Maruti Jimny display: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ತನ್ನ ಎರಡು ಪ್ರಮುಖ SUV ವಾಹನಗಳಾದ ಜಿಮ್ನಿ ಮತ್ತು ಫ್ರಾಂಕ್ಸ್ ಅನ್ನು ಬಿಡುಗಡೆ ಮಾಡಲಿದೆ. ಎರಡೂ ಎಸ್ ಯು ವಿ ಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದು, ಗ್ರಮಾರುತಿ ಜಿಮ್ನಿಗಾಗಿ ಕಾಯುತ್ತಿದ್ದಾರೆ ಗ್ರಾಹಕರು. ಮಾರುತಿ ಸುಜುಕಿಯು ಈ SUV ಅನ್ನು ಬಿಡುಗಡೆ ಮಾಡುವ ಮೊದಲೇ ಇದೀಗ ಗ್ರಾಹಕರಿಗೆ ಅದನ್ನು ಹತ್ತಿರದಿಂದ ತೋರಿಸುವ ನಿರ್ಧಾರವನ್ನು ಮಾಡಿದೆ. ಇದಕ್ಕಾಗಿ ಕಂಪನಿಯು ಈ SUV ಅನ್ನು ತನ್ನ ಪ್ರೀಮಿಯಂ NEXA ಡೀಲರ್ ಶಿಪ್‌ನಲ್ಲಿ ಡೀಲರ್ ಡಿಸ್ ಪ್ಲೇ ಪ್ರೋಗ್ರಾಂ ಅಡಿಯಲ್ಲಿ ಪ್ರದರ್ಶಿಸಲು ಯೋಜನೆ ಸಿದ್ಧಪಡಿಸಿದೆ. ಅಲ್ಲಿ ಗ್ರಾಹಕರು ಈ SUV ಅನ್ನು ಹತ್ತಿರದಿಂದ ನೋಡಬಹುದಾಗಿದೆ.
ಕಳೆದ ಜನವರಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆದಂತಹ ಆಟೋ ಎಕ್ಸ್‌ಪೋ 2023 ರ ಸಂದರ್ಭದಲ್ಲಿ ಮಾರುತಿ ಸುಜುಕಿ ಈ ತನ್ನ ಹೊಸ SUV ಅನ್ನು ಪರಿಚಯ ಮಾಡಿತು. ಅದೇ ಸಮಯದಲ್ಲಿ ಈ SUV ಯ ಬುಕಿಂಗ್ ಅನ್ನೂ ಸಹಾ ಪ್ರಾರಂಭಿಸಲಾಯಿತು. ಆದರೆ ಅನೇಕರಿಗೆ ಈ ಆಟೋ ಎಕ್ಸ್ ಪೋ (Auto Expo) ಗೆ ಹೋಗಿ ಕಾರನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಈ SUV ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಗಮನ ನೀಡಿದ್ದರು. ಆದ್ದರಿಂದಲೇ ಈಗ ಕಂಪನಿಯು ನಿಮ್ಮ ನಗರದಲ್ಲಿಯೇ ಡೀಲರ್ ಪ್ರದರ್ಶನದಲ್ಲಿ ಮಾರುತಿ ಜಿಮ್ನಿಯನ್ನು (Maruti Jimny) ನೋಡಬಹುದಾಗಿದೆ.
