OMG! ಮೊಸಳೆ ಜೊತೆ ಹುಡುಗಾಟಾನಾ?? ಬೆಕ್ಕು ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್!! ವೈರಲ್ ಆಯ್ತು ವೀಡಿಯೋ

Written by Soma Shekar

Published on:

---Join Our Channel---

ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿ ದಿನವೋ ಎಷ್ಟೋ ರೀತಿಯ ವೈವಿದ್ಯಮಯ ವೀಡಿಯೋಗಳು ಸಂಚಲನವನ್ನು ಸೃಷ್ಟಿಸುತ್ತಲೇ ಇರುತ್ತವೆ. ಅಂತಹ ವೀಡಿಯೋಗಳಲ್ಲಿ ಕೆಲವು ನಮ್ಮನ್ನು ನಗಿಸಿದರೆ ಇನ್ನೂ ಕೆಲವು ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಮತ್ತೆ‌ ಕೆಲವು ವಿಡಿಯೋಗಳಂತೂ ಏಕಾ ಏಕೀ ನಮಗೆ ಶಾ ಕ್ ಉಂಟು ಮಾಡುತ್ತವೆ. ಈಗ ಇದೇ ರೀತಿಯ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗ್ತಾ ಇದೆ. ಸಾಮಾನ್ಯವಾಗಿ ಮೊಸಳೆಯನ್ನು ದೂರದಿಂದ ನೋಡಿದಾಗಲೇ ಅವರ ದೇಹ, ಆಕಾರ ಹಾಗೂ ನೋಟವು ಭ ಯ ವನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.

ಇಂತಹ ಭ ಯ ಹುಟ್ಟಿಸುವ ಜೀವಿಯ ಹತ್ತಿರಕ್ಕೆ ಹೋಗುವುದುಂಟೇ?? ಇನ್ನೇನಿಲ್ಲ, ಅಪಾಯವನ್ನು ನಾವೇ ಕರೆದು ಆಹ್ವಾನ ಕೊಟ್ಟಂತೆ ಆಗುತ್ತದೆ. ಆದರೆ ಇಲ್ಲೊಂದು ಬೆಕ್ಕು ತನ್ನ ಆಹಾರಕ್ಕಾಗಿ ಮೊಸಳೆಯೊಂದಿಗೆ ಸ ಮ ರ ಮಾಡಲು ಬಂದಿದೆಯೇನೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊನೆಗೆ ಅಲ್ಲಿ ಏನಾಯ್ತು ?? ಬನ್ನಿ ನಾವು ತಿಳಿಯೋಣ. ವೈರಲ್ ವೀಡಿಯೋ ನಲ್ಲಿನ ದೃಶ್ಯದ ವಿಚಾರವು ಬಹಳ ರೋಚಕ ಹಾಗೂ ಕುತೂಹಲವನ್ನು ಕೆರಳಿಸುವುದು ಮಾತ್ರ ಖಂಡಿತ ಎಂದೇ ಹೇಳಬಹುದು.

ವೈರಲ್ ಆಗುತ್ತಿರುವ ವೀಡಿಯೋದಲ್ಲಿನ ದೃಶ್ಯದ ಪ್ರಕಾರ, ಒಂದು ಸಣ್ಣ ಸರೋವರದ ದಂಡೆಯಲ್ಲಿ ಮೊಸಳೆಯೊಂದು ಹಾಯಾಗಿ ಮಲಗಿಕೊಂಡು ವಿಶ್ರಾಂತಿಯನ್ನು ಪಡೆಯುತ್ತಿದೆ. ಆ ಮೊಸಳೆಯ ಬಾಯಿಯ ಮುಂದೆಯೇ ಒಂದು ಮೀನು ಬಿದ್ದಿದೆ. ಇನ್ನು ಮೀನುಗಳನ್ನು ನೋಡಿದರೆ ಬೆಕ್ಕಿನ ಬಾಯಲ್ಲಿ ನೀರು ಬರದೇ ಇರುವುದೇನು?? ಇಲ್ಲೊಂದು ಬೆಕ್ಕಿಗೂ ತನಗಿಷ್ಟವಾದ ಮೀನನ್ನು ನೋಡಿ ಬಾಯಲ್ಲಿ ನೀರೂರಿಬೇಕು, ಅದು ಮೀನನ್ನು ಹೇಗಾದರೂ ಮಾಡಿ ಪಡೆಯಬೇಕೆಂದು, ಧೈರ್ಯ ಮಾಡಿ ಕಳ್ಳನ ಹಾಗೆ ಹೆಜ್ಜೆ ಇಡುತ್ತಾ ಮೊಸಳೆಯ ಮುಂದೆ ಬರಲು ಸಜ್ಜಾಗಿದೆ.

ಬಹಳ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಗಳನ್ನು ಇಟ್ಟು ಬಂದ ಬೆಕ್ಕು, ಮೊಸಳೆಯ ಮುಂದೆ ಇದ್ದ ಮೀನನ್ನು ಬಹಳ ಚಾಕಚಕ್ಯತೆಯಿಂದ ಬಾಯಿಯಲ್ಲಿ ಕಚ್ಚಿಕೊಂಡು ಅಲ್ಲಿಂದ ಜಾರಿ ಕೊಂಡಿದೆ. ಇನ್ನು ಬೆಕ್ಕು ತನ್ನ ಹತ್ತಿರಕ್ಕೆ ಬಂದು, ತನ್ನ ಮುಂದೆ ಇದ್ದ ಮೀನನ್ನು ಎತ್ತಿಕೊಂಡು ಹೋದರೂ ಸಹಾ ಮೊಸಳೆ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೇ ತನ್ನ ಪಾಡಿಗೆ ತಾನು ಮಲಗಿಕೊಂಡಿದೆ. nature27_12 ಎನ್ನುವ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋ ಶೇರ್ ಆಗಿದ್ದು, ಇದಕ್ಕೆ ಬ್ರೇವ್ ಕ್ಯಾಟ್ ಎನ್ನುವ ಶೀರ್ಷಿಕೆ ನೀಡಲಾಗಿದೆ.

https://www.instagram.com/reel/Ca7itQwlGwt/?utm_medium=copy_link

ವೀಡಿಯೋ ಶೇರ್ ಆದ ಅಲ್ಪ ಕಾಲದಲ್ಲೇ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜನರು ವೀಕ್ಷಣೆಗಳನ್ನು ಮಾಡಿದ್ದಾರೆ. ವೀಡಿಯೋ ಮೆಚ್ಚಿ ಸುಮಾರು ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಲೈಕುಗಳು ಹರಿದು ಬಂದಿವೆ. ವೀಡಿಯೋ ನೋಡಿದ ನೆಟ್ಟಿಗರಿಂದ ಕಾಮೆಂಟ್ ಗಳ ರೂಪದಲ್ಲಿ ಸಹಾ ಪ್ರತಿಕ್ರಿಯೆಗಳು ಹರಿದು ಬಂದಿದ್ದು, ಬೆಕ್ಕಿನ ಧೈರ್ಯವನ್ನು ಮೆಚ್ಚಿ ಅನೇಕರು ಕಾಮೆಂಟ್ ಗಳನ್ನು ಮಾಡಿದ್ದು, ಮೀನಿಗಾಗಿ ಮೊಸಳೆಯ ಭ ಯ ವನ್ನು ಕೂಡಾ ಬಿಟ್ಟ ಬೆಕ್ಕಿನ ಸಾಹಸಕ್ಕೆ ಮೆಚ್ಚಲೇಬೇಕು ಎನ್ನುತ್ತಿದ್ದಾರೆ.

Leave a Comment