Lakshmi Nivasa ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಬಗ್ಗೆ ಇದ್ದ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗಿದೆ. ಹೌದು, ಲಕ್ಷ್ಮೀ ಪಾತ್ರದಲ್ಲಿ ನಟಿ ಶ್ವೇತಾ ಅವರು ಯಾಕಿಲ್ಲ? ಅವರು ಮತ್ತೆ ಸೀರಿಯಲ್ ಗೆ ಯಾವಾಗ ಬರ್ತಾರೆ? ಬರ್ತಾರೋ ಇಲ್ವೋ? ಭಾವನಾ ಕೊರಳಿಗೆ ತಾಳಿ ಕಟ್ಟಿದ್ಯಾರು? ಅಂತೆಲ್ಲಾ ಪ್ರಶ್ನೆಗಳನ್ನ ಕೇಳ್ತಾ ಇದ್ದವರಿಗೆ ಈಗ ಉತ್ತರ ಸಿಕ್ಕಿದ್ದು ಖುಷಿಯಾಗಿದ್ದಾರೆ.
![](https://news9kannada.com/wp-content/uploads/2024/10/20241002_135713-1024x576.jpg)
ಲಕ್ಷ್ಮೀ ನಿವಾಸಕ್ಕೆ ಲಕ್ಷ್ಮೀ ವಾಪಸ್ ಬಂದಾಗಿದೆ. ಅಲ್ಲಿಗೆ ಅವರು ಮತ್ತೆ ಸೀರಿಯಲ್ ಗೆ ಬರ್ತಾರೋ ಇಲ್ವೋ ಅಂತ ಅನುಮಾನದಲ್ಲಿ ಇದ್ದವರಿಗೆ ಉತ್ತರ ಸಿಕ್ಕಾಗಿದೆ. ಆದರೆ ಇದೇ ವೇಳೆ ಲಕ್ಷ್ಮೀ ಪಾತ್ರಕ್ಕೆ ಡಬ್ಬಿಂಗ್ ಮಾಡ್ತಿದ್ದವರು ಬದಲಾದ ಕಾರಣ ಅವರ ಧ್ವನಿ ಬದಲಾಗಿದ್ದು ಈ ವ್ಯತ್ಯಾಸವನ್ನು ಪ್ರೇಕ್ಷಕರು ಗಮನಿಸಿದ್ದಾರೆ.
![](https://news9kannada.com/wp-content/uploads/2024/10/20241002_135747-1024x576.jpg)
ಮತ್ತೊಂದು ಕಡೆ ಭಾವನಾ ಕತ್ತಿಗೆ ತಾಳಿ ಕಟ್ಟಿರೋ ವಿಚಾರವಾಗಿ ಸದಾ ಅದನ್ನ ಹೇಳೋಕಾಗದೇ ಅಂಜಿಕೆಯಲ್ಲೇ ಇದ್ದ ಸಿದ್ಧೇ ಗೌಡ್ರು (Siddhe Gowda) ಈಗ ತನ್ನದೇ ಸ್ಟೈಲ್ ನಲ್ಲಿ ಊರಿನ ಜನರ ಮುಂದೇನೇ ತಾನೇ ಭಾವನಾಗೆ (Bhavana) ತಾಳಿ ಕಟ್ಟಿರೋದು ಅಂತ ಧೈರ್ಯವಾಗಿ ಹೇಳಿಕೊಂಡಿದ್ದಾರೆ. ವಾಹಿನಿ ಈ ಪ್ರೊಮೊ ಶೇರ್ ಮಾಡಿದೆ.
![](https://news9kannada.com/wp-content/uploads/2024/10/20241002_135731-1024x576.jpg)
ಸಮಾವೇಶ ನಡೆಯೋವಾಗ ಸಿದ್ಧೇಗೌಡ್ರ ತಂದೆ, ಪೂರ್ವಿ ಅವರ ತಂದೆ ಎಲ್ಲರೂ ವೇದಿಕೆಯಲ್ಲಿ ಇರೋವಾಗಲೇ, ಜನರ ಮುಂದೆ ಸಿದ್ಧೇಗೌಡ್ರು ಭಾವನಾ ಕೈ ಹಿಡ್ಕೊಂಡು ವೇದಿಕೆ ಮೇಲೆ ಕರ್ಕೊಂಡು ಬಂದು ತಾನೇ ಭಾವನಾಗೆ ತಾಳಿ ಕಟ್ಟಿದ್ದು ಅನ್ನೋ ಸತ್ಯ ಬಾಯಿ ಬಿಟ್ಟಿದ್ದಾರೆ. ಆದ್ರೆ ಪ್ರೇಕ್ಷಕರು ಕಾಮೆಂಟ್ ಮಾಡಿ ಸದ್ಯ ಇದು ಕನಸಾಗದೇ ಇರ್ಲಿ ಅಂತಿದ್ದಾರೆ.
BBK 11 ಶಿಶಿರ್ ಶಾಸ್ತ್ರಿ ಮದುವೆ ಯಾವಾಗ? ಹಸ್ತ ರೇಖೆ ನೋಡಿ ಭವಿಷ್ಯ ನುಡಿದ ಚೈತ್ರ ಕುಂದಾಪುರ