Megha Shetty ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ: ಇನ್ನು ಮದ್ವೆ ಫಿಕ್ಸ್ ಅಂದ್ರು ಫ್ಯಾನ್ಸ್! ಸುಂದರ ಫೋಟೋಗಳು ಇಲ್ಲಿವೆ
Megha Shetty : ಹೆಣ್ಣಿನ ಮುಂದಾದ, ಅಂದವಾದ ಮುಖಕ್ಕೆ ಮೂಗುತಿ ಮೆರುಗನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಮೂಗಿಗೆ ಹಲವು ನಟಿಯರು ಅಂದವಾದ ಮೂಗುತಿ ಧರಿಸಿಯೇ ಅಭಿಮಾನಿಗಳ ಎದೆಯಲ್ಲಿ ಕಚಗುಳಿ ಇಟ್ಟ ಸಾಕಷ್ಟು ಉದಾಹರಣೆಗಳು ಸಹಾ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವು ನಟಿಯರು ಮೂಗು ಚುಚ್ಚಿಸಿಕೊಂಡು ಸುದ್ದಿಯಾಗುತ್ತಿದ್ದಾರೆ.
ಈಗ ಈ ಹಾದಿಯಲ್ಲಿ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ (Megha Shetty) ಅವರು ತಮ್ಮ ಮೂಗನ್ನು ಚುಚ್ಚಿಸಿಕೊಂಡು ಗಮನ ಸೆಳೆದಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ (Jothe Jotheyali Serial) ಅನು ಸಿರಿಮನೆ ಪಾತ್ರದಲ್ಲಿ ಮನೆ ಮನೆ ಮಾತಾದವರು ನಟಿ ಮೇಘಾ ಶೆಟ್ಟಿ.
ಅನು ಸಿರಿಮನೆಯಾಗಿ ಮನ ಗೆದ್ದ ಮೇಘಾ ಶೆಟ್ಟಿ ಅವರು ನಂತರ ರಾಜನಂದಿನಿಯಾಗಿಯೂ ಕಿರುತೆರೆಯ ಪ್ರೇಕ್ಷಕರ ಮೇಲೆ ಮೋಡಿಯನ್ನು ಮಾಡಿದ್ದರು.
ಇದೀಗ ನಟಿ ತಾವು ಮೂಗು ಚುಚ್ಚಿಸಿಕೊಂಡ ವೀಡಿಯೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದು, ಎಲ್ಲರ ಗಮನವನ್ನ ಸೆಳೆದಿದ್ದಾರೆ.
ಆರಂಭದಲ್ಲಿ ಒಂದು ಆತಂಕದಿಂದಯೇ ಮೂಗು ಚುಚ್ಚಿಸಿಕೊಳ್ಳಲು ಮುಂದಾದ ಮೇಘಾ ಶೆಟ್ಟಿ ಅವರು ಅನಂತರ ಕನ್ನಡಿಯಲ್ಲಿ ಮೂಗುತ್ತಿ ನೋಡಿ ಕೂಲ್ ಆಗಿ ಖುಷಿ ಪಟ್ಟಿದ್ದಾರೆ.
ನಟಿ ಶೇರ್ ಮಾಡಿದ ವೀಡಿಯೋಗೆ ಭರ್ಜರಿ ಕಾಮೆಂಟ್ ಗಳು ಹರಿದು ಬರುತ್ತಿದೆ. ಮೂಗುತಿ ಧರಿಸಿದ ಮೇಲೆ ನಿಮ್ಮ ಅಂದಕ್ಕೆ ಇನ್ನಷ್ಟು ಮೆರುಗು ಬಂದಿದೆ ಎಂದಿದ್ದಾರೆ ಅಭಿಮಾನಿಗಳು.
ಇನ್ನೂ ಕೆಲವರು ಮೇಘಾ ಶೆಟ್ಟಿ ಅವರ ಮದುವೆ ಇನ್ನು ಫಿಕ್ಸ್, ಅವರನ್ನ ಮದುವೆ ಆಗೋದಿಕ್ಕೆ ಸಾಲು ಸಾಲು ಹುಡುಗರು ನಿಲ್ತಾರೆ ಇನ್ನು ಎಂದು ಮೆಚ್ಚುಗೆಗಳನ್ನು ನೀಡಿದ್ದಾರೆ.
ಸೀರಿಯಲ್ ನಿಂದ ಜನಪ್ರಿಯತೆ ಪಡೆದ ಮೇಘಾ ಶೆಟ್ಟಿ ಅವರು ಈಗಾಗಲೇ ತ್ರಿಬಲ್ ರೈಡಿಂಗ್ ಮತ್ತು ದಿಲ್ ಪಸಂದ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ್ದಾರೆ.
ಪ್ರಸ್ತುತ ಅವರ ಒಂದೆರಡು ಸಿನಿಮಾಗಳು ಬಿಡುಗಡೆ ಆಗಬೇಕಿದ್ದು, ಹೊಸ ಪ್ರಾಜೆಕ್ಟ್ ಯಾವುದೂ ಇನ್ನೂ ಘೋಷಣೆಯಾಗಿಲ್ಲ. ಅಭಿಮಾನಿಗಳು ಅವರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸಕ್ರಿಯವಾಗಿರುವ ಮೇಘಾ ಶೆಟ್ಟಿ ಅವರು ಫೋಟೋ ಶೂಟ್ ಗಳ ಮೂಲಕ ಮಿಂಚುತ್ತಿದ್ದು, ಒಂದು ಮಿಲಿಯನ್ ಗೂ ಅಧಿಕ ಫಾಲೋಯರ್ಸ್ ಪಡೆದುಕೊಂಡಿದ್ದಾರೆ.