ನಿಮ್ಮ ಅಂಗೈಯಲ್ಲಿ ಈ ವಿಶೇಷ ಗುರುತುಗಳಿದ್ದರೆ ಶಿವನ ಆಶೀರ್ವಾದವನ್ನು ಪಡೆಯುತ್ತೀರಿ !

Featured-Articles
55 Views

ನಿಮ್ಮ ಅಂಗೈಯಲ್ಲಿ ಈ ವಿಶೇಷ ಗುರುತುಗಳಿದ್ದರೆ ಶಿವನ ಆಶೀರ್ವಾದವನ್ನು ಪಡೆಯುವಿರಿ
ಹಾಗಾದರೆ ಆ ವಿಶೇಷ ಗುರುತುಗಳು ಯಾವುವು ಎಂದು ತಿಳಿಯೋಣ ಬನ್ನಿ..

ಅಂಗೈ ರೇಖೆಗಳಲ್ಲಿರುವ ಕೆಲವೊಂದು ವಿಶೇಷ ಗುರುತುಗಳು ವ್ಯಕ್ತಿಯನ್ನು ಅದೃಷ್ಟಶಾಲಿಯನ್ನಾಗಿ ಮಾಡುವುದರ ಜೊತೆಗೆ ಶಿವನ ಅನುಗ್ರಹವು ಅವರ ಮೇಲಿರುತ್ತದೆ.ಆ ವಿಶೇಷ ಗುರುತುಗಳು ಯಾವುವು ಎನ್ನುವುದರ ಮಾಹಿತಿ ಇಲ್ಲಿದೆ.

ಹಸ್ತಮುದ್ರಿಕಾ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಅನೇಕ ಗುರುತುಗಳಿರುತ್ತವೆ.ಇವು ನಮ್ಮ ಜೀವನದ ರಹಸ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.ಈ ಗುರುತುಗಳು ನಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಅಂಗೈ ರೇಖೆಗಳಲ್ಲಿರುವ ಕೆಲವೊಂದು ವಿಶೇಷ ಗುರುತು ಗಳು ವ್ಯಕ್ತಿಯನ್ನು ಅದೃಷ್ಟಶಾಲಿಯನ್ನಾಗಿ ಮಾಡುವುದರ ಜೊತೆಗೆ ಶಿವನ ಅನುಗ್ರಹವು ಅವರ ಮೇಲಿರುತ್ತದೆ.ಇಂತಹ ವ್ಯಕ್ತಿಗಳು ಕಡಿಮೆ ಶ್ರಮದಿಂದ ಉತ್ತಮ ಯಶಸ್ಸನ್ನು ಗಳಿಸುತ್ತಾರೆ.ಈ ಗುರುತುಗಳು ಕೆಲವೇ ಕೆಲವು ಜನರ ಅಂಗೈಯಲ್ಲಿ ಮಾತ್ರ ಕಂಡುಬರುತ್ತದೆ ಶಿವನ.ಅನುಗ್ರಹವನ್ನು ಪಡೆಯುವ ಈ ವಿಶೇಷ ಗುರುತಿನ ಬಗ್ಗೆ ತಿಳಿಯೋಣ ಬನ್ನಿ..

1 )ತ್ರಿಶೂಲದ ಗುರುತು

ತ್ರಿಶೂಲವನ್ನು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ.ಹಸ್ತಮುದ್ರಿಕ ಶಾಸ್ತ್ರದ ಪ್ರಕಾರ ತ್ರಿಶೂಲದ ಗುರುತಿರುವ ಅಂಗೈ ರೇಖೆಯು ಶಿವನ ಕೃಪೆಯಾಗಿದೆ.ಭಾಗ್ಯ ರೇಖೆ ಅಥವಾ ಮಸ್ತದ ರೇಖೆಯಲ್ಲಿ ತ್ರಿಶೂಲದ ಗುರುತಿದ್ದರೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಹಾಗೂ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ.

2 )ಡಮರುಗದ ಗುರುತು

ಶಿವನ ತ್ರಿಶೂಲ ದಲ್ಲಿ ಡಮರು ಇರುವುದನ್ನು ನಾವು ಕಾಣಬಹುದು.ಹಸ್ತಮುದ್ರಿಕ ಶಾಸ್ತ್ರದಲ್ಲಿ ಈ ಡಮರುಗವು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.ಈ ಗುರುತು ಕೆಲವೇ ಕೆಲವು ಜನರ ಅಂಗೈಯಲ್ಲಿ ಕಾಣಬಹುದಾಗಿದ್ದು ,ಈ ಗುರುತು ಹೊಂದಿರುವವರು ವಿಶೇಷವಾಗಿ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ.ಈ ಡಮರುಗದ ಗುರುತು ಗುರು ಪರ್ವತದ ಮೇಲಿದ್ದರೆ ಅವರು ಉನ್ನತ ಸ್ಥಾನವನ್ನು ಪಡೆಯುತ್ತಾರೆ,ಇಂತಹವರಿಗೆ ಎಂದಿಗೂ ಹಣದ ಕೊರತೆಯಾಗದು.

