ಮೊಟೊರೊಲ ಡಬಲ್ ಧಮಾಕಾ! ಫೀಚರ್ಸ್ ಮತ್ತು ಬೆಲೆ ಎರಡೂ ಸೂಪರ್

Written by Soma Shekar

Published on:

---Join Our Channel---

Motorola smartphones: ಒಂದೇ ಸಮಯದಲ್ಲಿ ಎರಡು ಸ್ಮಾರ್ಟ್ ಫೋನ್ ಗಳನ್ನು ಅಂದರೆ Moto G 5G (2023) ಮತ್ತು Moto G Stylus (2023) ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. Moto G 5G ಜೊತೆಗೆ 120Hz ರಿಫ್ರೆಶ್ ದರವನ್ನು ನೀಡಲಾಗಿದೆ ಮತ್ತು Moto G Stylus (2023) ನಲ್ಲಿ 90Hz ರಿಫ್ರೆಶ್ ದರವು ಲಭ್ಯವಿರುತ್ತದೆ. ಈ ಎರಡೂ ಫೋನ್‌ಗಳ ವಿನ್ಯಾಸವು ನೀರಿನ ನಿರೋಧಕ ಅಥವಾ ವಾಟರ್ ರಿಪ್ಲೆಂಟ್ ಆಗಿದ್ದು , ಎರಡೂ 15W ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿವೆ.

Moto G 5G (2023), Moto G Stylus (2023) ಬೆಲೆ : Moto G 5G (2023) ನ 4 GB RAM ಮತ್ತು 128 GB ಸ್ಟೋರೇಜ್ ಮಾಡೆಲ್ ನ ಬೆಲೆಯು $249.99 ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಸುಮಾರು 20,500 ರೂಪಾಯಿಗಳಾಗಿದೆ. ಇದು ನಿಮಗೆ ಇಂಕ್ ಬ್ಲೂ ಮತ್ತು ಹಾರ್ಬರ್ ಮಿಸ್ಟ್ ಎರಡು ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ನಿಮಗೆ ಈ ಸ್ಮಾರ್ಟ್ ಫೋನ್ ಮೇ 25 ಖರೀದಿಗೆ ಲಭ್ಯವಾಗಲಿದೆ.

ಇನ್ನು ಎರಡನೇ ಸ್ಮಾರ್ಟ್ ಫೋನ್ ಅಂದರೆ Moto G Stylus (2023) ನ 4 GB RAM ಜೊತೆಗೆ 64 GB ಸ್ಟೋರೇಜ್ ನ ಬೆಲೆಯ ವಿಚಾರಕ್ಕೆ ಬಂದರೆ, ಇದರ ಬೆಲೆ $ 199.99 ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಇದು ಸುಮಾರು 16,200 ರೂಗಳಾಗಿದ್ದು, ಇದು ಮೇ 5 ರಿಂದ ಮಾರಾಟವಾಗಲಿದ್ದು, ನಿಮಗೆ ಈ ಸ್ಮಾರ್ಟ್ ಫೋನ್ ಪಿಂಕ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ಈ ಎರಡೂ ಫೋನ್ ಗಳ ಮಾರಾಟ ಯುಎಸ್‌ ನಲ್ಲಿ ಆಗಲಿದ್ದು, ಭಾರತದಲ್ಲಿ ಇವುಗಳ ಬಿಡುಗಡೆಯ ಕುರಿತು ಸದ್ಯಕ್ಕೆ ಮಾಹಿತಿ ಇಲ್ಲ.

Moto G 5G (2023) ವಿಶೇಷಣಗಳು (Specifications) : ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 13 ಆಧಾರಿತ My UX ಅನ್ನು ಹೊಂದಿದೆ. ಅಲ್ಲದೇ, ಫೋನ್ 6.5 ಇಂಚಿನ HD+ ಡಿಸ್ ಪ್ಲೇ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಫೋನ್ 4 GB RAM ಮತ್ತು 128 GB ಸ್ಟೋರೇಜ್ ನೊಂದಿಗೆ Snapdragon 480+ 5G ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದರಲ್ಲಿ ನಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ..

