ಕೋಟಿ ಕೊಟ್ಟರೂ ಸಿಗದು ಇಂತಹ ಲಾಭ!

Written by admin

Updated on:

---Join Our Channel---

ಒಣದ್ರಾಕ್ಷಿಯನ್ನು ಸಾಮಾನ್ಯವಾಗಿ ಸಿಹಿ ತಿಂಡಿಗಳ ಸಿಹಿಯನ್ನುವನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ಸೇರಿಸಲಾಗುತ್ತದೆ.ಕೆಲವು ಬಗೆಯ ಬಿರಿಯಾನಿಗಳಲ್ಲೂ ದ್ರಾಕ್ಷಿ ಗೋಡಂಬಿಗಳನ್ನು ಸೇರಿಸಲಾಗುತ್ತದೆ
ಆದರೆ ಅದರ ಹೊರತಾಗಿಯು ಒಣ ದ್ರಾಕ್ಷಿ ಸೇವನೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು,

ಇದು ನಮಗೆ ಹೆಚ್ಚಿನವರಿಗೆ ತಿಳಿದಿಲ್ಲ.ಅಪಾರ ಆರೋಗ್ಯಕರ ಕೊಡುಗೆಗಳನ್ನು ಒಣದ್ರಾಕ್ಷಿ ಹೊಂದಿರುತ್ತದೆ.
ವಿವಿಧ ಬಗೆಯ ದ್ರಾಕ್ಷಿಗಳನ್ನು ಬಿಸಿಲಿನಲ್ಲಿ ಅಥವಾ ಡ್ರೈಯರ್ನಲ್ಲಿ ಒಣಗಿಸಿ ತಯಾರಿಸುವುದೇ ಒಣ ದ್ರಾಕ್ಷಿ.ಇದನ್ನು ಹಾಗೇ ತಿನ್ನಲು ನಿಮಗೆ ಇಷ್ಟವಾಗುವುದಿಲ್ಲವೆಂದರೆ ಇದನ್ನು ವಿವಿಧ ರೀತಿಯ ಸಿಹಿ ತಿಂಡಿಗಳು ಮತ್ತು ಇತರ ಖಾದ್ಯಗಳಿಗೆ ಹಾಕಿಕೊಂಡು ಸೇವಿಸಬಹುದು.ಇನ್ನು ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಂಶ , ಕಬ್ಬಿಣಾಂಶ ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಪೋಷಕಾಂಶಗಳು ಇವೆ.
ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಕೂದಲು ಹಾಗೂ ಚರ್ಮದ ಕಾಂತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬಹುದು ಅಥವಾ ಹಾಗೆಯು ತಿನ್ನಬಹುದು.ಇದನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಂಡರೆ ಅದರಿಂದ ಹಲವಾರು ರೀತಿಯ ಲಾಭಗಳೇ ಸಿಗುತ್ತದೆ.6 ರಿಂದ 7 ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ ನೆನೆಸಿದ ನೀರನ್ನು ತಪ್ಪದೆ ಕುಡಿಯಿರಿ.ಇನ್ನು ಕೆಲವರಿಗೆ ಈ ರೀತಿಯಾಗಿ ಒಣದ್ರಾಕ್ಷಿಯನ್ನು ಸೇವಿಸಲು ಇಷ್ಟವಿಲ್ಲ ಎನ್ನುವವರು 6 ರಿಂದ 7 ಒಣದ್ರಾಕ್ಷಿಯನ್ನು ಹಾಗೆ ಸೇವಿಸಬಹುದು.

ಇನ್ನು ಒಣ ದ್ರಾಕ್ಷಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ :

ರಕ್ತಹೀನತೆ ನಿವಾರಣೆಯಾಗುತ್ತದೆ.ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿಣ ಅಂಶವಿದೆ ಮತ್ತು ಇದರಿಂದ ದೇಹದಲ್ಲಿ ರಕ್ತ ಹೀನತೆ ನಿವಾರಣೆ ಮಾಡಲು ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.ದಿನನಿತ್ಯ ಒಣ ದ್ರಾಕ್ಷಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ಕಬ್ಬಿಣಾಂಶದ ಕೊರತೆಯನ್ನು ನೀಗಿಸಬಹುದು. ನೀವೇನಾದರೂ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ತಪ್ಪದೇ ಒಣದ್ರಾಕ್ಷಿಯನ್ನು ಪ್ರತಿದಿನ ಸೇವಿಸಲು ಮರೆಯದಿರಿ.

