ರಾಮ್ ಚರಣ್ ಜೊತೆ ಆಸ್ಕರ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡೋಕೆ Jr.NTR ಗೆ ಇಷ್ಟ ಇರಲಿಲ್ವಾ? ಹೊರ ಬಿತ್ತು ಶಾಕಿಂಗ್ ಸತ್ಯ

Entertainment Featured-Articles Movies News
31 Views

Natu Natu Song: ಎಸ್ ಎಸ್ ರಾಜಮೌಳಿ ( S S Rajamouli) ತಮ್ಮ ತ್ರಿಬಲ್ ಆರ್ (RRR) ಸಿನಿಮಾ ಮೂಲಕ ಇಡೀ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯುವಂತೆ ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾ ತ್ರಿಬಲ್ ಆರ್ ನ ನಾಟು ನಾಟು ಹಾಡು ಮೊದಲಿಗೆ ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿಯನ್ನು ಗೆದ್ದು, ಅನಂತರ ಆಸ್ಕರ್ ರೇಸ್ ಗೆ ಎಂಟ್ರಿಯನ್ನು ನೀಡಿತ್ತು. ಆಸ್ಕರ್ ನಲ್ಲಿ ಸಹಾ ನಾಟು ನಾಟು ಹಾಡು (Natu Natu song Oscar) ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡು ಹೊಸ ಇತಿಹಾಸವನ್ನು ಬರೆಯಿತು. ಅಲ್ಲದೇ ಆಸ್ಕರ್ 95 ನ ವೇದಿಕೆ ಮೇಲೆ ಕೂಡಾ ನಾಟು ನಾಟು ಹಾಡನ್ನು ಪ್ರದರ್ಶನವನ್ನು ಮಾಡಲಾಯಿತು. ಆಸ್ಕರ್ ವೇದಿಕೆ ಮೇಲೆ ನಾಟು ನಾಟು ಡ್ಯಾನ್ಸ್ ನೋಡಿ ಬಹಳಷ್ಟು ಜನರು ಖುಷಿ ಪಟ್ಟರು.

ಆದರೆ ಇದೇ ವೇಳೆ ಮತ್ತೊಂದು ಕಡೆ ಒಂದು ಅಸಮಾಧಾನ ಸಹಾ ಹರಿದಾಡಿತ್ತು. ಹೌದು, ಸೂಪರ್ ಹಿಟ್ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಮತ್ತು ಪ್ರಶಸ್ತಿಗಳನ್ನು ಪಡೆದ ನಾಟು ನಾಟು ಹಾಡನ್ನು ಆಸ್ಕರ್ ವೇದಿಕೆ ಮೇಲೆ ಸಿನಿಮಾದ ನಾಯಕರಾದ ರಾಮ್ ಚರಣ್ (Ram Charan) ಮತ್ತು ಜೂ ಎನ್ ಟಿ ಆರ್ (Jr NTR) ಅವರೇ ಮಾಡಬೇಕಿತ್ತು, ಅದರ ಬದಲಾಗಿ ಆ ಹಾಡನ್ನು ಹಾಡಿದ ಗಾಯಕ ಬಿಟ್ಟು ಉಳಿದವರೆಲ್ಲರೂ ಸಹಾ ವಿದೇಶಿಯರೇ ಆಗಿದ್ದಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆ, ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹೊಸ ಜರ್ನಿ ಆರಂಭಿಸಿದ ಮಂಜು ಪಾವಗಡ! 2ನೇ ಮದುವೆ ನಂತರ ಮುಂದೇನು?

ಇದೀಗ ಅಂದು ಆಸ್ಕರ್ ವೇದಿಕೆ (Oscar Stage) ಮೇಲೆ ಈ ಹಾಡಿಗೆ ಹೆಜ್ಜೆ ಹಾಕಲು ತ್ರಿಬಲ್ ಆರ್ ಸಿನಿಮಾದ ನಾಯಕರಾಗಿರುವ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಏಕೆ ಬರಲಿಲ್ಲ ಎನ್ನುವ ಕಾರಣವು ಹೊರ ಬಂದಿದ್ದು, ಇದೀಗ ಸುದ್ದಿಯಾಗಿ ಹರಿದಾಡಿದೆ. ಅಲ್ಲದೇ ಈ ನಟರು ಡ್ಯಾನ್ಸ್ ಮಾಡದೇ ಇದ್ದುದ್ದಕ್ಕೆ ಅಸಲಿ ಕಾರಣ ತಿಳಿದು ಸಿನಿಮಾ ಪ್ರೇಮಿಗಳು ಖಂಡಿತ ಶಾ ಕ್ ಅಗ್ತಿದ್ದಾರೆ. ಹಾಗಾದರೆ ಏನಿದು ಅಸಲಿ ವಿಷಯ ಎನ್ನುವ ಕುತೂಹಲ ಈಗ ನಿಮಗೂ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಆಸ್ಕರ್ ಸಮಾರಂಭದ ವೇದಿಕೆಯ ಮೇಲೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲು ನಟ ರಾಮ್ ಚರಣ್ ಅವರು ಬಹಳ ಉತ್ಸುಕರಾಗಿದ್ದರು ಎನ್ನಲಾಗಿದೆ. ಆದರೆ ಜೂ. ಎನ್ ಟಿ ಆರ್ ಇದರ ಬಗ್ಗೆ ಆಸಕ್ತಿ ತೋರಲಿಲ್ಲ ಎನ್ನಲಾಗಿದೆ. ರಾಮ್ ಚರಣ್ (Actor Ram Charan) ಅವರು ಈ ಹಿಂದೆ ವೇದಿಕೆಯ ಮೇಲೆ ಪರ್ಫಾಮ್ ಮಾಡೋಕೆ ಹೆಚ್ಚಿನ ಪೂರ್ವ ಅಭ್ಯಾಸದ ಅಗತ್ಯ ವಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರಾದರೂ, ಅವರು ಡ್ಯಾನ್ಸ್ ಮಾಡಲು ಬಹಳ ಉತ್ಸುಕರಾಗಿದ್ದರು ಎನ್ನುವುದು ಸತ್ಯ.

ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಈ ಹಾಡಿಗಾಗಿ ಯುಎಸ್ಎ ನಲ್ಲಿ ಸಾಕಷ್ಟು ಕವರೇಜ್ ಅನ್ನು ಪಡೆದಿದ್ದರು. ಜೂ. ಎನ್ ಟಿ ಆರ್ (Actor Jr NTR ) ಅವರು ಮತ್ತೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ, ಮತ್ತೊಮ್ಮೆ ಡ್ಯಾನ್ಸ್ ಕುರಿತಾಗಿ ಜನರು ಹೋಲಿಕೆಗಳನ್ನು ಮಾಡುವುದು ಬೇಡ ಎನ್ನುವ ಕಾರಣಕ್ಕೆ ಅವರು ಡ್ಯಾನ್ಸ್ ಮಾಡಲು ಸಿದ್ಧವಿರಲಿಲ್ಲ ಎನ್ನಲಾಗಿದೆ. ಇನ್ನು ಮತ್ತೊಂದು ಸಂದರ್ಶನದಲ್ಲಿ ರಾಮ್ ಚರಣ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದವರು ನಮಗಿಂತ ಚೆನ್ನಾಗಿ ಮಾಡಿದ್ದಾರೆ ಎನ್ನುವ ಮಾತುಗಳನ್ನು ಸಹಾ ಹೇಳಿದ್ದರು.

Leave a Reply

Your email address will not be published. Required fields are marked *