Okinawa Lite: ಇದೀಗ ವಾಹನ ಪ್ರಿಯರ ಸಂಪೂರ್ಣ ಗಮನ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಸೆಳೆಯುತ್ತಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಒಂದಕ್ಕಿಂತ ಮತ್ತೊಂದು ಆಕರ್ಷಕ ಹಾಗೂ ವಿಭಿನ್ನವಾಗಿ ಕಾಣುತ್ತಿದೆ. ಇನ್ನು ಭಾರತದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಸ್ಥಾನ ಪಡೆದುಕೊಂಡಿರುವ ಒಕಿನಾವಾ ಲೈಟ್ (Okinawa Lite) ಇತರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ, ಕೈಗೆಟಕುವ ಬೆಲೆಯಲ್ಲಿ ಆಕರ್ಷಕ ಲುಕ್ ಜೊತೆಗೆ ಉತ್ತಮ ಶ್ರೇಣಿಯನ್ನು ನೀಡುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ನೀವು ಇತರ ಸ್ಕೂಟರ್ ಗಳ ರೀತಿ ಲೈಸೆನ್ಸ್ ಅಥವಾ ನೋಂದಣಿಯ ಅಗತ್ಯವಿಲ್ಲ. ಆಕರ್ಷಕ ಹಾಗೂ ಆಧುನಿಕ ಶೈಲಿಯ ಈ ಸ್ಕೂಟರ್ ತಮಗೆ ಉತ್ತಮ ಸವಾರಿ ಅನುಭವವನ್ನು ನೀಡುವಲ್ಲಿ ಯಾವುದೇ ಮಾತಿಲ್ಲ ಎನ್ನಲಾಗುತ್ತಿದೆ. ಇನ್ನು ಈ ಸ್ಕೂಟರ್ ನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ…
ಈ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ 250W ಶಕ್ತಿಯುತ ಮೋಟಾರ್ ಜೊತೆಗೆ 1.25 KWH ಲಿಥಿಯಂ ಐಯಾನ್ ಬ್ಯಾಟರಿಯನ್ನು ಒದಗಿಸಲಾಗಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಗಂಟೆಗೆ 25kmph ವೇಗವನ್ನು ಹಾಗೂ ಸುಮಾರು 60 ಕಿಲೋಮೀಟರ್ ವರೆಗೂ ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ.
ವೇಗದ ಚಾರ್ಜರ್ ಬಳಸಿ ಕೇವಲ ಕೇವಲ 3 ರಿಂದ 4 ಗಂಟೆಗಳಲ್ಲಿ ಸ್ಕೂಟರ್ ನ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಬಹುದು. ಡಿಜಿಟಲ್ ಸ್ಕ್ರೀನ್, LED ಲೈಟ್, USB ಚಾರ್ಜರ್, ಅಲಾಯ್ ವೀಲ್‌ಗಳು ಮತ್ತು ಡಿಸ್ಕ್ ಬ್ರೇಕ್ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೋಡಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ರೂಪಾಂತರದಲ್ಲಿ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನ ಅನ್ ರೋಡ್ ಬೆಲೆ ಸುಮಾರು 71,534 ರೂಗಳು ಇದ್ದು, ಗ್ರಾಹಕರು ಸುಮಾರು 20200 ಡೌನ್ ಪೇಮೆಂಟ್ ಪಾವತಿಸಿ, ಸುಮಾರು 60 ತಿಂಗಳುಗಳವರೆಗೆ ಪ್ರತಿ ತಿಂಗಳು 1280 ರೂಗಳನ್ನು EMI ರೂಪದಲ್ಲಿ ಪಾವತಿಸುವ ಅವಕಾಶವನ್ನು ಸಹ ನೀಡಲಾಗಿದೆ. ಇನ್ನು ಬ್ಯಾಟರಿ ಹಾಗೂ ಮೋಟಾರ್ ಮೇಲೆ 3 ವರ್ಷಗಳ ವ್ಯಾರೆಂಟಿ ಅನ್ನು ಸಹ ನೀಡಲಾಗಿದೆ.