ಇದರಲ್ಲಿ ಪ್ರಾಥಮಿಕ ಲೆನ್ಸ್ 48 MP ಆಗಿದ್ದು, ಇದು ಅಪರ್ಚರ್ f/1.7 ಅನ್ನು ಹೊಂದಿದೆ. ಅದೇ ಸಮಯದಲ್ಲಿ, ಎರಡನೇ ಲೆನ್ಸ್ 2 MP ಮ್ಯಾಕ್ರೋ ಆಗಿದೆ, ಇದು ಅಪರ್ಚರ್ f/2.4 ಅನ್ನು ಹೊಂದಿದ್ದು, ಇದರಲ್ಲಿ ಸೆಲ್ಫಿ ಪ್ರಿಯರಿಗಾಗಿ ಫೋನ್ ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.

Moto G 5G (2023) ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳ ಕುರಿತಾಗಿ ನೋಡಿದಾಗ, ಇದರಲ್ಲಿ Wi-Fi 802.11 a/b/g/n/ac, ಬ್ಲೂಟೂತ್ 5.1, GPS, A-GPS, GLONASS, Galileo, Beidu, 3.5mm ಹೆಡ್‌ಫೋನ್ ಜ್ಯಾಕ್. ಟೈಪ್ ಸಿ ಪೋರ್ಟ್ ಲಭ್ಯವಿದೆ. ಇನ್ನು ಇದರಲ್ಲಿ ಫೋನ್ ಫಿಂಗರ್‌ ಪ್ರಿಂಟ್ ಸೆನ್ಸರ್ ಇದ್ದು, ಇದರಲ್ಲಿ 15W ಚಾರ್ಜಿಂಗ್‌ ನೊಂದಿಗೆ 5000mAh ಬ್ಯಾಟರಿಯನ್ನು ನೀಡಲಾಗಿದೆ.

Moto G Stylus (2023) ನ ವಿಶೇಷತೆಗಳು (Specification) : ಈ ಸ್ಮಾರ್ಟ್ ಫೋನ್ Android 13 ಆಧಾರಿತ My UX ಅನ್ನು ಹೊಂದಿದ್ದು, ಇದರಲ್ಲಿ 6.5 ಇಂಚಿನ ಪೂರ್ಣ HD ಪ್ಲಸ್ ಡಿಸ್ ಪ್ಲೇ ಯನ್ನು ನೀಡಲಾಗಿದೆ. 20:9 ರ ಆಕಾರ ಅನುಪಾತವನ್ನು ಇದು ಹೊಂದಿದೆ. ಡಿಸ್ ಪ್ಲೇ ಯೊಂದಿಗೆ 90Hz ರಿಫ್ರೆಶ್ ದರ ಲಭ್ಯವಿದೆ. ಫೋನ್ 4 GB RAM ಮತ್ತು 64 GB ಸಂಗ್ರಹಣೆಯನ್ನು MediaTek Helio G85 ಪ್ರೊಸೆಸರ್ ಅನ್ನು ಹೊಂದಿದೆ.

Moto G Stylus (2023) ಸ್ಮಾರ್ಟ್ ಫೋನ್, 50 ಮೆಗಾಪಿಕ್ಸೆಲ್‌ಗಳ ಪ್ರಾಥಮಿಕ ( ಪ್ರೈಮರಿ) ಲೆನ್ಸ್‌ನೊಂದಿಗೆ ಬಂದಿದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುತ್ತದೆ.‌ಇದು aperture
f/1.8 ಅನ್ನು ಹೊಂದಿರುತ್ತದೆ ಮತ್ತಿ ಎರಡನೇ ಲೆನ್ಸ್
Pperture f/2.4 ನೊಂದಿಗೆ 2 MP ಅಲ್ಟ್ರಾ ವೈಡ್ ಲೆನ್ಸ್ ಆಗಿದೆ. ಇನ್ನು ಸೆಲ್ಫಿ ಗಾಗಿ ಇದರ ಮುಂಭಾಗದಲ್ಲಿ 8 MP ಸೆಲ್ಫಿ ಕ್ಯಾಮೆರಾ ದೊರೆಯುತ್ತದೆ.‌

Moto G Stylus (2023) ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳ ವಿಚಾರಕ್ಕೆ ಬಂದಾಗ ಇದರಲ್ಲಿ 4G LTE, Wi-Fi 802.11a/b/g/n/ac, ಬ್ಲೂಟೂತ್ 5.0, GPS/ A-GPS, USB ಟೈಪ್ C ಪೋರ್ಟ್ ಮತ್ತು 3.5mm ಹೆಡ್‌ ಫೋನ್ ಜ್ಯಾಕ್ ಗಳು ಸೇರಿದೆ. ಇದರಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ ಮತ್ತು ಇದರಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದ್ದು, 15W ವೇಗದ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

Leave a Comment