Ujwala Scheme: ಕೇಂದ್ರ ಸರ್ಕಾರವು ದೇಶದ ಜನರ ಆರ್ಥಿಕ ಸಮಸ್ಯೆಯನ್ನು ಕೊಂಚ ಕಡಿಮೆ ಮಾಡುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಕೇಂದ್ರ ಸರ್ಕಾರವು ದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಉಚಿತವಾಗಿ ಎಲ್ ಪೀ ಜಿ ಗ್ಯಾಸ್ ಸಿಲೆಂಡರ್ (LPG Gas Cylinder) ಅನ್ನು ಉಜ್ವಲ ಯೋಜನೆಯ ಅಡಿಯಲ್ಲಿ ವಿತರಿಸಲಾಗುತ್ತಿದೆ. ಇನ್ನು ಎಲ್ ಪೀ ಜಿ ಗ್ಯಾಸ್ ಸಿಲೆಂಡರ್ (LPG Gas Cylinder) ಅನ್ನು ಸಬ್ಸಿಡಿಯಲ್ಲಿ ಜನರಿಗೆ ನೀಡಲಾಗುತ್ತಿದ್ದು, ಸಬ್ಸಿಡಿಯ ಮೊತ್ತ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಇನ್ನು ಸದ್ಯ ದೇಶದಲ್ಲಿ ಎಲ್ಲಾ ವಸ್ತುಗಳ ಮೇಲಿನ ದರದಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಜನರಿಗೆ ಕೊಂಚ ನೆಮ್ಮದಿ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಎಲ್ ಪೀ ಜಿ ಗ್ಯಾಸ್ ಸಿಲೆಂಡರ್ (LPG Gas Cylinder) ನ ಬೆಲೆಯನ್ನು ಕಡಿಮೆ ಗೊಳಿಸಿದೆ. ಈ ಹಿಂದೆ ಎಲ್ ಪೀ ಜಿ ಗ್ಯಾಸ್ ಸಿಲೆಂಡರ್ ನ ಬೆಲೆ ಸುಮಾರು 1100 ರೂಗಳು ಇದ್ದು, ಇದೀಗ ಕೇವಲ 900 ರೂಗಳಿಗೆ ಜನರು LPG ಗ್ಯಾಸ್ ಸಿಲೆಂಡರ್ ಪಡೆಯಬಹುದಾಗಿದೆ.
ಇನ್ನು ಇದೀಗ ಇದೆ ವೇಳೆ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಮಾಹಿತಿ ನೀಡಿದೆ. ಇದೀಗ ದೇಶದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ, ಇನ್ನು ರೇಶನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಮುಂತಾದ ಎಲ್ಲಾ ದಾಖಲೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಇದೀಗ ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಲ್ಲಿ ಸಹ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಇದೀಗ ಜನರು ತಮ್ಮ ಎಲ್ ಪೀ ಜಿ (LPG) ಸಂಪರ್ಕಕ್ಕೂ ಸಹ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಎನ್ನುವ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಆನ್ ಲೈನ್ ಮೂಲಕ ಅಥವಾ ತಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ (Gas Agency) ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.
ಒಂದು ವೇಳೆ ನೀವು ನಿಮ್ಮ ಗ್ಯಾಸ್ ಸಂಪರ್ಕದ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವಲ್ಲಿ ನೀವು ವಿಫಲರಾದರೆ ನೀವು ಸರ್ಕಾರದ ಈ ಉಜ್ವಲ ಯೋಜನೆಯ ಉಚಿತ ಎಲ್ ಪೀ ಜಿ (LPG Gas Cylinder) ಇಂದ ವಂಚಿತರಾಗಿತ್ತೀರಿ.