OMG! 6 ಅಡಿ ಜಾಗದಲ್ಲಿ 5 ಅಂತಸ್ತಿನ ಮನೆ: ಮನೆಯ ವಿನ್ಯಾಸ ನೋಡಿ ಶಾಕ್ ಆಗ್ತಿದ್ದಾರೆ ನೆಟ್ಟಿಗರು!!

Written by Soma Shekar

Published on:

---Join Our Channel---

ಸ್ವಂತ ಮನೆ ಎನ್ನುವುದು ಅನೇಕರ ಕನಸಾಗಿರುತ್ತದೆ. ಅದರಲ್ಲೂ ಮದ್ಯಮ ವರ್ಗದವರು ಹಾಗೂ ಬಡವರಿಗೆ ಈ ಕನಸು ನನಸಾಗುವುದು ಕೂಡಾ ಕಷ್ಟ. ಆದರೆ ಮದ್ಯಮ ವರ್ಗದ ಜನರಲ್ಲಿ ಈ ಕನಸನ್ನು ನನಸು ಮಾಡುವುದಕ್ಕಾಗಿ ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿಸಿಯೋ, ಸಾಲ ಸೋಲವನ್ನು ಮಾಡಿಯೋ ಹೇಗೋ ಭೂಮಿಯನ್ನು ಖರೀದಿಸಿ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಮನೆಯೊಂದನ್ನು ನಿರ್ಮಾಣ ಮಾಡಲು ಸಾಕಷ್ಟು ಶ್ರಮ ಪಡುತ್ತಾರೆ. ಆ ಕನಸು ನನಸಾದರೆ ಸಂತೋಷ ಪಡುತ್ತಾರೆ. ಆದರೆ ಅನೇಕರಿಗೆ ಇದು ಕನಸಾಗಿಯೇ ಉಳಿಯುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ಮನೆ ಕಟ್ಟುವುದು ಸುಲಭವಲ್ಲ.

ಇನ್ನೂ ಕೆಲವರಿಗೆ ಮನೆ ಕಟ್ಟಿಸುವ ಆಸೆ ಇರುತ್ತದೆ, ಆದರೆ ಭೂಮಿ ಸ್ವಲ್ಪವೇ ಇರುವುದರಿಂದ ಚಿಕ್ಕದಾದ ಮನೆ ನಿರ್ಮಾಣ ಮಾಡುವುದಕ್ಕೆ ಮುಂದಾಗುವುದಿಲ್ಲ. ಆದರೆ ದೆಹಲಿಯ ಬುರಾಡಿ ಇಲಾಖೆಯಲ್ಲಿ 6 ಅಡಿಗಳ ಜಾಗದಲ್ಲಿ ನಿರ್ಮಾಣ ಮಾಡಿರುವ ಮನೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು, ಮಾದ್ಯಮಗಳಲ್ಲಿ ಇದ್ದು ಸುದ್ದಿಯಾಗಿ ನೋಡುಗರ ಗಮನವನ್ನು ಸೆಳೆದಿತ್ತು ಹಾಗೂ ಅನೇಕರು ಈ ಮನೆಯ ನಿರ್ಮಾಣವನ್ನು ಕಂಡು ಅಪಾರವಾದ ಮೆಚ್ಚುಗೆಗಳನ್ನು ಸಹಾ ವ್ಯಕ್ತಪಡಿಸಿದ್ದರು.

ಆದರೆ ಈಗ ಬಿಹಾರದಲ್ಲಿ ಸಹಾ ಇಂತಹುದೊಂದು ವಿಶೇಷವಾದ ಮನೆಯ ನಿರ್ಮಾಣವಾಗಿ ಎಲ್ಲರ ಗಮನ ಸೆಳೆದಿದೆ. ಹೌದು, ಆರಡಿ ಜಾಗದಲ್ಲಿ ನಿರ್ಮಾಣವಾಗಿರುವ ಐದು ಅಂತಸ್ತಿನ ಮನೆಯನ್ನು ನೋಡಿದ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಪಡುವಂತಿದೆ. ಇದನ್ನು ನೀವು ಸಿವಿಲ್ ಇಂಜಿನಿಯರಿಂಗ್ ನ ಅದ್ಭುತ ಎನ್ನುವಿರೋ ಅಥವಾ ಕ್ರಿಯೇಟಿವಿಟಿ ಎನ್ನುವಿರೋ ನಿಮಗೆ ಬಿಟ್ಟಿದ್ದು. ಮುಜಾಫುರ್ ಪುರದ ಗನ್ನಿಪುರದಲ್ಲಿ ರಸ್ತೆ ಬದಿಯಲ್ಲಿ ನಿರ್ಮಾಣವಾಗಿರುವ ಈ ಐದು ಅಂತಸ್ತಿನ ಈ ಮನೆ ಈಗ ಅಲ್ಲಿನ ಪ್ರಮುಖವಾದ ಆಕರ್ಷಣೆಯಾಗಿದೆ. ಈ ಮನೆಯ ಮಾಲೀಕರ ಹೆಸರು ಸಂತೋಷ್.