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್ಸ್ ಇದೆ ಮತ್ತು ಇದು ವಿವಿಧ ರೀತಿಯಿಂದ ದೇಹಕ್ಕೆ ನೆರವಾಗುತ್ತದೆ.ಪಾಲಿನಲಿಕ್ ಹಾಗೂ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುತ್ತದೆ ಮತ್ತು ದೃಷ್ಟಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.ಇದರಿಂದ ಅಕ್ಷಿಪಟಲದ ಅವನತಿಯನ್ನು ತಡೆಯಬಹುದು ಮತ್ತು ದೃಷ್ಟಿ ಸುಧಾರಣೆಯ ಜೊತೆಗೆ ಹಲವಾರು ವಿಧದಿಂದ ನೆರವಾಗುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ ಗಂಟು ನೋವು ಅಥವಾ ಮೂಳೆಗಳು ದುರ್ಬಲವಾಗಿದ್ದರೆ ಆಗ ನೀವು ಪ್ರತಿದಿನ ಒಣದ್ರಾಕ್ಷಿಯನ್ನು ಸೇವಿಸಿ , ಇದರಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಶಿಯಂ ಇದ್ದು , ಇದು ಮೂಳೆಗಳನ್ನು ಬಲಪಡಿಸಲು ತುಂಬಾನೇ ಸಹಕಾರಿಯಾಗಿದೆ , ಇದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಸಂಧಿವಾತದಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ. ಈಗಾಗಲೇ ಹೇಳಿರುವ ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಂಶವಿದೆ ಮತ್ತು ಇದು ಹೊಟ್ಟೆಯಲ್ಲಿ ವಿರೇಚಕವನ್ನು ಉಂಟುಮಾಡುತ್ತದೆ ಒಣದ್ರಾಕ್ಷಿಯ ಸೇವನೆಯಿಂದ ಮಲಬದ್ಧತೆಯನ್ನು ನಿವಾರಿಸಬಹುದು.ಕರುಳಿನ ಕ್ರಿಯೆ ಸುಗಮವಾಗಿ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ಇದು ನೆರವಾಗುತ್ತದೆ.ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.ಒಣದ್ರಾಕ್ಷಿಯಲ್ಲಿ ಇರುವಂತಹ ಪೊಟ್ಯಾಶಿಯಂ ಮತ್ತು ಮೆಗ್ನಿಷಿಯಂ ಅಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶ ಮತ್ತು ಹಾನಿಕಾರಕ ದ್ರವವನ್ನು ಹೊರಗೆ ಹಾಕಲು ನೆರವಾಗುತ್ತದೆ.

ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಲು ಇದು ನೆರವಾಗುತ್ತದೆ.ಇದರಿಂದ ರಕ್ತದಲ್ಲಿನ ವಿಷಕಾರಿ ಅಂಶವು ಕಡಿಮೆಯಾಗುತ್ತದೆ.ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡುವಂತಹ ಗ್ಯಾಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ.ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಗಳು ಹಾಗೂ ಖನಿಜ ಅಂಶಗಳು ಇವೆ. ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತದೆ,ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ , ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಇದೆ ಇದು ನಮ್ಮ ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ಈ ಸುಲಭ ವಿಧಾನದಿಂದ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು.ಗರ್ಭಿಣಿ ಮಹಿಳೆಯರಿಗೆ ಉತ್ತಮ ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಪೊಟ್ಯಾಶಿಯಂ ಕ್ಯಾಲ್ಷಿಯಂ ಮತ್ತು ಪಾಸ್ಪರಸ್ ಸಂಶಯವೂ ಇದೆ.ಇದು ಗರ್ಭಿಣಿ ಮಹಿಳೆಯರಿಗೆ ತುಂಬಾನೇ ಒಳ್ಳೆಯದು. ಒಣದ್ರಾಕ್ಷಿ ತಿಂದರೆ ಅದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆಅಷ್ಟು ಮಾತ್ರವಲ್ಲದೆ ಇದು ತಾಯಿಯ ಆರೋಗ್ಯವನ್ನು ಕಾಪಾಡುತ್ತದೆ ಆದರೆ ಅದನ್ನು ಹಿತಮಿತವಾಗಿ ಸೇವಿಸಬೇಕು.