3 )ಚಂದ್ರನ ಗುರುತು

ಶಿವನ ಶಿರವನ್ನು ಚಂದ್ರನು ಅಲಂಕರಿಸಿರುವುದರಿಂದ ಶಿವನಿಗೆ ಚಂದ್ರಶೇಖರ ಎನ್ನುವ ಹೆಸರು ಬಂತು.
ಈ ಚಂದ್ರನ ಗುರುತು ಅಂಗೈಯಲ್ಲಿ ರೂಪುಗೊಂಡಿದ್ದರೆ ಬಹಳ ಶುಭ ಹಾಗೂ ಜೀವನದುದ್ದಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ.ಈ ಗುರುತು ಯಾರ ಅಂಗೈಯಲ್ಲಿ ಕಂಡು ಬರುತ್ತದೋ ಅವರ ಅಳಿಯಂದಿರೊಂದಿಗೆ ಅವರ ಸಂಬಂಧವು ಉತ್ತಮವಾಗಿರುತ್ತದೆ.ಇಂಥವರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ.ಇಂತಹ ವ್ಯಕ್ತಿಗಳು ಮೆದುಳಿಗಿಂತ ಇದು ಹೆಚ್ಚು ವೇಗವಾಗಿರುತ್ತಾರೆ.ಇವರಿಗೆ ತೊಂದರೆಗಳು ಯಾವುದೂ ದೊಡ್ಡದಲ್ಲ ಅಲ್ಲದೆ ಇವರು ಯಾವುದೇ ಕೆಲಸವನ್ನು ಮಾಡಲು ಹಿಂದೆ ಸರಿಯುವುದಿಲ್ಲ.

4)ಕಮಲದ ಗುರುತು

ಕೈಯಲ್ಲಿ ಕಮಲದ ಗುರುತಿರುವುದು ಬಹಳ ವಿರಳ ,ಹೆಚ್ಚಾಗಿ ಈ ಗುರುತು ಆಡಳಿತಗಾರರ ಕೈಯಲ್ಲಿ ಇರುತ್ತದೆ.
ಇಂತಹ ವ್ಯಕ್ತಿಗಳು ಬಡ ಕುಟುಂಬದಲ್ಲಿ ಜನಿಸಿದರೆ ಕಠಿಣ ಪರಿಶ್ರಮದ ಮೂಲಕ ಗೌರವ ಮತ್ತು ಸಂಪತ್ತು ಪಡೆಯುತ್ತಾರೆ. ಈ ಗುರುತು ಗುರು ಪರ್ವತ , ಜೀವನ ರೇಖೆ ಮತ್ತು ಶುಕ್ರ ಪರ್ವತದಲ್ಲಿ ಕಂಡು ಬಂದರೆ ಅದನ್ನು ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ.ಇಂತಹ ವ್ಯಕ್ತಿಗಳು ಹೆಚ್ಚು ಆಧ್ಯಾತ್ಮಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ.

5 ) ಧ್ವಜದ ಗುರುತು

ಅಂಗೈಯಲ್ಲಿ ಧ್ವಜದ ಗುರುತ್ತಿದ್ದರೆ ಹಸ್ತರೇಖಾ ಶಾಸ್ತ್ರದ ಪ್ರಕಾರ ಶಿವನ ಕೃಪೆಯು ಅವರ ಮೇಲಿರುತ್ತದೆಯಂತೆ.ಇಂತಹ ವ್ಯಕ್ತಿಗಳಿಗೆ ಯಾವ ಕೆಲಸವೂ ಕಷ್ಟಕರವಲ್ಲ ಮತ್ತು ಯಶಸ್ಸು ಇವರ ಬೆನ್ನ ಹಿಂದೆಯೇ ಇರುತ್ತದೆ.ಇವರು ಮಾನಸಿಕವಾಗಿ ಪ್ರಬಲವಾಗಿರುತ್ತಾರೆ.ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.ವಿಶೇಷವಾಗಿ ಇವರು ಹೆಚ್ಚಿನ ಸಮಯವನ್ನು ಯೋಗ ಮತ್ತು ಧ್ಯಾನದಲ್ಲಿ ಕಳೆಯುತ್ತಾರೆ. ಇಂತಹ ವ್ಯಕ್ತಿಗಳು ವೃತ್ತಿ ಜೀವನದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ.

ಧನ್ಯವಾದಗಳು.

Leave a Reply

Your email address will not be published. Required fields are marked *