Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Written by Soma Shekar

Published on:

---Join Our Channel---

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು ಕಿರುತೆರೆಯ ವಿವಿಧ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಗಳ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಕಲಾವಿದರೇ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಒಂದೆರಡು ಸೀರಿಯಲ್ ಗಳಲ್ಲಿ ನಟಿಸುವ ವೇಳೆಗೆ ತೆಲುಗಿನಿಂದ ಅವಕಾಶಗಳು ಅರಸಿ ಬರುತ್ತಿದ್ದು ಹಲವು ಕಲಾವಿದರು ಈಗಾಗಲೇ ತೆಲುಗು ಮತ್ತು ಕನ್ನಡ ಎರಡೂ ಕಡೆಗಳಲ್ಲೂ ಸೀರಿಯಲ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

ಗಟ್ಟಿಮೇಳ ನಟಿ ನಿಶಾ, ತ್ರಿನಯನಿ ಸೀರಿಯಲ್ ನ ನಾಯಕ ಮತ್ತು ನಾಯಕಿ ಪಾತ್ರದಲ್ಲಿರುವ ಆಶಿಕಾ ಮತ್ತು ಚಂದುಗೌಡ, ಪುನ್ನಾಗ ಸೀರಿಯಲ್ ನ ನಾಯಕಿ ನಟಿ ಅಂಜನಾ, ಮುಕ್ಕುಪುಡುಕ ಸೀರಿಯಲ್ ನ ನಾಯಕ ಮತ್ತು ನಾಯಕಿ ಹೀಗೆ ಸಾಲು ಸಾಲು ಸೀರಿಯಲ್ ಗಳಲ್ಲಿ ಕನ್ನಡ ಕಲಾವಿದರು ಕಮಾಲ್ ಮಾಡುತ್ತಿದ್ದು ಈಗ ಮತ್ತೊಬ್ಬ ಕನ್ನಡ ಕಿರುತೆರೆಯ ಜನಪ್ರಿಯ ನಟಿ ತೆಲುಗಿನ ಕಡೆಗೆ ಮುಖ ಮಾಡಿದ್ದಾರೆ.

ಹೌದು, ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಲಕ್ಷ್ಮೀ ಬಾರಮ್ಮದಲ್ಲಿ ನಾಯಕಿಯ ಪಾತ್ರವನ್ನು ಪೋಷಿಸುತ್ತಿರುವ ನಟಿ ಭೂಮಿಕಾ ರಮೇಶ್ (Bhumika Ramesh) ಅವರು ತೆಲುಗು ಕಿರುತೆರೆಯ ಹೊಸ ಸೀರಿಯಲ್ ಒಂದಕ್ಕೆ ನಾಯಕಿಯಾಗಿ ಎಂಟ್ರಿಯನ್ನು ನೀಡಿದ್ದಾರೆ. ಜೀ ತೆಲುಗು ವಾಹಿನಿಯು ಹೊಸ ಸೀರಿಯಲ್ ನ ಪ್ರೊಮೋ ಬಿಡುಗಡೆ ಮಾಡಿದ್ದು ಇದು ಎಲ್ಲರ ಗಮನವನ್ನು ಸೆಳೆದಿದೆ.

ಮೇಘಸಂದೇಶಂ (Megha Sandesham) ಹೆಸರಿನ ಈ ಸೀರಿಯಲ್ ನಲ್ಲಿ ಭೂಮಿಕಾ ಅವರ ಎದುರಲ್ಲಿ ನಾಯಕನಾಗಿಯೂ ಕನ್ನಡದ ನಟನೇ ಇರುವುದು ಮತ್ತೊಂದು ವಿಶೇಷವಾಗಿದ್ದು, ಅಭಿನವ್ ವಿಶ್ವನಾಥನ್ (Abhinav Vishwanathan) ಕಾಣಿಸಿಕೊಂಡಿದ್ದಾರೆ. ಇವರು ಈ ಹಿಂದೆ ತ್ರಿಪುರ ಸುಂದರಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಪ್ರೊಮೊ ಈಗಾಗಲೇ ಸಾಕಷ್ಟು ಸದ್ದನ್ನು ಮಾಡಿದ್ದು ಸೀರಿಯಲ್ ಸೂಪರ್ ಹಿಟ್ ಆಗುತ್ತೆ ಅನ್ನೋದು ಪ್ರೇಕ್ಷಕರ ಮಾತಾಗಿದೆ.

ಭೂಮಿಕಾ ಅವರು ಕಿರುತೆರೆಯ ಜೊತೆಗೆ ಸಿನಿಮಾಗಳ ಕಡೆಗೆ ಸಹಾ ಗಮನವನ್ನು ನೀಡಿದ್ದಾರೆ. ಇನ್ನು ಅಭಿನವ್ ಅವರು ತ್ರಿಪುರ ಸುಂದರಿ ಧಾರಾವಾಹಿಯ ನಂತರ ಕನ್ನಡದ ಬೇರೆ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತೆಲುಗು ಸೀರಿಯಲ್ ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಮಿಕಾ ಕನ್ನಡ ಮತ್ತು ತೆಲುಗು ಎರಡು ಸೀರಿಯಲ್ ಗಳಲ್ಲಿ ಇನ್ಮುಂದೆ ಬ್ಯುಸಿಯಾಗಲಿದ್ದಾರೆ.

Leave a Comment