ಪ್ರಸ್ತುತ ಕಂಪನಿಯು ಈ ಹೊಸ SUV ಅನ್ನು ದೇಶದ 9 ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಲು ಸಜ್ಜಾಗಿದ್ದು, ಇದಕ್ಕಾಗಿ ಸಂಪೂರ್ಣ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಪ್ರದರ್ಶನದ ಕಾರ್ಯಕ್ರಮವು ಏಪ್ರಿಲ್ 7 ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ. ಹಾಗಾದರೆ ಆ ಒಂಬತ್ತು ನಗರಗಳು ಯಾವುದು ಎನ್ನುವುದಾದರೆ, ದೆಹಲಿ-ಎನ್‌ಸಿಆರ್, ಮುಂಬೈ, ಅಹಮದಾಬಾದ್, ಚಂಡೀಗಢ, ಮೊಹಾಲಿ, ಲುಧಿಯಾನ, ರಾಯ್‌ಪುರ, ಭುವನೇಶ್ವರ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ರಾಮ್ ಚರಣ್ ಜೊತೆ ಆಸ್ಕರ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡೋಕೆ Jr.NTR ಗೆ ಇಷ್ಟ ಇರಲಿಲ್ವಾ? ಹೊರ ಬಿತ್ತು ಶಾಕಿಂಗ್ ಸತ್ಯ
ಮೇಲಿನ ಚಿತ್ರದಲ್ಲಿ, ನಿಮ್ಮ ನಗರ ಮತ್ತು ಅಲ್ಲಿ ಪ್ರದರ್ಶನ ವೇಳಾಪಟ್ಟಿಯನ್ನು ನೀವು ಪರಿಶೀಲಿಸಬಹುದಾಗಿದೆ. ಕಂಪನಿಯು ಆಟೋ ಎಕ್ಸ್‌ಪೋ ಸಮಯದಲ್ಲಿಯೇ ಮಾರುತಿ ಜಿಮ್ನಿಯ ಮುಂಗಡ ಬುಕ್ಕಿಂಗ್ ಆರಂಭಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ ಈಗಾಗಲೇ ಈ SUV ಯ 25,000 ಕ್ಕೂ ಅಧಿಕ ಅಡ್ವಾನ್ಸ್ ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ. ಇನ್ನೂ ಕೂಡಾ ಬುಕ್ಕಿಂಗ್ ಮುಂದುವರೆದಿದೆ. ಅಲ್ಲದೇ ಈ ಡೀಲರ್ ಶಿಪ್ ಪ್ರದರ್ಶನ ಕಾರ್ಯಕ್ರಮದ ನಂತರ ಬುಕಿಂಗ್‌ಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳು ದಟ್ಟವಾಗಿದೆ. ಏಕೆಂದರೆ ಈ SUV ಅನ್ನು ಹತ್ತಿರದಿಂದ ನೋಡಲು ಬಹಳಷ್ಟು ಜನ ಗ್ರಾಹಕರು ಕಾದಿದ್ದರು.
ಭಾರತೀಯ ಗ್ರಾಹಕರು ಮಾರುತಿ ಸುಜುಕಿ ಜಿಮ್ನಿಗಾಗಿ ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದರು. ಇದುವರೆಗೂ ಕಂಪನಿಯು ಭಾರತದಲ್ಲಿ ಮೂರು ಬಾಗಿಲಿನ ಆವೃತ್ತಿಯನ್ನು ಭಾರತದಲ್ಲಿ ಉತ್ಪಾದನೆ ಮಾಡುತ್ತಿತ್ತು ಮತ್ತು ಅದನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಈಗ ಕಂಪನಿಯು ತನ್ನ ಐದು ಡೋರ್ ಗಳ ಆವೃತ್ತಿಯನ್ನು ಪರಿಚಯಿಸಿದೆ ಇದು ಪ್ರಮುಖ ಆಕರ್ಷಣೆ ಎನಿಸಿದೆ. ಈ SUV ಯಲ್ಲಿ, ಕಂಪನಿಯು 1.5 ಲೀಟರ್ K ಸರಣಿಯ ನ್ಯಾಚುರಲ್ ಆಸ್ಪೈರ್ಡ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ.
ಇದು 103 bhp ಮತ್ತು 134 Nm ನ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನ್ಯುಯಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಇದರ ಹೊರತಾಗಿ, ನಾಲ್ಕು ಚಕ್ರ ಡ್ರೈವ್ (4X4) ಆಲ್ ಗ್ರಿಪ್ ಪ್ರೊ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಎಸ್ ಯು ವಿ ಯ ಆಫ್ ರೋಡಿಂಗ್ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ಕಂಪನಿ ಭರವಸೆಯನ್ನು ನೀಡಿದೆ.