ಮಹಿಳೆಯರಿಗೆ ಹೊಸ ಪೋಸ್ಟ್ ಆಫೀಸ್ ಯೋಜನೆ: ಹೂಡಿಕೆ ಮಿತಿ, ಬಡ್ಡಿ ದರ, ಹೇಗೆ ತೆರೆಯುವುದು? ಇಲ್ಲಿದೆ ಮಾಹಿತಿ

Written by Soma Shekar

Published on:

---Join Our Channel---

Mahila Samman Saving Certificate: ಮಹಿಳಾ ಹೂಡಿಕೆದಾರರಿಗಾಗಿ, 2023 ರ ಬಜೆಟ್ ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವನ್ನು ಪರಿಚಯಿಸಲಾಯಿತು. ಇದು ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಎರಡು ವರ್ಷಗಳವರೆಗೆ ನೀಡಲಾಗುವುದು. ಆದರೆ, ಸರ್ಕಾರದಿಂದ ಅಧಿಕೃತ ಘೋಷಣೆ ಮತ್ತು ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ವಿತ್ತ ಮಂತ್ರಿ ನಿರ್ಮಾಲ ಸೀತಾರಾಮನ್ ಪ್ರಕಾರ, ಆಜಾದಿ ಕಾ ಅಮೃತ್ ಮಹೋತ್ಸವ್ (ಸ್ವತಂತ್ರ ಭಾರತದ ಅಮೃತ ಮಹೋತ್ಸವ) ನೆನಪಿಗಾಗಿ, ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಮಾರ್ಚ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದು ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ, ಶೇಕಡಾ 7.5 ರ ಸ್ಥಿರ ಬಡ್ಡಿ ದರದಲ್ಲಿ 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ. ವರೆಗಿನ ಠೇವಣಿಯ ಸೌಲಭ್ಯವನ್ನು ನೀಡುತ್ತದೆ.‌ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಗರಿಷ್ಠ ಠೇವಣಿಯು ಮೊತ್ತವು 2 ಲಕ್ಷ ರೂಪಾಯಿಗಳಾಗಿರುತ್ತದೆ. ಇದು ಸಣ್ಣ ಉಳಿತಾಯ ಯೋಜನೆ ತೆರಿಗೆಯಾಗಿದ್ದು,
ಇದು ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಸಾಮಾನ್ಯವಾಗಿ, ಸಣ್ಣ ಉಳಿತಾಯ ಯೋಜನೆಗಳಿಗೆ ಸೆಕ್ಷನ್ 80C ತೆರಿಗೆ ಪ್ರಯೋಜನಗಳು ಲಭ್ಯವಿವೆ. ಈ ಕುರಿತಾಗಿ ಹೆಚ್ಚಿನ ವಿವರಗಳು ಪ್ರಕಟವಾಗಬೇಕಾಗಿದೆ.

ಇತರ ಬ್ಯಾಂಕುಗಳೊಂದಿಗೆ ಬಡ್ಡಿ ದರ ಹೋಲಿಕೆ :
ಮಹಿಳಾ ಸಮ್ಮಾನ್ ಪ್ರಮಾಣಪತ್ರವು 2 ವರ್ಷಗಳ ಅವಧಿಗೆ 7.5% ಬಡ್ಡಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದರೆ, SBI 2 ವರ್ಷಗಳವರೆಗೆ ಗರಿಷ್ಠ 6.80% ವರೆಗೆ ನೀಡುತ್ತದೆ. HDFC ಬ್ಯಾಂಕ್ 15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ ಅವಧಿಯ ಅವಧಿಯಲ್ಲಿ ಗರಿಷ್ಠ 7.10% ಅನ್ನು ನೀಡುತ್ತದೆ. ICICI ಬ್ಯಾಂಕ್ 2 ವರ್ಷಗಳವರೆಗೆ 7.10% ಅನ್ನು ಸಹಾ ನೀಡುತ್ತದೆ. PNB 666 ದಿನಗಳ ಅವಧಿಯ ಗರಿಷ್ಠ 7.25% ನೀಡುತ್ತದೆ ಎಂದು ಹೇಳಲಾಗಿದೆ.‌ ಅಂದರೆ ಈ ಮಹಿಳಾ ಸಮ್ಮಾನ್ ಹೆಚ್ಚಿನ ಬಡ್ಡಿ ದರ ಹೊಂದಿದೆ. ಇದನ್ನೂ ಓದಿ: ದಕ್ಷಿಣದ ಕಡೆಗೆ ರಶ್ಮಿಕಾ ಯೂಟರ್ನ್, ಬಾಲಿವುಡ್ ನಲ್ಲಿ ಅಂತದ್ದೇನಾಯ್ತು? ಹೋದ ಸ್ಪೀಡ್ ನಲ್ಲೇ ವಾಪಸ್ ಬಂದ ನಟಿ!

ಮಹಿಳಾ ಸಮ್ಮಾನ್ ಪ್ರಮಾಣಪತ್ರವನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ವಿವರ ಹೀಗಿದೆ: ಪೋಸ್ಟ್ ಆಫೀಸಿನಲ್ಲಿ ಯಾವುದೇ ಸಣ್ಣ ಉಳಿತಾಯ ಯೋಜನೆಗಳ ಯೋಜನೆಯ ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು ಯಾವುವೆಂದರೆ,
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಒಂದು ವೇಳೆ ಆಧಾರ್ ಲಭ್ಯವಾಗದಿದ್ದರೆ, 1. ಪಾಸ್‌ಪೋರ್ಟ್ 2. ಡ್ರೈವಿಂಗ್ ಲೈಸೆನ್ಸ್ 3. ಮತದಾರರ ಗುರುತಿನ ಚೀಟಿ 4. ರಾಜ್ಯ ಸರ್ಕಾರಿ ಅಧಿಕಾರಿಯಿಂದ ಸಹಿ ಮಾಡಲಾದ MNREGA ನೀಡಿದ ಜಾಬ್ ಕಾರ್ಡ್, ಹೆಸರು ಮತ್ತು ವಿಳಾಸ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ನೀಡಲಾದ ಪತ್ರ.

Leave a Comment