NASA ಗೆ ದೊರೆತ ಸೂರ್ಯನ ತಮ್ಮ: 60 ಕೋಟಿ ವರ್ಷ ವಯಸ್ಸು, ಭೂಮಿಯ ರಹಸ್ಯಗಳು ಹೊರ ಬೀಳಲಿವೆ.

Written by Soma Shekar

Published on:

---Join Our Channel---

ಯುಎಸ್ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಸಹೋದರ ಅಥವಾ ಸೂರ್ಯನ ತಮ್ಮ ಬಾಹ್ಯಾಕಾಶದಲ್ಲಿ ದೊರೆತಿದ್ದಾನೆ. ಹೌದು ಇಲ್ಲಿ ಸೂರ್ಯನ ಸಹೋದರ ಎಂದರೆ ಇದೊಂದು ನಕ್ಷತ್ರವಾಗಿದ್ದ ಇದು ಕೇವಲ 60 ಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರ ಎನ್ನಲಾಗಿದೆ. ವಿಜ್ಞಾನಿಗಳು ಈ ನಕ್ಷತ್ರದ ಸಹಾಯದಿಂದ ಭೂಮಿಯ ಮೇಲೆ ಜೀವನ ಹೇಗೆ ಉದ್ಭವಿಸಿತು ಎನ್ನುವ ವಿಚಾರವನ್ನು ತಿಳಿಯಬಹುದು ಎಂದು ನಂಬಿದ್ದಾರೆ. ಈ ಯುವ ನಕ್ಷತ್ರಕ್ಕೆ ವಿಜ್ಞಾನಿಗಳು ಕಪ್ಪ 1 ಸೆಟಿ ಎನ್ನುವ ಹೆಸರನ್ನು ಇಟ್ಟಿದ್ದಾರೆ ಹಾಗೂ ಈ ನಕ್ಷತ್ರದ ಮೇಲೆ ನಮ್ಮ ಸೂರ್ಯನಂತೆಯೇ ದ್ರವ್ಯ ರಾಶಿ ಹಾಗೂ ತಾಪಮಾನಗಳು ಇವೆ ಎಂದು ಹೇಳಿದ್ದಾರೆ. ಈ ನಕ್ಷತ್ರಗಳು ಭೂಮಿಯಿಂದ 30 ಜ್ಯೋತಿರ್ವರ್ಷಗಳ ದೂರದಲ್ಲಿ ಇದೆ ಎಂದು ತಿಳಿದುಬಂದಿದೆ.

ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಮೇರಿಲ್ಯಾಂಡ್ ನ ಪ್ರಕಾರ ಈ ನಕ್ಷತ್ರ ಸುಮಾರು 60 ರಿಂದ 75 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾಗಿದ್ದು, ಇದಕ್ಕೆ ಹೋಲಿಕೆ ಮಾಡಿದಾಗ ನಮ್ಮ ಸೂರ್ಯ ತನ್ನ ಜೀವಿತಾವಧಿಯ ಅರ್ಧ ಭಾಗವನ್ನೇ ಈಗಾಗಲೇ ಕಳೆದಿದ್ದು ಆಗಿದೆ. ವಿಜ್ಞಾನಿಗಳ ಪ್ರಕಾರ ನಮ್ಮ ಸೂರ್ಯನ ವಯಸ್ಸು 4.6 ಬಿಲಿಯನ್ ವರ್ಷಗಳಾಗಿವೆ. ವಿಜ್ಞಾನಿಗಳ ಪ್ರಕಾರ ಸೂರ್ಯನಂತಹ ಈ ಹೊಸ ನಕ್ಷತ್ರದ ಆವಿಷ್ಕಾರವು . ನಮಗೆ ಆರಂಭಿಕ ಸೌರವ್ಯೂಹದ ಸ್ಥಿತಿಯ ಬಗ್ಗೆ ಪ್ರಮುಖವಾದ ಮಾಹಿತಿಯನ್ನು ನೀಡುತ್ತದೆ ಎನ್ನಲಾಗಿದೆ. ಈ ಹೊಸ ನಕ್ಷತ್ರದ ಆವಿಷ್ಕಾರವು ನಮ್ಮ ಭೂಮಿಯ ಮೇಲೆ ಸೂರ್ಯನು ಹೇಗೆ ವಾತಾವರಣವನ್ನು ರೂಪಿಸಿದನು?? ಮತ್ತು ಭೂಮಿಯ ಮೇಲೆ ಹೇಗೆ ಜೀವ ವಿಕಸನ ವಾಯಿತು?? ಎನ್ನುವ ವಿಷಯಗಳನ್ನು ಕುರಿತಾಗಿ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ ಎಂದಿದ್ದಾರೆ.

