ನಟಿ ಮೀನಾ ಮಗಳ ಮಾತಿಗೆ ರಜನೀಕಾಂತ್ ಜೊತೆ ಕಣ್ಣೀರು ಹಾಕಿದ ಸೆಲೆಬ್ರಿಟಿಗಳು: ನೈನಿಕ ಅಮ್ಮನ ಬಗ್ಗೆ ಹೇಳಿದ್ದೇನು?

Written by Soma Shekar

Published on:

---Join Our Channel---

Meena Daughter Nainika :ಬಹುಭಾಷಾ ನಟಿಯಾಗಿ ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಹೆಸರನ್ನು ಪಡೆದಿರುವ ನಟಿ ಮೀನಾ (Meena), ಸಿನಿಮಾ ರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶ ನೀಡಿದ ಈ ನಟಿಯು 90ರ ದಶಕದಲ್ಲಿ ದಕ್ಷಿಣ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯಾಗಿ, ಸ್ಟಾರ್ ನಟಿಯಾಗಿ ಹೆಸರನ್ನು ಮಾಡಿದ್ದರು. ದಕ್ಷಿಣ ಸಿನಿಮಾ ರಂಗದ (South Cinema industry) ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿ ಮೀನಾ ನಾಯಕಿಯಾಗಿ ನಟಿಸಿ ಅಪಾರ ಅಭಿಮಾನಿಗಳ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪೋಷಕ ನಟಿಯಾಗಿ ಸಿನಿಮಾ ರಂಗದಲ್ಲಿ ತಮ್ಮ ಜರ್ನಿಯನ್ನು ಮುಂದುವರಿಸುತ್ತಿದ್ದಾರೆ ಮೀನಾ. ನಟಿಯು ಸಿನಿಮಾ ರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಜನಿಕಾಂತ್ , ಪ್ರಭುದೇವರಂತಹ ಸ್ಟಾರ್ ಗಳೊಂದಿಗೆ ಇನ್ನು ಸಾಕಷ್ಟು ಜನ ಸಿನಿಮಾ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪತಿಯ ಅಗಲಿಕೆಯ ನಂತರ ಇದೇ ಮೊದಲ ಬಾರಿಗೆ ನಟಿ ಒಂದು ಅದ್ದೂರಿ ಕಾರ್ಯಕ್ರಮದ ಭಾಗವಾಗಿದ್ದರು.

ನಟಿ ಮೀನಾ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ (Vidya Sagar) ಅವರ ಜೊತೆಗೆ 2009ರಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಟ್ಟರು. ಈ ದಂಪತಿಗೆ ನೈನಿಕ ಹೆಸರಿನ ಒಬ್ಬ ಮಗಳು ಇದ್ದು, ನೈನಿಕ (Nainika) ಕೂಡ ಬಾಲ ನಟಿಯಾಗಿ ಸಿನಿಮಾದಲ್ಲಿ ಈಗಾಗಲೇ ನಟಿಸಿರುವುದು ವಿಶೇಷವಾಗಿದೆ. ಸಿನಿಮಾ ಹಾಗೂ ಕೌಟುಂಬಿಕ ಜೀವನ ಎರಡರಲ್ಲೂ ಸಂತೋಷವನ್ನು ಕಾಣುತ್ತಾ ಸುಖಮಯವಾದ ಜೀವನವನ್ನು ನಡೆಸುತ್ತಿದ್ದ ನಟಿ ಮೀನಾ ಅವರ ಬದುಕಿನಲ್ಲಿ ಅನಿರೀಕ್ಷಿತ ಅಥವಾ ವಿಧಿಯ ಆಟ ಎನ್ನುವಂತೆ ಕಳೆದ ವರ್ಷ ಮೀನಾ ಅವರ ಪತಿ ಅನಾರೋಗ್ಯದಿಂದ ಇಹಲೋಕವನ್ನು ತ್ಯಜಿಸಿದರು. ನಟಿ ಮೀನಾ ಪತಿಯ ಅಗಲಿಕೆಯ ನೋವಿನಲ್ಲಿ ಇರುವಾಗಲೇ ಮತ್ತೊಂದು ಕಡೆ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಡಿದು. ಇದರಿಂದ ನಟಿ ಇನ್ನಷ್ಟು ಕುಗ್ಗಿ ಹೋಗುವಂತೆ ಆಗಿತ್ತು. ಇದನ್ನೂ ಓದಿ: ಟೀಕೆ ಮಾಡಿದ ನಿರ್ಮಾಪಕನ ಮುಖಕ್ಕೆ ಸ್ಲಿಪ್ಪರ್ ಶಾಟ್ ಕೊಟ್ಟ ಸಮಂತಾ: ನಟಿ ರಿಪ್ಲೈ ಈಗ ಬಿರುಗಾಳಿ ಎಬ್ಬಿಸಿದೆ

