ನಟ ಜೂನಿಯರ್ ಎನ್ ಟಿ ಆರ್ ಅವರು ತ್ರಿಬಲ್ ಆರ್ ಸಿನಿಮಾದ ನಂತರ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಅಲ್ಲದೇ ಎನ್ ಟಿ ಆರ್ ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನದ ಸಿನಿಮಾದಲ್ಲಿ ಸಹಾ ನಾಯಕನಾಗಿ ನಟಿಸುತ್ತಿರುವ ವಿಷಯ ಕೂಡಾ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಯಕಿಯ ಪಾತ್ರದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದೆ.
ಹೌದು, ಕೊರಟಾಲ ಶಿವ ನಿರ್ದೇಶನದ ಎನ್ ಟಿ ಆರ್ ನಾಯಕನಾಗಲಿರುವ ಸಿನಿಮಾದಲ್ಲಿ ಸ್ಟಾರ್ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನು ಈ ಸಿನಿಮಾದಲ್ಲಿ ಎನ್ ಟಿ ಆರ್ ಪಕ್ಕದಲ್ಲಿ ನಾಯಕಿ ಯಾರಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲವನ್ನು ಕೆರಳಿಸಿತ್ತು. ಏಕೆಂದರೆ ಕೆಲವು ಸ್ಟಾರ್ ನಟಿಯರ ಹೆಸರುಗಳು ಈಗಾಗಲೇ ಕೇಳಿ ಬಂದಿದ್ದವು ಆದರೆ ಅಧಿಕೃತವಾಗಿ ಯಾರು ನಾಯಕಿಯಾಗಲಿದ್ದಾರೆ ಎನ್ನುವುದು ಮಾತ್ರ ಎಲ್ಲೂ ಘೋಷಣೆ ಆಗಿರಲಿಲ್ಲ.
ಇದೀಗ ಒಂದು ಹೊಸ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ನಟಿ ಸಾಯಿ ಪಲ್ಲವಿ ಈ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಎನ್ ಟಿ ಆರ್ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಿದ್ದು ನಟಿ ಸಹಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ನಟಿ ಸಾಯಿ ಪಲ್ಲವಿ ಕೊನೆಯದಾಗಿ ನಟಿ ನಾನಿ ಜೊತೆ ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ರಾಣಾ ಜೊತೆಯಲ್ಲಿ ಅಭಿನಯಿಸಿರುವ ವಿರಾಟ ಪರ್ವಂ ಸಿನಿಮಾ ಬಿಡುಗಡೆ ಆಗಬೇಕಿದೆ.