ಸಂತೋಷ್ ಅವರು ಅರ್ಚನಾ ಎನ್ನುವವರೊಂದಿಗೆ ವಿವಾಹವಾದ ಮೇಲೆ ಆರು ಅಡಿ ಅಗಲ ಮತ್ತು 45 ಅಡಿ ಉದ್ದದ ಒಂದು ನಿವೇಶನವನ್ನು ಖರೀದಿ ಮಾಡಿದ್ದರು. ಆದರೆ ಜಮೀನಿನ ಅಗಲ ಕೇವಲ ಆರು ಅಡಿಗಳು ಇದ್ದ ಕಾರಣದಿಂದ ಅಲ್ಲಿ ನಿರ್ಮಾಣ ಮಾಡುವುದು ಹೇಗೆ ಎನ್ನುವ ಕಾರಣಕ್ಕೆ ಆ ಜಾಗವು ಖಾಲಿಯಾಗಿಯೇ ಉಳಿದಿತ್ತು. ಅಲ್ಲದೇ ಅನೇಕರು ಸಂತೋಷ್ ಅವರಿಗೆ ಆ ಜಾಗವನ್ನು ಮಾರಿ ಬಿಡುವಂತೆ ಸಲಹೆಯನ್ನು ನೀಡಿದ್ದರು. ಆದರೆ ಸಂತೋಷ್ ಮತ್ತು ಅರ್ಚನಾ ತಮ್ಮ ಮದುವೆಯನ್ನು ಒಂದು ಮಧುರ ನೆನಪಾಗಿ ಮಾಡಲು ಅದೇ ಜಾಗದಲ್ಲಿ ಮನೆ ನಿರ್ಮಾಣ ಮಾಡುವ ನಿಶ್ಚಯ ಮಾಡಿದ್ದರು.

ಈ ಮನೆಯ ನಿರ್ಮಾಣ ಎಲ್ಲರ ಗಮನವನ್ನು ಸೆಳೆಯುತ್ತದೆ. ವಿಶೇಷವೆಂದರೆ ಆರು ಅಡಿಗಳಲ್ಲಿ, ಐದು ಅಡಿಯನ್ನು ಬಳಸಿಕೊಂಡು ಐದು ಅಂತಸ್ತಿನ ಮನೆಯ ನಿರ್ಮಾಣವನ್ನು ಮಾಡಲಾಗಿದೆ. ಕಟ್ಟಡದ ಮುಂಭಾಗದ ಅರ್ಧ ಅಡಿಯಲ್ಲಿ ಮೆಟ್ಟಿಲುಗಳನ್ನು ಇಡಲಾಗಿದೆ. ಸುಮಾರು 20 ಅಡಿ ಉದ್ದ, 5 ಅಡಿ ಅಗಲ ಇರುವ ಮನೆಯ ಅರ್ಧಭಾಗವು ಒಂದು ಪ್ಲಾಟ್ ಹೊಂದಿದ್ದು ಇಲ್ಲಿ, ಅಡುಗೆ ಮನೆಯಿಂದ ಹಿಡಿದು ಶೌಚಾಲಯದವರೆಗೆ ಎಲ್ಲವೂ ಸಹಾ ಇದೆ ಎನ್ನುವುದು ವಿಶೇಷವಾಗಿದೆ.

ಮೇಲಿನ ನಾಲ್ಕು ಫ್ಲಾಟ್ ಗಳು ಸಹಾ ಬ್ಯಾಚುಲರ್ ಗಳಿಗಾಗಿ ನಿರ್ಮಾಣ ಮಾಡಿದಂತೆ ಇದೆ. ಇಲ್ಲಿ ಕೋಣೆಗಳು 11 ಅಡಿ ಉದ್ದ ಮತ್ತು 5 ಅಡಿ ಅಗಲಿವಿದೆ. ಕೆಳಗಿನ ಫ್ಲೋರ್ ಹಾಲ್ ನ ಆಕಾರದಲ್ಲಿ ಇದ್ದು,ಮೇಲೆ ಹೋಗಲು ಮೆಟ್ಟಿಲು ಗಳನ್ನು ಇಲ್ಲಿ ಅಳವಡಿಲಾಗಿದೆ. 2012 ರಲ್ಲಿ ಸಂತೋಷ್ ಅವರ ಈ ವಿಶೇಷ ಮನೆಯ ಪ್ಲಾನ್ ಗೆ ಸಮ್ಮತಿ ಸಿಕ್ಕಿದ ಮೇಲೆ 2015 ರ ವೇಳೆಗೆ ಅವರ ಮನೆ ನಿರ್ಮಾಣ ಕಾರ್ಯವು ಪೂರ್ತಿಯಾಗಿ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯಿತು.

Leave a Comment