Actor Jaggesh ಉಂಗುರ, ಕಿವಿಯೋಲೆ ಧರಿಸಿ MRI ಸ್ಕ್ಯಾನ್? ಟ್ರೋಲ್ ಬಗ್ಗೆ ಜಗ್ಗೇಶ್ ಕೊಟ್ರು ಖಡಕ್ ಪ್ರತಿಕ್ರಿಯೆ

Written by Soma Shekar

Published on:

---Join Our Channel---

Actor Jaggesh ಕರ್ನಾಟಕದಲ್ಲಿ ಕಾವೇರಿ ಹೋರಾಟವು (Cauvery Dispute) ಬಹಳ ಜೋರಾಗಿದೆ.‌ ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಅಂದು ಕನ್ನಡ ಚಿತ್ರರಂಗದ ಹಲವು ಕಲಾವಿದರು ಬಂದ್ ಗೆ ಬೆಂಬಲವನ್ನು ನೀಡುತ್ತಾ ಪ್ರತಿಭಟನಾ ಸಭೆಯನ್ನು ನಡೆಸಿದ್ದರು. ಈ ವೇಳೆ ನವರಸ ನಾಯಕ ಜಗ್ಗೇಶ್ (Actor Jaggesh) ಅವರು ಇದರಲ್ಲಿ ಗೈರು ಹಾಜರಾಗಿದ್ದರು.

ನಟ ಜಗ್ಗೇಶ್ ಅವರು ತಾವು ಗೈರಾಗಿದ್ದಕ್ಕೆ ಕ್ಷಮೆಯನ್ನು ಕೇಳಿದ್ದಾರೆ ಅಲ್ಲದೇ ಅವರು ಅನಾರೋಗ್ಯದ ನಡುವೆಯೂ ಸಹಾ ಸುದ್ದಿ ಗೋಷ್ಟಿ ಯನ್ನು ಕರೆದು ಮಾತನಾಡಿದ್ದಾರೆ. ಜಗ್ಗೇಶ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ಕ್ಯಾನ್ ಮಾಡಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನು ನೋಡಿ ಅನೇಕರು ಎಂ ಆರ್ ಐ ಸ್ಕ್ಯಾನ್ (MRI Scan) ಮಾಡಿಸುವಾಗ ಉಂಗುರ, ಕಿವಿಯೋಲೆ ಬಿಚ್ಚದೆ ಅವರು ಸ್ಕ್ಯಾನಿಂಗ್ ಮಾಡಿಸಿರುವ ಫೋಟೋಗಳಿಗೆ ಟ್ರೋಲ್ ಮಾಡಿದ್ದರು. ಈ ವಿಚಾರಕ್ಕೆ ನಟ ಜಗ್ಗೇಶ್ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಜಗ್ಗೇಶ್ ಅವರು, ಚಪ್ಪಲಿ ಇಲ್ಲದೆ ಬೆಟ್ಟ ಹತ್ತೋದು ಕಷ್ಟವಾಗಿತ್ತು, ನಾನು ಬೇಕಾದಂತಹ ತಯಾರಿಯನ್ನು ಮಾಡಿಕೊಂಡಿರಲಿಲ್ಲ. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಾನು ನಿರ್ಮಾಪಕರಿಗೋಸ್ಕರ ಬಂದಿರೋದು, ಸಂತೇಲಿ ಮಾತಾಡೋ ವಿಚಾರಗಳಿಗೆ ನಾನು ಕಿವಿಕೊಡೋದಿಲ್ಲ ಎಂದು ಟ್ರೋಲ್ ಮಾಡೋರಿಗೆ ಉತ್ತರವನ್ನು ನೀಡಿದ್ದಾರೆ.‌

Leave a Comment