ಒಣದ್ರಾಕ್ಷಿಯನ್ನು ಯಾರೂ ಸೇವಿಸಲೇಬಾರದು ?

ಲಿವರ್ ತೊಂದರೆಯಿಂದ ಬಳಲುತ್ತಿರುವವರು ಒಣದ್ರಾಕ್ಷಿಯನ್ನು ಸೇವಿಸದೆ ಇದ್ದರೆ ಒಳ್ಳೆಯದು.ಒಣ ದ್ರಾಕ್ಷಿ ದೇಹದ ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಒಳ್ಳೆಯದು ಆದರೆ ಅತಿಯಾಗಿ ಸೇವಿಸಿದರೆ ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ.ಒಣದ್ರಾಕ್ಷಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಆದ್ದರಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸೇವಿಸದೆ ಇದ್ದರೆ ಉತ್ತಮ. ಒಣದ್ರಾಕ್ಷಿಯನ್ನು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿಯರು ಕೂಡ ಸೇವಿಸಬಾರದು.

ಒಣದ್ರಾಕ್ಷಿಯನ್ನು ನೆನೆಸುವ ಮೊದಲು ಅಥವಾ ಒಣ ದ್ರಾಕ್ಷಿಯನ್ನು ಹಾಗೆ ಸೇವಿಸುವ ಮೊದಲು ಇದನ್ನು ಗಮನದಲ್ಲಿಡಿ.ಒಣದ್ರಾಕ್ಷಿಯನ್ನು ಒಣಗಿಸುವ ಮುನ್ನ ಅವುಗಳನ್ನು ತೊಳೆಯಲು ಪೊಟ್ಯಾಶಿಯಮ್ ಕಾರ್ಬೋಹೈಡ್ರೇಟ್ ಮೊದಲಾದ ರಾಸಾಯನಿಕಗಳನ್ನು ಬಳಸುವ ಕಾರಣ ಒಣಗಿದ ಬಳಿಕವೂ ಇವುಗಳಲ್ಲಿ ಕೊಂಚವಾದರೂ ಈ ರಾಸಾಯನಿಕಗಳ ಅಂಶ ಇದ್ದೇ ಇರುತ್ತದೆಅದಲ್ಲದೇ ಒಣಗಿದ ಬಳಿಕವೂ ಹೆಚ್ಚು ಕಾಲ ಸಂರಕ್ಷಿಸಿ ಇಡಲು ಸಂರಕ್ಷಣೆಯ ಮಾತ್ರೆಗಳನ್ನು ಸಿಂಪಡಿಸಲಾಗುತ್ತದೆ.ಯಾವುದೇ ಒಣ ಫಲಗಳನ್ನು ತೊಳೆಯದೇ ಸೇವಿಸಲೇ ಬೇಡಿ.ಒಣ ದ್ರಾಕ್ಷಿಯನ್ನು ಮೊದಲು ಕೂಡ ತೊಳೆದು ನೆನೆಸಿಡಿ ಹಾಗೂ ದಿನದಲ್ಲಿ 10 ಕ್ಕಿಂತ ಹೆಚ್ಚು ಒಣ ದ್ರಾಕ್ಷಿಗಳನ್ನು ಸೇವಿಸಬೇಡಿ.

ಧನ್ಯವಾದಗಳು.

Leave a Comment