Kantara 1: ಕಾಂತಾರ 1 ಗೆ ಸೌತ್ ಸ್ಟಾರ್ ನಟನ ಎಂಟ್ರಿ; ಸುದ್ದಿ ಕೇಳಿ ಥ್ರಿಲ್ ಆದ್ರು ಅಭಿಮಾನಿಗಳು

Written by Soma Shekar

Published on:

---Join Our Channel---

Kanrara 1 : ಕಾಂತಾರ ಪ್ರೀಕ್ವೆಲ್ ಅಥವಾ ಕಾಂತಾರ 1 (Kantara 1) ಈಗ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಕಾಂತಾರ ಸಿನಿಮಾ ಮಾಡಿದ ಸದ್ದು, ಸುದ್ದಿಯಿಂದಾಗಿ ಸಹಜವಾಗಿಯೇ ಈಗ ಪ್ರೀಕ್ವೆಲ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕಾಂತಾರ ಪ್ರೀಕ್ಷೆಲ್ ಕುರಿತಾಗಿ ಆಗಾಗ ಹೊಸ ಹೊಸ ವಿಷಯಗಳು ಹೊರ ಬಂದು ಸುದ್ದಿಗಳಾಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ರಿಷಬ್ ಶೆಟ್ಟಿ (Rishab Shetty) ಅವರು ಸದ್ದಿಲ್ಲದೇ ತಮ್ಮ ಸಿನಿಮಾಕ್ಕೆ ಕಲಾವಿದರ ಆಯ್ಕೆ ನಡೆಸಿದ್ದಾರೆ ಎನ್ನಲಾಗಿದೆ.

ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ ಕಾಂತಾರ ಪ್ರೀಕ್ಷೆಲ್ ನಲ್ಲಿ ಮಲೆಯಾಳಂನ ಜನಪ್ರಿಯ ನಟ ಜಯರಾಮ್ (Jayaram) ಒಂದು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ಈ ನಟ ಶಿವರಾಜ್ ಕುಮಾರ್ ಅವರು ನಾಯಕನಾಗಿದ್ದ ಘೋಸ್ಟ್ ಸಿನಿಮಾದಲ್ಲಿ ಸಹಾ ನಟಿಸಿದ್ದರು. ಈಗ ಕಾಂತಾರ ಪ್ರೀಕ್ವೆಲ್ ನಲ್ಲಿ ಮತ್ತೆ ಕನ್ನಡಿಗರ ಮುಂದೆ ಬರಲಿದ್ದಾರೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಪ್ರಸ್ತುತ ತಮ್ಮ ಕಾಂತಾರ 1 ಸಿನಿಮಾದ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಮೇ 7 ರಂದು ನಟ ಬೈಂದೂರಿನ ಕೆರಾಡಿಯಲ್ಲಿ ಮತದಾನ ಮಾಡಿದ ನಂತರ ಮಾದ್ಯಮಗಳ ಮುಂದೆ ಮಾತನಾಡಿದ ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾದ ಕುರಿತಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.

ಜನರು ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿದರೇ ಒಳ್ಳೆಯದು, ಕಾಂತಾರ ಸಿನಿಮಾದ ಕುರಿತಾಗಿ ಹೊಂಬಾಳೆ ಫಿಲ್ಮ್ ಅಧಿಕೃತವಾಗಿ ಎಲ್ಲವನ್ನೂ ತಿಳಿಸಲಿದೆ. ಪ್ರೀಕ್ವೆಲ್ ನ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ ಹಾಗೂ ಸಿನಿಮಾದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ ಎನ್ನುವ ಮಾತನ್ನು ಸಹಾ ಹೇಳಿದ್ದರು.

Leave a Comment