Marriage certificate: ಹೊಸದಾಗಿ ಮದುವೆಯಾಗುತ್ತಿರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿಗೆ!

Written by Sanjay A

Published on:

---Join Our Channel---

Marriage certificate: umಮದುವೆ ಎನ್ನುವುದು ಆ ದೇವರು ಮೊದಲೇ ಯಾರಿಗೆ ಯಾರೂ ಜೋಡಿ ಆಗಬೇಕು ಎನ್ನುವುದನ್ನು ಅವರ ಹಣೆಯಲ್ಲಿ ಬರೆದು ಕಳುಹಿಸುತ್ತಾನೆ ಎಂದು ಹೇಳಲಾಗುತ್ತದೆ. ಇಬ್ಬರೂ ಮದುವೆಯಾಗಬೇಕು ಎಂದರೆ, ಎರಡು ಕುಟುಂಬಗಳ ಒಪ್ಪಿಗೆ ಬಹಳ ಮುಖ್ಯ, ಅವರ ಕಂಕಣ ಭಾಗ್ಯ, ಜಾತಕ ಎಲ್ಲವನ್ನೂ ಪರಿಶೀಲಿಸಿದ ನಂತರವೇ ಮದುವೆ ಮಾಡಲಾಗುತ್ತದೆ. ಇನ್ನು ನಮ್ಮ ಭಾರತ ದೇಶದಲ್ಲಿ ಮದುವೆಗೆ ಸಾಕಷ್ಟು ಮಹತ್ವ ನೀಡಲಾಗುತ್ತದೆ. 

ಇನ್ನು ಮದುವೆಯಾದ ನಂತರ ದಂಪತಿಗಳು ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಾರೆ. ಇಬ್ಬರೂ ಗಂಡ ಹೆಂಡತಿ ಎಂದು ಗುರುತಿಸಿಕೊಳ್ಳಲು ಸರ್ಕಾರದಿಂದ ನೀಡಲಾಗುವ ಸರ್ಟಿಫಿಕೇಟ್ ಇದಾಗಿದೆ. ಇನ್ನು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಈ ಸರ್ಟಿಫಿಕೇಟ್ ಬಹಳ ಮುಖ್ಯವಾಗುತ್ತದೆ. ಹೌದು, ಮದುವೆಯಾದ ಪ್ರತಿಯೊಂದು ಜೋಡಿ ಸಹ ಮ್ಯಾರೇಜ್ ಸರ್ಟಿಫಿಕೇಟ್ ಹೊಂದಿರುವುದು ಬಹಳ ಮುಖ್ಯ.

ಬ್ಯಾಂಕ್ ಗಳಲ್ಲಿ ಗಂಡ ಹಾಗೂ ಹೆಂಡತಿ ಜಂಟಿ ಖಾತೆ ತೆರೆಯಲು, ಅಥವಾ ಪಾಸ್ಪೋರ್ಟ್ ಮತ್ತು ವೀಸಾ ಪಡೆಯಲು, ಹಾಗೆ ಸಂಭದಗಳಲ್ಲಿ ವಂಚನೆಗಳಾದಾಗ ಅಥವಾ ವಿಚ್ಛೇಧನ ಪಡೆಯಲು ಈ ಮ್ಯಾರೇಜ್ ಸರ್ಟಿಫಿಕೇಟ್ ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.

ಮೊದಲೆಲ್ಲಾ ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಪಡೆಯಲು ರಿಜಿಸ್ಟರ್ ಆಗಿಸ್ ಗೆ ಭೇಟಿ ನೀಡಿ ಮೊದಲೇ ನೊಂದಾಯಿಸಿಕೊಳ್ಳಬೇಕಾಗಿತ್ತು. ಆದರೆ ಇದೀಗ ನೀವು ಸುಲಭವಾಗಿ ಮನೆಯಲ್ಲಿ ಕುಳಿತುಕೊಂಡು ಆನ್ ಲೈನ್ ಮೂಲಕ ಮ್ಯಾರೇಜ್ ಸರ್ಟಿಫಿಕೇಟ್ (Marriage Certificate)  ಪಡೆಯಬಹುದಾಗಿದೆ.

ಹೌದು, ರಾಜ್ಯ ಸರ್ಕಾರದ https://edistrict.delhigovt.nic.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ನೀಡಿ ಲಾಗಿನ್ ಮಾಡಿ. ನಂತರ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡಿ ನೊಂದಾಯಿಸಿಕೊಳ್ಳಿ. ನಂತರ ಮದುವೆ ಕಾರ್ಡ್, 4 ಪಾಸ್ ಪೋರ್ಟ್ ಸೈಜ್ ಫೋಟೋ, ಹಾಗೂ ಗಂಡ ಹೆಂಡತಿಯ ಜನನ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ ಮೆಲ್ ಐಡಿಗೆ ಸ್ವೀಕೃತ ಚೀಟಿಯನ್ನು ಕಳುಹಿಸಲಾಗುತ್ತದೆ. ಇನ್ನು ಈ ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಪಡೆಯಲು 10000 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Leave a Comment