Mahesh Babu: ಮಹೇಶ್ ಬಾಬು ಧರಿಸಿದ ಟೀ ಶರ್ಟ್ ಸಿಂಪಲ್ ಅಂದವ್ರೇ ಅದರ ಬೆಲೆಯನ್ನು ಕೇಳಿ ಬೆಚ್ಚಿ ಬಿದ್ರು

Written by Soma Shekar

Published on:

---Join Our Channel---

Mahesh Babu: ಟಾಲಿವುಡ್ ನ ಸ್ಟಾರ್ ನಟ, ಪ್ರಿನ್ಸ್ ಖ್ಯಾತಿಯ ನಟ ಮಹೇಶ್ ಬಾಬು (Mahesh Babu) ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟರ ಸಾಲಿನಲ್ಲಿ ಹೆಸರನ್ನು ಪಡೆದಿರುವ ನಟನಾಗಿದ್ದಾರೆ. ನಟ ಮಹೇಶ್ ಬಾಬು ಅವರು ಆಗರ್ಭ ಶ್ರೀಮಂತ ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರವೇ ಆಗಿದೆ. ಮಹೇಶ್ ಬಾಬು ಅವರು ಸಿನಿಮಾ ಮಾತ್ರವೇ ಅಲ್ಲದೇ ಸಾಮಾಜಿಕ ಕಳಕಳಿಯ ಕಾರ್ಯಗಳಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.

ಮಹೇಶ್ ಬಾಬು ಅವರು ಯಾವುದೇ ಸಿನಿಮಾ ಕಾರ್ಯಕ್ರಮಕ್ಕೆ ಬರುವಾಗಲೂ ಸರಳವಾದ ಉಡುಗೆಯನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಅವರು ರಣಬೀರ್ ಕಪೂರ್ ಅವರು ನಾಯಕನಾಗಿರುವ ಅನಿಮಲ್ ಸಿನಿಮಾದ (Animal Movie) ಪ್ರಿ ರಿಲೀಸ್ ಕಾರ್ಯಕ್ರಮ ವಿಶಾಖ ಪಟ್ಟಣಂ ನಲ್ಲಿ ನಡೆದಾಗ ಮಹೇಶ್ ಬಾಬು ಒಂದು ಸಿಂಪಲ್ ಆಗಿ ಕಾಣುವ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಬಂದಿದ್ದರು.

ನಟನ ಟೀ ಶರ್ಟ್ ನೋಡಿದವರೆಲ್ಲಾ ನಟ ಎಷ್ಟೊಂದು ಸಿಂಪಲ್, ಒಂದು ಸಾದಾ ಸೀದಾ ಟೀ ಶರ್ಟ್ ಧರಿಸಿ ಬಂದಿದ್ದಾರೆ ಎನ್ನುವ ಮೆಚ್ಚುಗೆ ನೀಡಿದ್ದಾರೆ. ಆದರೆ ಅನಂತರ ಅಸಲಿ ವಿಷಯ ತಿಳಿದ ಮೇಲೆ ಅಂದರೆ ಸಿಂಪಲ್ ಆಗಿ ಕಾಣ್ತಿದ್ದ ಟೀ ಶರ್ಟ್ ನ ಅಸಲಿ ಬೆಲೆ ಗೊತ್ತಾದ ಮೇಲೆ ಎಲ್ಲರೂ ಶಾಕ್ ಆಗಿದ್ದಾರೆ. ಇದನ್ನೂ ಓದಿ : Kiara Advani: ಆ ದಿನಕ್ಕಾಗಿ ಕಾಯ್ತಾ ಇದ್ದೀನಿ; ಕಿಯಾರಾ ಅಡ್ವಾಣಿ ಮಾತಿಗೆ ಶಾಕ್ ಆದ ಫ್ಯಾನ್ಸ್

ಹೌದು, ನಟ ಮಹೇಶ್ ಬಾಬು ಅವರು ತೊಟ್ಟ ಟೀ ಶರ್ಟ್ ಪ್ರಖ್ಯಾತ ಬ್ರಾಂಡ್ ಆದ ಗಿವೆಂಚಿಯದಾಗಿದ್ದು ಎನ್ನಲಾಗಿದ್ದು, ಇದರ ಬೆಲೆ ಬರೋಬ್ಬರಿ 47 ಸಾವಿರ ರೂಪಾಯಿಗಳು ಎನ್ನಲಾಗಿದೆ‌. ಸಿಂಪಲ್ ಆಗಿ ಕಾಣ್ಸೋ ಟೀ ಶರ್ಟ್ ಗೆ ಇಷ್ಟೊಂದು ಬೆಲೆನಾ ಅಂತ ನೆಟ್ಟಿಗರು ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Leave a Comment