ನೀತಾ ಅಂಬಾನಿಯ ವಿಮಾನ ಅದು ಹಾರುವ ಅರಮನೆ! ಅತ್ಯದ್ಭುತ ಸೌಲಭ್ಯಗಳ ವಿಮಾನದ ಬೆಲೆ ಶಾಕಿಂಗ್!

Written by Soma Shekar

Updated on:

---Join Our Channel---

Neeta Ambani Plane: ರಿಲಯನ್ಸ್ ನ (Reliance) ದಿಗ್ಗಜ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ (Mukhesh Ambani) ಅವರ ಶ್ರೀಮಂತಿಕೆಯ ವಿಚಾರದ ಬಗ್ಗೆ ಪ್ರತ್ಯೇಕವಾಗಿ ಹೇಳುವಂತಹ ಅಗತ್ಯವೇ ಇಲ್ಲ. ಅಂಬಾನಿ ಕುಟುಂಬಕ್ಕೆ ಇಡೀ ಜಗತ್ತಿನಲ್ಲಿ ಒಂದು ವಿಶೇಷವಾದ ಪರಿಚಯ ಹಾಗೂ ಸ್ಥಾನ ಮಾನವಿದೆ. ಅಲ್ಲದೇ ಅಂಬಾನಿ ಕುಟುಂಬದ ಸದಸ್ಯರು ಸಹಾ ಆಗಾಗ ಒಂದಲ್ಲಾ ಒಂದು ವಿಚಾರವಾಗಿ ಮಾದ್ಯಮದ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದುಂಟು. ಅದರಲ್ಲೂ ವಿಶೇಷವಾಗಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಶಾರಾಮೀ ಜೀವನ ಶೈಲಿಯಿಂದಾಗಿಯೇ ಎಲ್ಲರ ಗಮನವನ್ನು ಸೆಳೆಯುತ್ತಾರೆ.

ನೀತಾ ಅಂಬಾನಿ (Neeta Ambani) ಅವರು ಬಾಲಿವುಡ್ ನ ಯಾವುದೇ ಸ್ಟಾರ್ ನಟಿಯರಿಗೇನೂ ಕಡಿಮೆಯೇನಿಲ್ಲ ಎನ್ನುವ ಮಟ್ಟಕ್ಕೆ ಹೆಸರು, ಜನಪ್ರಿಯತೆ ಹಾಗೂ ಗೌರವವನ್ನು ಪಡೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ಪತ್ನಿಯಾಗಿ, ಏಷ್ಯಾದ ಪ್ರಮುಖ ಉದ್ಯಮಿ ಮಹಿಳೆಯಾಗಿಯೂ ಕೂಡಾ ನೀತಾ ಅಂಬಾನಿ ತನಗಾಗಿ ಒಂದು ಪ್ರತ್ಯೇಕ ಹೆಸರನ್ನು ಪಡೆದುಕೊಂಡಿದ್ದಾರೆ. ನೀತಾ ಅವರು ತಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುವೂ ಸಹಾ ದುಬಾರಿ ಹಾಗೂ ಐಶಾರಾಮೀ (Luxurious) ತನಕ್ಕೆ ಅತ್ಯುತ್ತಮ ಉದಾಹರಣೆಗಳೇ ಆಗಿವೆ.

