Lakshmi Nivasa: ಹುಚ್ಚು ಪ್ರೀತಿ, ಹೆಂಡ್ತಿ ಪರದಾಟಕ್ಕೆ ಖುಷಿ ಪಟ್ಟ ಜಯಂತ್; ಏನ್ ತಲೆನೋವು ಗುರು ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Lakshmi Nivasa: ಸದ್ಯಕ್ಕಂತೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಕಥೆಯೇ ಹೈಲೈಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಪ್ರತಿದಿನದ ಎಪಿಸೋಡ್ ನಲ್ಲಿ ಅವರ ದೃಶ್ಯಗಳಿಗೆ ಹೆಚ್ಚಿನ ಸಮಯ ಕೂಡಾ ಇದೆ. ಸೋಶಿಯಲ್ ಮೀಡಿಯಾಗಳಲ್ಲಂತೂ ಜಯಂತ್ ಪಾತ್ರದ ಕುರಿತಾಗಿಯೇ ಚರ್ಚೆಗಳು ನಡೆಯುತ್ತಿದೆ. ಹೆಂಡತಿಯ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿರುವ ಗಂಡನಾಗಿ, ಹೆಂಡತಿಯ ಪ್ರೀರಿ ತನಗಾಗಿ ಮಾತ್ರವೇ ಮೀಸಲೆಂದು ಪಡುವ ಪಾಡುಗಳು ಆತನ ವಿಚಿತ್ರ ನಡವಳಿಕೆಗೆ ಕಾರಣವಾಗಿದೆ.

ಪ್ರೀತಿಯ ವಿಚಾರದಲ್ಲಿ ಜಯಂತ್ ಅಕ್ಷರಶಃ ಸ್ವಾರ್ಥಿ ಆಗಿದ್ದಾನೆ. ಆ ಸ್ವಾರ್ಥ ಅವನನ್ನ ಸೈಕೋ ತರ ಆಡಿಸುತ್ತಿದೆ. ಜಾಹ್ನವಿ ಕಾಲೇಜಿನ ಸ್ನೇಹಿತರಿಗೆ ಅಡ್ಡ ಹೆಸರು ಇಟ್ಟಿರೋ ವಿಚಾರ, ಪಾರ್ಟಿಯಲ್ಲಿ ಜಾಹ್ನವಿ ಹಾಡನ್ನು ಹಾಡಿದ ವಿಚಾರ ಎಲ್ಲವನ್ನೂ ತಲೆಯಲ್ಲಿ ಇಟ್ಟುಕೊಂಡು ಅವಳಿಗೆ ಶಿಕ್ಷೆ ನೀಡಿ ಅನಂತರ ಅದು ಯಾಕೆ ಅಂತ ಅತೀವ ಪ್ರೀತಿ ತೋರಿಸಿ ಜಾಹ್ನವಿಯ ಮುಂದೆ ಒಳ್ಳೆಯವನಾಗಿದ್ದಾನೆ. ಆದರೆ ಜಾಹ್ನವಿಗೆ ಇನ್ನೂ ಅವನ ನಡವಳಿಕೆ ಬಗ್ಗೆ ಅನುಮಾನ ಮೂಡಿಲ್ಲ.

ಮತ್ತೊಂದು ಕಡೆ ಜಯಂತ್ ಗೆ ಜಾಹ್ನವಿ ತನ್ನ ಮನೆಯವರ ಜೊತೆಗೆ ಮಾತನಾಡೋದು ಸಹಾ ಇಷ್ಟ ಇಲ್ಲ. ತನ್ನ ಹೆಂಡತಿ ತನ್ನ ಬಗ್ಗೆ ಮಾತ್ರ ಚಿಂತೆ ಮಾಡಬೇಕು ಬೇರೇನೂ ಅಲ್ಲ ಅನ್ನೋದು ಜಯಂತ್ ನ ಮನಸ್ಥಿತಿ. ಅದಕ್ಕೆ ಅವಳನ್ನು ಸದಾ ಮನೆಯಲ್ಲೇ ಇರಿಸಿ, ಆಫೀಸ್ ನಲ್ಲಿ ಕುಳಿತು ಅವಳ ಎಲ್ಲಾ ಚಲನವಲನಗಳನ್ನು ಗಮನಿಸ್ತಾನೇ ಇರ್ತಾನೆ. ಈಗ ಜಯಂತ್ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದಾನೆ.

ಜಾಹ್ನವಿ ತನ್ನ ಮನೆಯವರ ಜೊತೆ ಹೆಚ್ಚು ಮಾತನಾಡಬಾರದು ಅಂತ ನೆಟ್ವರ್ಕ್ ತೆಗೆಸಿದ್ದಾನೆ. ಫೋನ್ ಮಾಡಲು ಹೋದವಳಿಗೆ ನೆಟ್ವರ್ಕ್ ಸಂಪರ್ಕ ಸಿಗದೇ ಇರೋದನ್ನ ನೋಡಿ ಸಿಮ್ ಸಮಸ್ಯೆ ಆಗಿದೆ ಅಂತ ಅದನ್ನ ಚೆಕ್ ಮಾಡಿದ್ದಾಳೆ. ಫೋನ್ ಕಾಲ್ ಮಾಡೋಕಾಗದೆ ಪರದಾಡಿದ್ದಾಳೆ. ಕೊನೆಗೆ ಜಾಹ್ನವಿ ಲ್ಯಾಂಡ್ ಲೈನ್ ನಿಂದ ಕಾಲ್ ಮಾಡಿದ್ದು ನೋಡಿ ಜಯಂತ್ ಕಂಗಾಲಾಗಿದ್ದಾನೆ.

ಅವಳು ಲ್ಯಾಂಡ್ ಲೈನ್ ಮೂಲಕ ಕರೆ ಮಾಡಿ ಮಾತನಾಡಿದ್ದು ನೋಡಿ ಕೆರಳಿ ಕೆಂಡವಾಗಿದ್ದಾನೆ. ಇನ್ನು ಆ ಲ್ಯಾಂಡ್ ಲೈನ್ ಕನೆಕ್ಷನ್ ಸಹಾ ಕಟ್ ಮಾಡಿಸಿದರೂ ಮಾಡಿಸಬಹುದು ಅನ್ನೋದು ಈಗ ಪ್ರೇಕ್ಷಕರ ಮಾತಾಗಿದೆ. ಒಟ್ನಲ್ಲಿ ಜಯಂತ್ ನ ಕೆಟ್ಟ ಪ್ಲಾನ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇದನ್ನೆಲ್ಲಾ ನೋಡೋಕಾಗ್ತಿಲ್ಲ ಅಂತ ನೆಟ್ಟಿಗರು ಬೇಸರ ಹೊರ ಹಾಕ್ತಿದ್ದಾರೆ.

Leave a Comment