ಸುದ್ದಿಗಳಲ್ಲಿ ನಟಿ ಮೀನಾ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ, ಅವರು ತಮಿಳು ನಟ ಧನುಷ್ (Dhanush) ಜೊತೆಗೆ ವಿವಾಹವಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದು ಸಾಲದೆಂಬಂತೆ ನೀನಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆನ್ನುವ ವದಂತಿಗಳು ಕೂಡಾ ವೈರಲ್ ಆದವು. ಈ ಎಲ್ಲಾ ಸುದ್ದಿಗಳು ಸಹಜವಾಗಿಯೇ ನಟಿಗೆ ಮಾನಸಿಕವಾಗಿ ಬೇಸರವನ್ನು ಉಂಟುಮಾಡಿತ್ತು. ಈ ಎಲ್ಲಾ ನೋವುಗಳು ಮತ್ತು ದುಃಖದಿಂದ ಹೊರಬಂದಿರುವ ನಟಿ 40 ನೇ ವರ್ಷದ ಕಾರ್ಯಕ್ರಮದಲ್ಲಿ ಬಹಳ ಸಂಭ್ರಮದಿಂದ ಭಾಗಿಯಾಗಿದ್ದರು ಈ ವೇಳೆಯಲ್ಲಿ ಅವರ ಮಗಳು ನೈನಿಕ ಹೇಳಿದಂತಹ ಮಾತುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಭಾವುಕರನ್ನಾಗಿ ಮಾಡಿತ್ತು.

ಕಾರ್ಯಕ್ರಮದ ವೇದಿಕೆಯಲ್ಲಿ ನೈನಿಕ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ನೈನಿಕ ಅಮ್ಮನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು. ನೈನಿಕ ಮಾತುಗಳು ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದೆ. ಆಕೆ ಮಾತನಾಡುತ್ತಾ, ಅಮ್ಮ ನೀವು ತಾಯಿಯಾಗಿ ಮತ್ತು ನಟಿಯಾಗಿ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ನೀವು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವಿರಿ. ನಾನು ಚಿಕ್ಕವಳಿದ್ದಾಗ ನಾವು ಶಾಪಿಂಗ್ ಮಾಲ್ ಗೆ ಹೋಗಿದ್ದೆವು. ಅಲ್ಲಿ ನಾನು ಕಳೆದು ಹೋಗಿದ್ದೆ. ಅಂಗಡಿಯಲ್ಲಿ ಚಾಕ್ಲೇಟ್ ತಿನ್ನುತ್ತಿದ್ದೆ. ಆಗ ನೀವು ಭಯದಿಂದ ನನ್ನನ್ನು ಹುಡುಕುತ್ತಿದ್ದೀರಿ. ಅಪ್ಪನ ನಿಧನದ ನಂತರ ನೀವು ಬಹಳ ಖಿನ್ನತೆಗೆ ಒಳಗಾಗಿರುವಿರಿ. ಭಾವನಾತ್ಮಕವಾಗಿ ನೊಂದಿರುವಿರಿ. ಇಂದಿನಿಂದ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನೈನಿಕ ಮಾತುಗಳನ್ನು ಕೇಳಿ ಹಿರಿಯ ನಟ ರಜನಿಕಾಂತ್ (Rajanikant) ಅವರು ಕೂಡಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಮೀನಾ ಅವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಈ ವೇಳೆ ಅವರ ಮಗಳು ಕೂಡಾ ತನ್ನ ತಾಯಿಯ ಜೊತೆಯಲ್ಲೇ ಇದ್ದರು. ರಜನಿಕಾಂತ್ ನೈನಿಕಾ ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದರು. ರಜನಿಕಾಂತ್ ಮತ್ತು ನೈನಿಕ ಅವರ ಭಾವನಾತ್ಮಕ ಸನ್ನಿವೇಶಗಳನ್ನು ಬಿಂಬಿಸುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುವದರ ಜೊತೆಗೆ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

Leave a Comment