ಕೊರೊನಾ ವ್ಯಾಕ್ಸಿನ್ ಗೂ ಹೃದಯಾಘಾತಕ್ಕೂ ಸಂಬಂಧ ಇದ್ಯಾ? ಹೊರ ಬಿತ್ತು ಅಸಲಿ ಸತ್ಯ! ಇಲ್ಲಿದೆ ಅಧ್ಯಯನ ವರದಿ
Heart Attack : ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಸುದ್ದಿಯಲ್ಲಿ ಹೃದಯಘಾತದ (Heart Attack) ಪ್ರಕರಣಗಳ ಸುದ್ದಿಗಳು ಬಹಳಷ್ಟು ಆತಂಕವನ್ನು ಸೃಷ್ಟಿಸಿದೆ. ಹೃದಯಾಘಾತದಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಎಲ್ಲರಲ್ಲೂ ಈ ಸಮಸ್ಯೆ ಕಾಣಿಸುತ್ತಿದ್ದು, ಇದಕ್ಕಿಂತ ಹಾಗೆ ಹೃದಯಘಾತ ಸಂಭವಿಸಿ ಸಾಯುವವರ ಸಂಖ್ಯೆ ಹಾಗೂ ಸುದ್ದಿಗಳು ಸಾಕಷ್ಟು ಅನುಮಾನಗಳನ್ನು ಸಹಾ ಹುಟ್ಟು ಹಾಕುವಂತೆ ಮಾಡಿದೆ.
ನಿಂತವರು ನಿಂತಲ್ಲೇ, ದಾರಿಯಲ್ಲಿ ನಡೆದು ಹೋಗುವವರು ರಸ್ತೆಯಲ್ಲೇ, ವಾಹನ ಚಾಲಕರು ಕೆಲಸದಲ್ಲಿ ಇರವಾಗಲೇ, ಯುವಕ ಯುವತಿಯರು ಸಹಾ ಕುಣಿದು ಕುಪ್ಪಳಿಸುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆಗಳು ಅನುಮಾನದ ವಾತಾವರಣ ನಿರ್ಮಾಣ ಮಾಡಿದೆ.
ಈ ಅನುಮಾನಗಳಲ್ಲಿ ಕೊರೊನಾ (Corona Virus) ನಂತರದ ಕಾಲದಲ್ಲಿ ಹೃದಯಘಾತ ಹೆಚ್ಚಾಗಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಅದರಲ್ಲೂ ಕೊರೋನಾ ವೈರಸ್ ನಿಂದ ಜನರಿಗೆ ತೊಂದರೆ ಆಗಬಾರದೆಂದು ನೀಡಲಾಗಿರುವ ಲಸಿಕೆಯ (Corona Vaccine) ಅಡ್ಡ ಪರಿಣಾಮದಿಂದ ಹೃದಯಾಘಾತಗಳು ಸಂಭವಿಸುತ್ತಿದೆ ಎನ್ನುವುದು ಅನೇಕರ ವಾದವಾಗಿತ್ತು. ಈ ಬಗ್ಗೆ ಸರಿಯಾದ ಸಂಶೋಧನೆ ನಡೆಸಬೇಕೆಂದು ಅವರ ಆಗ್ರಹವಾಗಿತ್ತು.
ಇಂತಹದೊಂದು ಅನುಮಾನಗಳು, ಪ್ರಶ್ನೆಗಳು ಕಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಈ ವಿಚಾರವಾಗಿ ಸಂಶೋಧನೆಯನ್ನು ನಡೆಸಿದೆ. ಇತ್ತೀಚಿನ ವರದಿಗಳ ಪ್ರಕಾರ ಹೃದಯಘಾತದ ಅಪಾಯ ಹಾಗೂ ಕೊರೊನಾ ಲಸಿಕೆಯ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವ ಮಾಹಿತಿ ಹೊರಬಂದಿದೆ.
ಅಲ್ಲದೇ ಭಾರತದಲ್ಲಿ ತಯಾರಿಸಲ್ಪಟ್ಟ ಕೊರೊನಾ ವೈರಸ್ ಲಸಿಕೆ ಬಹಳ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಪಿ ಎಲ್ ಓ ಎಸ್ ವನ್ ಜರ್ನಲ್ ನ ವರದಿ ಪ್ರಕಟವಾಗಿದ್ದು ಭಾರತದ ಲಸಿಕೆಗಳು ಸುರಕ್ಷಿತವಾಗಿದ್ದು, ಹೃದಯ ಘಾತಕ್ಕೂ ಅವುಗಳಿಗೂ ಇಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಇದೇ ವೇಳೆ ಕರೋಧ ವಿರುದ್ಧ ಲಸಿಕೆ ಪಡೆದವರಲ್ಲಿ ಹೃದಯ ಘಾತದಿಂದ ಸಂಭವಿಸುವ ಸಾವುಗಳು ಕಡಿಮೆ ಎಂದು ಸಹಾ ಹೇಳಲಾಗಿದೆ.
ಈ ಕುರಿತಾಗಿ ಅಧ್ಯಯನ ನಡೆಸಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಜಿ ಬಿ ಪಂತ್ ಆಸ್ಪತ್ರೆಯ ಮೋಹಿತ್ ಗುಪ್ತಾ ತಮ್ಮ ಹೇಳಿಕೆ ನೀಡುತ್ತಾ, ಲಸಿಕೆಯನ್ನು ಪಡೆದ ನಂತರ ತೀವ್ರವಾದ ಹೃದಯ ಸ್ನಾಯುವಿನ ಊತ ಕಂಡು ಬಂದಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ ಎಂದಿದ್ದಾರೆ.
ಇನ್ನು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ಗಮನಿಸಿದಾಗ ಅವರ ವಯಸ್ಸು, ಮಧುಮೇಹದ ಪ್ರಮಾಣ ಹಾಗೂ ಧೂಮಪಾನ ಗಳಿಂದಾಗಿ ಅವರಲ್ಲಿ ಹೃದಯಾಘಾತದ ಅಪಾಯವು ಹೆಚ್ಚು ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಅವರ ಈ ಮಾಹಿತಿ ಅನೇಕರಿಗೆ ರಿಲೀಫ್ ನೀಡಿದೆ.