Actor Nani: ರಶ್ಮಿಕಾ ಫೋಟೋ ಗಲಾಟೆ, ಕ್ಷಮೆ ಕೇಳಿದ ಟಾಲಿವುಡ್ ನಟ ನಾನಿ

Written by Soma Shekar

Published on:

---Join Our Channel---

Actor Nani : ಟಾಲಿವುಡ್ ನ ಜನಪ್ರಿಯ ನಟ ನಾನಿ (Actor Nani) ಅವರ ಹಾಯ್ ನಾನ್ನ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇತ್ತೀಚಿಗಷ್ಟೇ ಭರ್ಜರಿಯಾಗಿ ನಡೆದಿತ್ತು. ಆದರೆ ಈ ಕಾರ್ಯಕ್ರಮ ಸುದ್ದಿಯಾಗಿದ್ದು ಮಾತ್ರ ರಶ್ಮಿಕಾ (Rashmika) ಮತ್ತು ವಿಜಯ ದೇವರಕೊಂಡ ವಿಚಾರವಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಯ್ ನಾನ್ನ ಸಿನಿಮಾಕ್ಕೂ ರಶ್ಮಿಕಾ, ವಿಜಯ ದೇವರಕೊಂಡ ಗೆ ಏನೂ ಸಂಬಂಧ ಎಂದರೆ ಇಲ್ಲಿದೆ ಅದರ ಕಾರಣ.

ಅಂದು ಕಾರ್ಯಕ್ರಮದ ವೇದಿಕೆಯ ಮೇಲಿದ್ದ ಎಲ್ ಇ ಡಿ ಸ್ಕ್ರೀನ್ ಮೇಲೆ ರಶ್ಮಿಕಾ ಮತ್ತು ವಿಜಯ ದೇವರಕೊಂಡ (Vijay Devarakonda) ಮಾಲ್ಡೀವ್ಸ್ ಫೋಟೋ ಕಾಣಿಸಿಕೊಂಡಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಈ ವಿಚಾರವಾಗಿ ನಟ ನಾನಿ ಅವರು ಕ್ಷಮೆ ಯಾಚಿಸಿದ್ದಾರೆ. ಆ ರೀತಿ ನಡೆದಿದ್ದು ಖಂಡಿತ ದುರದೃಷ್ಟಕರವಾದ ವಿಚಾರವಾಗಿದೆ. ಇದನ್ನೂ ಓದಿ: Big Boss: ರಾಕ್ಷಸರಾದ ಸಂಗೀತಾ, ಕಾರ್ತಿಕ್, ಮುಂದಿದೆ ಮಾರಿ ಹಬ್ಬ ಅಂತ ಸೂಚನೆ ಕೊಟ್ಟ ವಿನಯ್

ಆದರೆ ಏನಾಯ್ತು ಅಂತ ತಿಳಿಯೋ ಒಳಗೆ ಫೋಟೋ ಕಣ್ಮರೆಯಾಯಿತು. ನಾವೆಲ್ಲರೂ ಸ್ನೇಹಿತರು, ಹೀಗೆಲ್ಲಾ ಆಗೋದು ಸಹಜ ಅಂತ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸಿದ್ದೇನೆ. ಒಂದು ವೇಳೆ ಇದ್ರಿಂದ ಯಾರಿಗಾದ್ರು ನೋವಾದ್ರೆ ನಾನು ಮತ್ತು ನನ್ನ ತಂಡ ಕ್ಷಮೆಯನ್ನು ಕೇಳುತ್ತೇವೆ ಎಂದಿದ್ದಾರೆ.

ಇಂತಹ ಈವೆಂಟ್ ಗಳಲ್ಲಿ ಬಹಳಷ್ಟು ಜನರು ಕೆಲಸವನ್ನು ಮಾಡ್ತಾರೆ. ಆ ರೀತಿ ಆಗಬಾರದಿತ್ತು, ಅದಕ್ಕೆ ಕಾರಣ ಏನಂತ ತಿಳಿಯೋ ಪ್ರಯತ್ನ ಮಾಡಿದೆವು, ಆದರೆ ಕೆಲಸ ಮಾಡುತ್ತಿದ್ದವರು ಅದಾಗಲೇ ಭಯ ಪಟ್ಟಿದ್ದರು. ಅದಕ್ಕೆ ಹೋಗಲಿ ಬಿಡು ಅಂತ ಸುಮ್ಮನಾದೆವು. ಅದೊಂದು ಸಿನಿಮಾ ಸಮಾರಂಭ, ಅಲ್ಲಿ ಫೋಟೋ ಹಾಕಿ ಗಾಸಿಪ್ ಮಾಡೋಕೆ ಅದೇನು ಗಾಸಿಪ್ ವೆಬ್ ಸೈಟ್ ಅಲ್ಲ ಎಂದಿದ್ದಾರೆ ನಾನಿ.

Leave a Comment