ನೀತಾ ಅಂಬಾನಿ ಅವರು ಪ್ರಯಾಣಿಸುವ ವಿಮಾನ ಕೂಡಾ ಒಂದು ಐಶಾರಾಮೀ ವಿಮಾನವೇ ಆಗಿದ್ದು, ಇದನ್ನು ಅವರ ಪತಿ ಮುಖೇಶ್ ಅಂಬಾನಿ, ನೀತಾ ಅವರ 44 ನೇ ಜನ್ಮದಿನಕ್ಕೆ ಕೊಟ್ಟಂತಹ ವಿಶೇಷ ಉಡುಗೊರೆ ಆಗಿದೆ. ಇದು ಸಾಮಾನ್ಯವಾದ ವಿಮಾನ ಖಂಡಿತ ಅಲ್ಲ. ಬಹಳ ವಿಶೇಷವಾಗಿ ಹಾಗೂ ಆಧುನಿಕ ಸೌಲಭ್ಯಗಳಿಂದ ವಿನ್ಯಾಸಗೊಳಿಸಲಾಗಿರುವ ಅತ್ಯಾಕರ್ಷಕ ವಿಮಾನವಾಗಿದೆ. ವರದಿಗಳ ಪ್ರಕಾರ ನೀತಾ ಅವರ ಈ ವಿಶೇಷವಾದ ಏರ್ ಬಸ್ 319 (Air Bus 319) ಕಾರ್ಪೊರೇಟ್ ನ ಬೆಲೆ ಬರೋಬ್ಬರಿ 242 ಕೋಟಿ ರೂಪಾಯಿಗಳು ಎನ್ನಲಾಗಿದೆ.

ಮುಖೇಶ್ ಅಂಬಾನಿ ಈ ವಿಮಾನದಲ್ಲಿ ತಮ್ಮ ಪತ್ನಿಗೆ ಅಗತ್ಯವಿರುವಂತಹ ಪ್ರತಿಯೊಂದು ಆಧುನಿಕ ಸೌಲಭ್ಯಗಳು ಲಭ್ಯವಿರುವಂತೆ ಸಾಕಷ್ಟು ಎಚ್ಚರವನ್ನು ವಹಿಸಿದ್ದಾರೆ. ಈ ಫ್ಲೈಟ್ ನಲ್ಲಿ ಪಾರ್ಟಿ ಏರಿಯಾ (party area), ಲೈವ್ ಬಾರ್(live bar), ಜಕೂಸಿ, ಶವರ್ ಹೀಗೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ. ಇದಲ್ಲದೇ ಅವಶ್ಯಕತೆ ಇದ್ದರೆ ಸಭೆ ನಡೆಸಲು, ಮೀಟಿಂಗ್ ಹಾಲ್ ಇದ್ದು, ಅಲ್ಲೇ ಅವರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡುವ ಅವಕಾಶ ಇದ್ದು, ಅತಿಥಿಗಳ ಜೊತೆ ಅಲ್ಲೇ ಊಟ ಮಾಡುವುದಕ್ಕೆ ತಕ್ಕ ಹಾಗೆ ಮೀಟಿಂಗ್ ಹಾಲ್ ಅನ್ನು ವಿನ್ಯಾಸ ಮಾಡಲಾಗಿದೆ.

ಈ ವಿಶೇಷ ವಿಮಾನದಲ್ಲಿ ಆಧುನಿಕ ಮ್ಯೂಸಿಕ್ ಸಿಸ್ಟಂ, ಗೇಮಿಂಗ್ ಏರಿಯಾ, ಸ್ಯಾಟಲೈಟ್ ಟಿವಿ, ವೈರ್ ಲೆಸ್ ಕಮ್ಯುನಿಕೇಷನ್ ಸಿಸ್ಟಂ ಅನ್ನು ಸಹಾ ಅಳವಡಿಸಲಾಗಿದೆ‌. ವಿಶ್ರಾಂತಿ ಪಡೆಯಲು ಅಥವಾ ಮಲಗಿಕೊಳ್ಳಲು ಅನುಕೂಲವಾಗುವಂತೆ ಒಂದು ಅಚ್ಚು ಕಟ್ಟಾದ ಬೆಡ್ ರೂಂ ಅನ್ನು ಈ ವಿಮಾನದಲ್ಲಿ ವಿನ್ಯಾಸಗೊಳಿಸಲಾಗಿದೆ. ಒಂದರ್ಥದಲ್ಲಿ ನೀತಾ ಅಂಬಾನಿ ಅವರ ಈ ಫ್ಲೈಟ್ ಅನ್ನು ನಾವು ಒಂದು ಹಾರುವ ಪುಟ್ಟ ಅರಮನೆ ಎಂದರೆ ಖಂಡಿತ ಇದು ಅತಿಶಯೋಕ್ತಿ ಏನಲ್ಲ.

Leave a Comment