ರಮ್ಯಾ ಎಂದಿಗೂ ಆ ರೀತಿ ಮಾಡಲ್ಲ: ಯಾವ ವಿಚಾರದಲ್ಲಿ ನಟಿ ರಮ್ಯಾ ಮೇಲೆ ಕಿಚ್ಚ ಸುದೀಪ್ ಗೆ ಇಷ್ಟು ನಂಬಿಕೆ?

Written by Soma Shekar

Published on:

---Join Our Channel---

Ramya : ಸ್ಯಾಂಡಲ್ವುಡ್ ನಲ್ಲಿ ನಟ ಕಿಚ್ಚು ಸುದೀಪ್ (Kichcha Sudeep) ಮತ್ತು ನಟಿ ರಮ್ಯಾ (actress Ramya) ಅವರು ಕೆಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿ, ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದರು. ಈ ಜೋಡಿಯ ನಟನೆಯ ಸಿನಿಮಾಗಳು ಪ್ರೇಕ್ಷಕರ ಮೇಲೆ ಮೋಡಿ ಮಾಡಿದ್ದವು. ಸುದೀಪ್ ರಮ್ಯಾ ಜೋಡಿಯನ್ನು ಮತ್ತೊಮ್ಮೆ ಪರದೆಯ ಮೇಲೆ ನೋಡಬೇಕೆನ್ನುವುದು ಸಹಾ ಅನೇಕ ಸಿನಿ ಪ್ರೇಮಿಗಳ ಕನಸಾಗಿದೆ. ಆದರೆ ಅದು ಸಾಧ್ಯವಾಗುವುದೋ, ಇಲ್ಲವೋ ಗೊತ್ತಿಲ್ಲ. ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರಿಂದ ಇವರ ನಡುವೆ ಒಂದು ಉತ್ತಮವಾದ ಸ್ನೇಹ ಬಾಂಧವ್ಯ ಸಹಾ ಇದೆ ಎನ್ನುವುದು ಸಹಾ ಎಲ್ಲರಿಗೂ ಗೊತ್ತಿರವ ವಿಚಾರವೇ ಆಗಿದೆ.

ನಟಿ ರಮ್ಯ ಸಿನಿಮಾ ರಂಗದಿಂದ ರಾಜಕೀಯಕ್ಕೆ ಸಹಾ ಪ್ರವೇಶ ಮಾಡಿದವರು. ಎಂಪಿ ಆಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ ನಟಿ ಇವರು. ಸದ್ಯಕ್ಕೆ ಅವರು ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಮಾತ್ರವೇ ಅಲ್ಲದೇ ಸಿನಿಮಾವೊಂದರ ಮೂಲಕ ಮತ್ತೆ ಸ್ಯಾಂಡಲ್ವುಡ್ ಗೆ (Sandalwood) ಕಮ್ ಬ್ಯಾಕ್ ಮಾಡುವ ಸಿದ್ಧತೆಯನ್ನು ನಡೆಸಿದ್ದಾರೆ. ಇದೇ ವೇಳೆ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿ ಪರವಾಗಿ ಚುನಾವಣಾ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ವಿಷಯವು ಈಗಾಗಲೇ ಸಾಕಷ್ಟು ಸುದ್ದಿಗಳಾಗಿದೆ ಮತ್ತು ಅದರ ಬಗ್ಗೆ ಅನೇಕರು ಕಾಮೆಂಟ್ ಗಳನ್ನು ಮಾಡಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಸ್ಯಾಮ್ಸಂಗ್ ನ ಹೊಳೆಯುವ ಫೋನ್: ಇದರ ಸೆಲ್ಫಿ ಕ್ಯಾಮೆರಾ 64 MP, ಉಳಿದ ಫೀಚರ್ಸ್ ಅದ್ಭುತ

ನಟ ಸುದೀಪ್ (Sudeep) ಮತ್ತು ರಮ್ಯಾ ಅವರ ರಾಜಕೀಯ ನಿಲುವಿನ ವಿಚಾರಕ್ಕೆ ಬಂದಾಗ ಇಬ್ಬರ ನಿಲುವು ಬೇರೆ ಬೇರೆಯಾಗಿದೆ. ಆದರೆ ಅವರ ಸ್ನೇಹದ ಮೇಲೆ ಇದು ಯಾವುದೇ ಪರಿಣಾಮವನ್ನು ಬೀರಿಲ್ಲ. ಇತ್ತೀಚಿಗೆ ಮಾತನಾಡುತ್ತಾ ರಮ್ಯಾ ಅವರು, ಸುದೀಪ್ ರಾಜಕೀಯಕ್ಕೆ ಬರಬೇಕು ಎನ್ನುವ ಮಾತನ್ನು ಹೇಳಿದ್ದರು. ಈ ವಿಚಾರಕ್ಕೆ ಈಗ ಸುದೀಪ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸುದೀಪ್ ಅವರು, ರಮ್ಯಾ ನನಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಾರೆ. ಉತ್ತಮ ಗೆಳತಿ. ಬೇರೆ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದಾಗ ಕೊಂಕು ತೆಗೆದು ಸ್ಟೇಟ್ಮೆಂಟ್ ನೀಡೋದು ಸಹಜ. ಆದರೆ ರಮ್ಯಾ (Ramya) ಎಂದಿಗೂ ಹಾಗೆ ಮಾಡಲ್ಲ ಅನ್ನೋದು ಗೊತ್ತಿದೆ ಎಂದಿದ್ದಾರೆ.‌

Leave a Comment