊತೆಗೆ ನಮ್ಮ ಕಣ್ಣಿನ ದೃಷ್ಟಿಯನ್ನು ಕೂಡಾ ಚುರುಕುಗೊಳಿಸುತ್ತದೆ. ಪ್ರಸ್ತುತ ಝೀಬ್ರಾ ಗಳಿಗೆ ಸಂಬಂಧಿಸಿದ ಹೊಸ ಆಪ್ಟಿಕಲ್ ಇಲ್ಯೂಷನ್ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಈ ಚಿತ್ರದಲ್ಲಿನ ಸಮಸ್ಯೆ ಏನೆಂದರೆ ಇಲ್ಲಿ ಬಹಳಷ್ಟು ಝೀಬ್ರಾಗಳು ಇವೆ. ಅವುಗಳ ಜೊತೆಯಲ್ಲಿ ಅವುಗಳ ನೆರಳೂ ನಮಗೆ ಕಾಣುತ್ತಿದೆ. ಆದ್ದರಿಂದಲೇ ಈ ಚಿತ್ರ ನಮಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತಿದ್ದೆ. ಕೇವಲ ಹತ್ತು ಸೆಕೆಂಡುಗಳ ಅವಧಿಯಲ್ಲಿ ಈ ಚಿತ್ರದಲ್ಲಿ ಒಟ್ಟು ಎಷ್ಟು ಝೀಬ್ರಾಗಳು ಇವೆ ಎನ್ನುವುದನ್ನು ಕಂಡುಹಿಡಿಯಬೇಕಾಗಿದೆ.

ಕೊಟ್ಟಿರುವ ಸಮಯದಲ್ಲಿ ನೀವು ಅಲ್ಲಿರುವ ಝೀಬ್ರಾಗಳು ಎಷ್ಟು ಎಂದು ಕಂಡು ಹಿಡಿದರೆ ನಿಮ್ಮ ಮೆದುಳು ಮತ್ತು ದೃಷ್ಟಿ ಎರಡೂ ಚುರುಕಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹಳಷ್ಟು ಜನರಿಗೆ ಅಲ್ಲಿ ಝೀಬ್ರಾ ಯಾವುದು? ಅದರ ನೆರಳು ಯಾವುದು? ಎನ್ನುವುದು ಗೊತ್ತಾಗಿಲ್ಲ. ಆದ್ದರಿಂದಲೇ ಅವರು ಗೊಂದಲಕ್ಕೀಡಾಗುತ್ತಿದ್ದಾರೆ. ನೀವು ಕೂಡಾ ಈಗ ನಿಮ್ಮ ಪ್ರಯತ್ನವನ್ನು ಮಾಡಿ ನೋಡಿ. ಚಿತ್ರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ನೋಡಿ, ಚಿತ್ರದಲ್ಲಿರುವ ವಿವರಗಳನ್ನು ದೃಷ್ಟಿಸಿ ನೋಡಿ, ಚಿತ್ರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿ. ಆಗ ಖಂಡಿತ ಚಿತ್ರದಲ್ಲಿರುವ ಝೀಬ್ರಾಗಳು ಎಷ್ಟು ಎಂದು ನಿಮಗೆ ತಿಳಿಯುತ್ತದೆ. ಒಂದು ವೇಳೆ ತಿಳಿಯದೇ ಹೋದಲ್ಲಿ ನಿಮಗಾಗಿ ಕೆಳಗಿನ ಚಿತ್ರದಲ್ಲಿ ಉತ್ತರವನ್ನು ನೀಡಲಾಗಿದೆ.

ವೈರಲ್ ಆಗಿರುವ ಈ ಫೋಟೋ ಜನರ ಮೆದುಳಿಗೆ ಕೈ ಹಾಕುತ್ತಿರುವ ಈ ಚಿತ್ರ ನಿಜಕ್ಕೂ ನಮ್ಮ ಬುದ್ಧಿಗೆ ಮತ್ತು ದೃಷ್ಟಿಗೆ ಒಂದು ಸವಾಲನ್ನು ನೀಡಿದೆ. ಈ ಸವಾಲಿಗೆ ಉತ್ತರವನ್ನು ನೀಡುವ ಮೂಲಕ ನಿಮ್ಮನ್ನು ನೀವು ಜೀನಿಯಸ್ ಎಂದು ಸಾಬೀತು ಮಾಡಿಕೊಳ್ಳುವ ಅವಕಾಶವನ್ನು ಸಹಾ ಈ ಚಿತ್ರ ನೀಡಿದೆ. ಒಂದು ವೇಳೆ ಬಹಳ ಪ್ರಯತ್ನಗಳ ನಂತರ ಅಲ್ಲಿರುವ ಝೀಬ್ರಾಗಳ ಸಂಖ್ಯೆ ಗೊತ್ತಾಗಲಿಲ್ಲ ಎಂದರೆ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಒಂಬತ್ತು ಝೀಬ್ರಾಗಳಿವೆ ಉತ್ತರದ ಫೋಟೋವನ್ನು ನೋಡಿದಾಗ ನಿಮಗೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ.

Leave A Reply

Your email address will not be published.