Naresh Pavitra: ಪವಿತ್ರ ನರೇಶ್ ಮತ್ತೆ ಮದುವೆ! ಯಾರನ್ನು ಉರಿಸೋಕೆ ನರೇಶ್ ಹೀಗೆಲ್ಲಾ ಮಾಡ್ತಿದ್ದಾರೆ

Written by Soma Shekar

Published on:

---Join Our Channel---

Naresh Pavitra : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ ಸಿನಿಮಾ ಸುದ್ದಿಗಳಲ್ಲಿ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ನಟ ನರೇಶ್ (Naresh) ಮದುವೆ ಸುದ್ದಿ ಕೂಡಾ ಒಂದಾಗಿದೆ. ತೆಲುಗು ಸಿನಿಮಾಗಳ ಹಿರಿಯ ನಟ ನರೇಶ್ ಅವರು ಪವಿತ್ರಾ ಲೋಕೇಶ್ (Naresh Pavitra marriage) ಜೊತೆಗೆ ಮದುವೆಯಾಗುತ್ತಿರುವ ಹಾಗೆ ಕಂಡಿದ್ದ ವೀಡಿಯೋ ಶೇರ್ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಇಬ್ಬರೂ ದುಬೈಗೆ (Dubai) ಪ್ರವಾಸ ಹೋದ ಫೋಟೋಗಳು ಮತ್ತು ವೀಡಿಯೋ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿ ಮದುವೆ ನಂತರ ಈ ಜೋಡಿ ಹನಿಮೂನ್ ಗೆ ತೆರಳಿದ ಎನ್ನುವ ಸುದ್ದಿಗಳಾಗಿದ್ದವು. ವಿಚ್ಚೇದನ ಪಡೆಯದೇ ಮದುವೆ ಹೇಗೆ ಸಾಧ್ಯ? ನರೇಶ್ ಯಾರಿಗೆ ಉರಿಸೋಕೆ ಹೀಗೆ ಮಾಡ್ತಿದ್ದಾರೆ ಎನ್ನುವ ಅನುಮಾನ ಸಹಾ ಮೂಡಿತ್ತು. ಆದರೆ ಈಗ ಈ ಸುದ್ದಿಯ ಹಿಂದಿನ ಅಸಲಿಯತ್ತು ಬಯಲಾಗಿದೆ. ಎದ್ದಿದ್ದ ಅನುಮಾನಗಳಿಗೆ ಉತ್ತರ ಸಿಕ್ಕಿದೆ.

ಹಾಗಾದರೆ ಏನಿದು ನರೇಶ್, ಪವಿತ್ರ ಮದುವೆಯ ಹಿಂದಿನ ಅಸಲಿಯತ್ತು ಎನ್ನುವುದಾದರೆ, ಇದೆಲ್ಲವೂ ಕೂಡಾ ನರೇಶ್ ಮತ್ತು ಪವಿತ್ರ ಲೋಕೇಶ್ ಅಭಿನಯದ ಮಳ್ಳಿ ಪೆಳ್ಳಿ (Malli Pelli) ಅಂದರೆ ಮತ್ತೆ ಮದುವೆ (Matte Maduve) ಹೆಸರಿನ ಸಿನಿಮಾದ ಕುರಿತಾಗಿದೆ. ಇದೀಗ ಸಿನಿಮಾದ ಫಸ್ಟ್ ಲುಕ್ ಕೂಡಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ನರೇಶ್ ಅವರೇ ವಿಜಯ ಕೃಷ್ಣ ಬ್ಯಾನರ್ (Vijaya Krishna Production) ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಎಂ ಎಸ್ . ರಾಜು ( M S Raju) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನರೇಶ್ ಮತ್ತು ಪವಿತ್ರಾ ಜೋಡಿಯಾಗಿ ನಟಿಸಿದ್ದಾರೆ.

ಮತ್ತೆ ಮದುವೆ (Matte Maduve) ಅಥವಾ ಮಳ್ಳಿ ಪೆಳ್ಳಿ ಸಿನಿಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಯೂರಿಯಾಸಿಟಿಯನ್ನು ಹುಟ್ಟಿಸಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ‌. ‌ಇದೀಗ ಸಿ‌ನಿಮಾದ ಫಸ್ಟ್ ಲುಕ್ ಬಿಡುಗಡೆ ನಂತರ ಅಭಿಮಾನಿಗಳು ಖುಷಿಯಾಗಿದ್ದಾರೆ.. ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ‌ಈ ಸಿನಿಮಾ ಒಂದು ಫ್ಯಾಮಿಲಿ ಮನರಂಜನಾ ಸಿನಿಮಾ ಆಗಿದ್ದು, ಹಿರಿಯ ನಟ , ನಟಿಯರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನ ಮದುವೆ, ಹನಿಮೂನ್ ಎಂದು ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗಿ ಸಾಕಷ್ಟು ಸುದ್ದಿಗಳಾದ ಬೆನ್ನಲ್ಲೇ ಇದೆಲ್ಲಾ ಸಿನಿಮಾ ಪ್ರಮೋಷನ್ ಗಿಮಿಕ್ ಎನ್ನುವ ಸತ್ಯ ಈಗ ಹೊರಗೆ ಬಂದಿದೆ… ಅಸಲಿ ಸುದ್ದಿ ಹೊರ ಬಂದ ಮೇಲೆ ಬಹಳಷ್ಟು ಜನ ನೆಟ್ಟಿಗರು ನಾವು ಮೊದಲೇ ಇದನ್ನು ಊಹೆ ಮಾಡಿದ್ದೆವು ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ಟೀಕೆ, ಟಿಪ್ಪಣಿಳನ್ನು ಸಹಾ ಮಾಡುತ್ತಿದ್ದಾರೆ. ಅಂತೂ ಇಂತೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಿಕ್ಕಾಪಟ್ಟೆ ಸುದ್ದಿಗಳಲ್ಲಿ ಇರುವುದು ಮಾತ್ರ ಸತ್ಯ.

Leave a Comment