ಈ ಸಂಶೋಧನೆಯಲ್ಲಿ ಯುವ ನಕ್ಷತ್ರದಿಂದ ಹೊರಗೆ ಬರುವ ಗಾಳಿಯ ಕುರಿತಾಗಿ ಕೂಡಾ ಅಧ್ಯಯನವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಗಳು ವಿಕಸನ ಹೊಂದಿದಾಗ, ಸೂರ್ಯ ಹೇಗಿದ್ದನೆಂಬುದನ್ನು ಸೌರ ಮಂಡಲಕ್ಕೆ ಹಿಂತಿರುಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು. ಆ ನಿಟ್ಟಿನಲ್ಲಿ ಈ ಯುವ ನಕ್ಷತ್ರದ ಅಧ್ಯಯನ ಒಂದು ನೆರವು ನೀಡಲಿದೆ ಎಂದಿದ್ದಾರೆ. ನಮ್ಮ ಆಕಾಶಗಂಗೆಯಲ್ಲಿ 100 ಶತಕೋಟಿಗೂ ಹೆಚ್ಚು ನಕ್ಷತ್ರಗಳಿವೆ. ಪ್ರತಿ ಹತ್ತರಲ್ಲಿ ಒಂದು ಬೆಳಕು ಹಾಗೂ ಗಾತ್ರದ ದೃಷ್ಟಿಯಿಂದ ನಮ್ಮ ನಕ್ಷತ್ರದ ಹಾಗೆ ಕಾಣುತ್ತದೆ.

ಇವುಗಳಲ್ಲಿ ಹಲವು ನಕ್ಷತ್ರಗಳು ಇನ್ನೂ ಬೆಳವಣಿಗೆಯ ಹಂತದಲ್ಲಿದೆ. ಅಧ್ಯಯನ ಲೇಖಕ ವ್ಲಾಡಿಮಿರ್ ಅವರು, “ನಾನು ಒಬ್ಬ ಯುವಕನ ಫೋಟೋವನ್ನು ಇಟ್ಟುಕೊಂಡು ಆತ 2 ಅಥವಾ 3 ವರ್ಷದ ಮಗುವಾಗಿದ್ದಾಗ ಹೇಗಿದ್ದ ಎನ್ನುವ ಚಿತ್ರವನ್ನು ಬರೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಊಹಿಸಿಕೊಳ್ಳಿ, ಅಲ್ಲದೇ ನಮಗೆ ಆತನ ಬಾಲ್ಯದ ಯಾವುದೇ ಚಿತ್ರಗಳು ಈಗ ಲಭ್ಯವಿಲ್ಲ. ಅಂತಹ ಪರಿಸ್ಥಿತಿ ಈಗ ನಮಗೆ ಎದುರಾಗಿದೆ. ಪತ್ತೆಯಾಗಿರುವ ಹೊಸ ನಕ್ಷತ್ರವು ಭೂಮಿಯಿಂದ 30 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಅಂದರೆ ನಮ್ಮ ಭೂಮಿಯಿಂದ ಎರಡನೇ ಬೀದಿಯಲ್ಲಿ ಇದ್ದು, ಇದು ಭೂಮಿಯ 9 ದಿನಗಳಲ್ಲಿ ಒಮ್ಮೆ ತಿರುಗುತ್ತದೆ ಎಂದು ಹೇಳಿದ್ದಾರೆ.

Leave a Comment