ರಶ್ಮಿಕಾ ಮಂದಣ್ಣ‌ನ್ನ ಪಕ್ಕಕ್ಕಿಟ್ಟ ಜನ, ಈ ಬೆಡಗಿಯನ್ನು ನ್ಯಾಷನಲ್ ಕ್ರಶ್ ಅಂತಿದ್ದಾರೆ..

Written by Soma Shekar

Published on:

---Join Our Channel---

Mrunal Thakur : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟ ರಶ್ಮಿಕಾ ಮಂದಣ್ಣ‌ (Rashmika Mandanna) ಈಗ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾ ರಂಗಗಳಲ್ಲಿ ಬಹು ಬೇಡಿಕೆಯ ಸ್ಟಾರ್ ನಟಿ. ನಟಿಯ ಜನಪ್ರಿಯತೆ, ಚಾರ್ಮ್ ಮತ್ತು ಬೇಡಿಕೆ ಈ ಎಲ್ಲಾ ವಿಷಯಗಳಿಂದಾಗಿ ನಟಿ ರಶ್ಮಿಕಾರನ್ನು ಗೂಗಲ್ ಭಾರತದ ರಾಷ್ಟ್ರೀಯ ಕ್ರಶ್ ಅಥವಾ ನ್ಯಾಷನಲ್ ಕ್ರಶ್ ಎನ್ನುವ ಬಿರುದನ್ನು ನೀಡಿತ್ತು. ಎಲ್ಲೆಡೆ ರಶ್ಮಿಕಾ ನ್ಯಾಷನಲ್ ಕ್ರಶ್ (National Crush) ಎಂದೇ ಹೆಸರಾದರು. ಆದರೆ ಇದೀಗ ರಶ್ಮಿಕಾ ಬದಲಾಗಿ ಸೋಶಿಯಲ್ ಮೀಡಿಯಾಗಳಲ್ಲಿ ನ್ಯಾಷನಲ್ ಕ್ರಶ್ ಎಂದು ಟಾಲಿವುಡ್ ನ ಬೇರೊಬ್ಬ ನಟಿಯ ಹೆಸರು ಕೇಳಿ ಬರುತ್ತಿದೆ.

ತನ್ನ ಅಂದ ಮತ್ತು ನಟನೆಯಿಂದ ಅಸಂಖ್ಯಾತ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ರಶ್ಮಿಕಾ, ಸಿನಿಮಾಗಳು ಮಾತ್ರವೇ ಅಲ್ಲದೇ ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಸಹಾ ಹೌದು. ಆದ್ದರಿಂದಲೇ ರಶ್ಮಿಕಾ ಅವರಿಗೆ 2020 ರಲ್ಲಿ ಗೂಗಲ್ (Google) ನ್ಯಾಷನಲ್ ಕ್ರಶ್ ಪಟ್ಟವನ್ನು ನೀಡಿತ್ತು. ಶ್ರೀವಲ್ಲಿ ಪಾತ್ರದ ಮೂಲಕ ನಟಿ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು‌. ವಿದೇಶಿ ಫ್ಯಾಷನ್ ಅಂಬಾಸಿಡರ್ ಸಹಾ ಆಗಿದ್ದಾರೆ ಎನ್ನುವುದು ನಟಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಲವ್ಲಿ ಸ್ಟಾರ್ ಪುತ್ರನ ಭರ್ಜರಿ ಫೋಟೋ ಶೂಟ್: ಖಡಕ್ ಹೀರೋ ಅಂತಿದ್ದಾರೆ ನೆಟ್ಟಿಗರು

ಸೋಶಿಯಲ್ ಮೀಡಿಯಾ ಗಳಲ್ಲಿ ಸಹಾ ನ್ಯಾಷನಲ್ ಕ್ರಶ್ ಟ್ರೆಂಡಿಂಗ್ ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಆದರೆ ಈಗ ಜನರ ಆಲೋಚನೆಗಳಲ್ಲಿ ಬದಲಾವಣೆ ಆಗಿರುವಂತೆ ಕಂಡು ಬಂದಿದೆ. ಹೌದು, ತೆಲುಗಿನಲ್ಲಿ ಸೀತಾ ರಾಮಂ (Sita Ramam) ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದ್ದ ನಟಿ ಮೃಣಾಲ್‌ ಠಾಕೂರ್ ಈಗಾಗಲೇ ತೆಲುಗು ರಾಜ್ಯಗಳ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಈಗ ಮೃಣಾಲ್‌ ರಶ್ಮಿಕಾರನ್ನು ಹಿಂದಿಕ್ಕುವ ಕೆಲಸ ಮಾಡಿದ್ದಾರೆ.

ಮೃಣಾಲ್‌ ಠಾಕೂರ್ (Mrunal Thakur) ತಮ್ಮ ಮೊದಲ ಸಿನಿಮಾದಿಂದಲೇ ಅಂದ ಮತ್ತು ಅಭಿನಯದಿಂದ ತೆಲುಗು ಸಿನಿಮಾ ಪ್ರೇಕ್ಷಕರ ಮನಸ್ಸುಗಳಿಗೆ ಲಗ್ಗೆಯನ್ನು ಇಟ್ಟರು. ಇತ್ತೀಚಿಗೆ ನಟಿ ಕಾನ್ (Cannes 2023) ಚಿತ್ರೋತ್ಸವಕ್ಕೆ ಹೋಗಿದ್ದರು. ಅಲ್ಲಿ ಚಿತ್ರೋತ್ಸವದಲ್ಲಿ ತಾನು ಭಾಗಿಯಾಗಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಭರ್ಜರಿಯಾಗಿ ವೈರಲ್ ಆಗಿವೆ.

ಯಾವಾಗ ಮೃಣಾಲ್ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡರೋ , ಆಗ ನೆಟ್ಟಿಗರಿಂದ ನ್ಯಾಷನಲ್ ಕ್ರಶ್ ಎನ್ನುವ ಕಾಮೆಂಟ್ ಗಳು ಸಾಲು ಸಾಲಾಗಿ ಹರಿದು ಬರ್ತಿದೆ. ಈ ಮೂಲಕ ನೆಟ್ಟಿಗರು ಟಾಲಿವುಡ್ ನ ಈ ಬೆಡಗಿಗೆ ನ್ಯಾಷನಲ್ ಕ್ರಶ್ ಪಟ್ಟವನ್ನು ಅಭಿಮಾನದಿಂದ ನೀಡ್ತಾ ಇದ್ದಾರೆ. ಕಾನ್ ಚಿತ್ರೋತ್ಸವದಲ್ಲಿ ನಟಿ ಧರಿಸಿದ್ದ ಕಾಸ್ಟ್ಯೂಮ್ ಎಲ್ಲರ ಗಮನವನ್ನು ವಿಶೇಷವಾಗಿ ಸೆಳೆದಿದೆ.

Leave a Comment