Divya-arvind:ಕೆ.ಪಿ.ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅಂತಲೇ ‘ಬಿಗ್ ಬಾಸ್’ ಮನೆಯ ಇತರೆ ಸ್ಪರ್ಧಿಗಳು ಮಾತನಾಡಿಕೊಂಡಿದ್ದರು. ‘ಬಿಗ್ ಬಾಸ್’ ಕಾರ್ಯಕ್ರಮ ವೀಕ್ಷಿಸುತ್ತಿದ್ದವರಿಗೂ ಅದೇ ಭಾವನೆ ಇತ್ತು. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೂ ದಿವ್ಯಾ ಉರುಡುಗ ಹಾಗೂ ಕೆ.ಪಿ.ಅರವಿಂದ್ ನಡುವಿನ ಆತ್ಮೀಯತೆ ಮುಂದುವರಿದಿದೆ. ಹಾಗಾದ್ರೆ, ಕೆ.ಪಿ.ಅರವಿಂದ್ ಮತ್ತು ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರಾ? ಈ ಪ್ರಶ್ನೆಗೆ ಇಬ್ಬರೂ ಅಧಿಕೃತವಾಗಿ ಬಾಯ್ಬಿಟ್ಟು ಹೇಳಿಲ್ಲ.
‘ಬಿಗ್ ಬಾಸ್’ ಮೂಲಕ ಪರಿಚಯಗೊಂಡ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಹಳ ಆತ್ಮೀಯರಾದರು. ಇದೀಗ ಇಬ್ಬರೂ ಸೇರಿ ಹೊಸ ಉದ್ಯಮ ಆರಂಭಿಸಿದ್ದಾರೆ. ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ನೇಲ್ ಆರ್ಟ್ ಸ್ಟುಡಿಯೋ ತೆರೆದಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.
ಕೆ.ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರಾ? ಈ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಇಬ್ಬರೂ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಈಗ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸೇರಿ ಹೊಸ ಉದ್ಯಮ ಆರಂಭಿಸಿದ್ದಾರೆ.
ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಬೆಂಗಳೂರಿನಲ್ಲಿ ನೇಲ್ ಆರ್ಟ್ ಸ್ಟುಡಿಯೋ ಆರಂಭಿಸಿದ್ದಾರೆ. ಲಾಂಚ್ ಕಾರ್ಯಕ್ರಮಕ್ಕೆ ‘ಬಿಗ್ ಬಾಸ್’ ಸ್ಪರ್ಧಿಗಳು ಆಗಮಿಸಿದ್ದರು.
