Kiara Advani: ಆ ದಿನಕ್ಕಾಗಿ ಕಾಯ್ತಾ ಇದ್ದೀನಿ; ಕಿಯಾರಾ ಅಡ್ವಾಣಿ ಮಾತಿಗೆ ಶಾಕ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Kiara Advani : ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾಗಳಲ್ಲೂ ನಟಿಸುತ್ತಾ ಜನಪ್ರಿಯತೆಯನ್ನು ಪಡೆದಿರುವ ನಟಿ ಕಿಯಾರಾ ಅಡ್ವಾಣಿ (Kiara Advani). ತೆಲುಗಿನಲ್ಲಿ ನಟಿಸಿ ಹೆಸರನ್ನು ಪಡೆದಿರುವ ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಕಿಯಾರಾ ಈ ವರ್ಷಾರಂಭದಲ್ಲಿ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ (Siddharth Malhotra) ಜೊತೆಗೆ ಸಪ್ತಪದಿಯನ್ನು ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಮದುವೆಯ ನಂತರವೂ ಸಹಾ ಕಿಯಾರಾ ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಆದರೆ ಅವೆಲ್ಲವುಗಳ ನಡುವೆಯೇ ನಟಿ ಹೇಳಿರುವ ಮಾತು ಈಗ ವೈರಲ್ ಆಗಿದೆ ಹಾಗೂ ನಟಿಯ ಮಾತನ್ನು ಕೇಳಿ ಅವರ ಅಭಿಮಾನಿಗಳು ಸಹಾ ಶಾಕ್ ಆಗಿದ್ದಾರೆ. ಇದನ್ನೂ ಓದಿ: Bigg Boss: ಕಿಚ್ಚ ಸೇವ್ ಮಾಡಿದ್ದು ಯಾರನ್ನ? ಯಾರಿಗೆ ಬಂದಿತ್ತು ಕಡಿಮೆ ಓಟು? ಮೈಕಲ್ ಅಥವಾ ಸ್ನೇಹಿತ್

ಕಿಯಾರಾ ಮಾತನಾಡುತ್ತಾ,‌ ನಾನು ಗರ್ಭಿಣಿಯಾಗುವ ದಿನಕ್ಕಾಗಿ ಕಾಯುತ್ತಿದ್ದೇನೆ. ಯಾಕಂದ್ರೆ ಆಗ ನಾನು ಯಾವುದೇ ಕ್ಯಾಲೊರೀಸ್ ಅಂತ ಚಿಂತೆಯನ್ನು ಮಾಡದೇ, ಡಯಟ್ ಅನ್ನೋ ಸಮಸ್ಯೆ ಇಲ್ಲದೇ ಒಳ್ಳೆ ಒಳ್ಳೆ ರುಚಿಯಾದ ತಿಂಡಿಗಳನ್ನು ತಿನ್ನಬಹುದು ಎನ್ನುವ ಮಾತುಗಳನ್ನು ಹೇಳಿದ್ದಾರೆ.

Leave a Comment