ನಾಳೆ ಮತ್ತೇನು ಕಾದಿದೆ ಇವರಿಗೆ? ಮುಹೂರ್ತ ಫಿಕ್ಸ್ ಮಾಡಿದ ನರೇಶ್!

Written by Soma Shekar

Published on:

---Join Our Channel---

Naresh Pavitra : ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ನ (Tollywood) ಹಿರಿಯ ನಟ ನರೇಶ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದು ಯಾವಾಗ ಇವರಿಬ್ಬರ ನಡುವೆ ಸ್ನೇಹ ಕ್ಕಿಂತ ಹೆಚ್ಚಿನದೇನೋ ಇದೆ ಎನ್ನುವ ಸುದ್ದಿಗಳು ಹೊರ ಬಂದವೋ ಅಂದಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದ್ದಾರೆ ನರೇಶ್ ಮತ್ತು ಪವಿತ್ರ. ಅದರಲ್ಲೂ ಇಬ್ಬರೂ ಮೈಸೂರಿನ ಹೊಟೇಲ್ ರೂಮ್ ನಲ್ಲಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಕೈಗೆ ಸಿಕ್ಕಿ ಹಾಕಿಕೊಂಡರೋ ಆಗಿನಿಂದ ಕನ್ನಡ ಮತ್ತು ತೆಲುಗು ರಾಜ್ಯಗಳಲ್ಲಿ ಇವರದ್ದೇ ಸುದ್ದಿಯಾಯ್ತು. ಇವರಿಗೆ ಮದುವೆ ಆಗಿದೆ, ಮದುವೆ ಆಗಲಿದೆ ಎನ್ನುವ ವದಂತಿಗಳು ಹರಿದಾಡಿದವು.

ಇವೆಲ್ಲವುಗಳ ನಡುವೆ ಇವರು ಜೋಡಿಯಾಗಿ ನಟಿಸುತ್ತಿರುವ ಹೊಸ ಸಿನಿಮಾವೊಂದರ ಪ್ರಮೋಷನ್ ಅನ್ನು ನರೇಶ್ ಜನರಿಗೆ ಇವರು ಮದುವೆ ಆಗೇ ಬಿಟ್ಟರೇನೋ ಎನ್ನುವಂತಹ ಅನುಮಾನ ಮೂಡಿಸುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋಗಳನ್ನು ಶೇರ್ ಮಾಡಿಕೊಂಡು ಇನ್ನಷ್ಟು ಚರ್ಚೆಗಳನ್ನು ಹುಟ್ಟು ಹಾಕಿದರು. ಅನಂತರ ಅದು ನರೇಶ್ ಮತ್ತು ಪವಿತ್ರ ಜೋಡಿಯಾಗಿ ನಟಿಸಿರುವ ಮತ್ತೆ ಮದುವೆ ಸಿನಿಮಾದ ವಿಚಾರ ಎನ್ನುವುದು ಹೊರ ಬಂತು. ಈ ಸಿನಿಮಾ ಕನ್ನಡದಲ್ಲೂ ಕೂಡಾ ತೆರೆಗೆ ಬರುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಕಪಾಳಕ್ಕೆ 24 ಸಲ ಬಾರಿಸಿದ್ದ ಆ ನಟಿ ಯಾರು ಗೊತ್ತಾ? ಇಂದಿಗೂ ನಟಿ ಆ ಘಟನೆ ಮರೆತಿಲ್ಲ

ಈಗ ಮತ್ತೊಮ್ಮೆ ಮತ್ತೆ ಮದುವೆ (Matte Maduve) ವಿಚಾರವನ್ನು ನಟ ಶೇರ್ ಮಾಡಿದ್ದಾರೆ. ನಾಳೆ 11.11 ಕ್ಕೆ ಅದಕ್ಕೆ ಮುಹೂರ್ತವನ್ನು ಫಿಕ್ಸ್ ಮಾಡಿರುವ ನಟ, ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ಶೇರ್ ಮಾಡಿಕೊಂಡಿರುವ ನರೇಶ್ ಅವರು ನಾಳೆ ಮತ್ತೆ ಮದುವೆಯ ಟೀಸರ್ ಬಿಡುಗಡೆ ಆಗುತ್ತಿದೆ, ನಮಗೆ ಶುಭ ಹಾರೈಸಿ ಎಂದು ಬರೆದುಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಮತ್ತೆ ಮದುವೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಈ ಸಿನಿಮಾವನ್ನು ವಿಜಯ ಕೃಷ್ಣ ಬ್ಯಾನರ್ ಅಡಿಯಲ್ಲಿ ನಟ ನರೇಶ್ ಅವರೇ ನಿರ್ಮಾಣ ಮಾಡಿದ್ದಾರೆ.

ನರೇಶ್ (Naresh)ಮತ್ತು ಪವಿತ್ರಾ (Pavitra Lokesh) ಅಭಿನಯದ ಈ ಸಿನಿಮಾ ಸಿನಿಮಾ ರಂಗದಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಮೇ ನಲ್ಲಿ ತೆರೆಗೆ ಬರುವ ನಿರೀಕ್ಷೆಗಳಿವೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮದುವೆ ಫೋಟೋ ಮತ್ತು ವೀಡಿಯೋ ವೈರಲ್ ಆದ ಬೆನ್ನಲ್ಲೇ ಈ ಜೋಡಿ ದುಬೈಗೆ ಹಾರಿದ್ದರು. ಅಲ್ಲಿನ ಇವರ ಫೋಟೋ, ವೀಡಿಯೋ ಹೊರ ಬಂದಾಗ ಮದುವೆ ನಂತರ ಹನಿಮೂನ್ ಗೆ ತೆರಳಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದ್ದವು.

Leave a Comment