KGF-2: ಮಧ್ಯರಾತ್ರಿ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟರ್ ವಿಮರ್ಶೆ!!

Written by Soma Shekar

Published on:

---Join Our Channel---

ಬಹಳ ದಿನಗಳ ನಿರೀಕ್ಷೆಗೆ ಪೂರ್ಣ ವಿರಾಮ ಬಿದ್ದಾಗಿದೆ. ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ತೆರೆಗೆ ಅಪ್ಪಳಿಸಿದೆ. ಫಸ್ಟ್ ಡೇ, ಫಸ್ಟ್ ಶೋ ನೋಡಲೇಬೇಕು ಎನ್ನುವ ತವಕವಿದ್ದ ಅಭಿಮಾನಿಗಳು ಮುಂಗಡ ಬುಕ್ಕಿಂಗ್ ಮೂಲಕ, ಹೇಗೋ ಶ್ರಮ ವಹಿಸಿ ಟಿಕೆಟ್ ಗಳನ್ನು ಪಡೆದುಕೊಂಡು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಕೆಜಿಎಫ್-2 ಸಿನಿಮಾ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮಧ್ಯರಾತ್ರಿಯೇ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ಮಂದಿ, ಟ್ವಿಟರ್ ನಲ್ಲಿ ಸಿನಿಮಾ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ನೋಡಿದ ನಂತರ ನೆಟ್ಟಿಗರೊಬ್ಬರು, ಕೆಜಿಎಫ್-2 ಸಿನಿಮಾ ಇದು ಅತ್ಯುತ್ತಮ ಸಿನಿಮಾ.‌ ಇಂಟರ್ವೆಲ್ ವರೆಗೂ ರಾಕಿ ಭಾಯ್ ಮತ್ತು ಸಂಜಯ್ ದತ್ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಸಿನಿಮಾಕ್ಕೆ ಐದಕ್ಕೆ ಐದು ಸ್ಟಾರ್ ನೀಡುತ್ತೇನೆ. ಇದು ನನ್ನ ಪ್ರಾಮಾಣಿಕ ವಿಮರ್ಶೆ ಎಂದು ಟ್ವೀಟ್ ಮಾಡುವ ಮೂಲಕ ಕೆಜಿಎಫ್-2 ಸಿನಿಮಾ ಬಹಳ ಚೆನ್ನಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

https://twitter.com/SwayamD71945083/status/1514331628515958785?t=FGgcfKqZEZcJBvTUc2LiAA&s=19

ಕೆಲವು ಸಲ ಸಿನಿಮಾದಲ್ಲಿ ಎಮೊಷನಲ್ ದೃಶ್ಯಗಳು ನಮಗೆ ಬೋರ್ ಹೊಡೆಸುತ್ತವೆ, ಅದಕ್ಕೆ ಇತ್ತೀಚಿನ ಕೆಲವು ಸಿನಿಮಾಗಳು ಸಹಾ ಸಾಕ್ಷಿಯಾಗಿದೆ. ಆದರೆ ಕೆಜಿಎಫ್-2 ನಲ್ಲಿನ ತಾಯಿಯ ಸೆಂಟಿಮೆಂಟ್ ದೃಶ್ಯಗಳು ಬಹಳ ಪರಿಣಾಮಕಾರಿಯಾಗಿದೆ. ಇಂಟರ್ ವೆಲ್ ದೃಶ್ಯ ಬಹಳ ರಾ ಆಗಿದೆ. 100 % ಈ ಸಿನಿಮಾ ಒಂದು ಟ್ರೀಟ್ ಎಂದು ಟ್ವೀಟ್ ಮಾಡುವ ಮೂಲಕ ಕೆಜಿಎಫ್-2 ಸಿನಿಮಾ ತಮಗೆ ಹಿಡಿಸಿದೆ ಎನ್ನುವ ಮಾತನ್ನು ಹೇಳಿದ್ದಾರೆ.

ಇನ್ನೂ ಕೆಲವರು ಸಿನಿಮಾದ ಎಲ್ಲಾ ದೃಶ್ಯಗಳ ಬಗ್ಗೆಯೂ ಟ್ವೀಟ್ ಮಾಡಿದ್ದು, ಪ್ರತಿಯೊಂದು ದೃಶ್ಯವು ಸಹಾ ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ಮಾತನ್ನೇ ಹೇಳಿದ್ದಾರೆ. ನಟ ಯಶ್ ಅವರ ವೃತ್ತಿ ಜೀವನಕ್ಕೆ ಕೆಜಿಎಫ್-2 ಖಚಿತವಾಗಿ ಮತ್ತೊಂದು ಮೈಲಿಗಲ್ಲಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡದ ಈ ಪ್ಯಾನ್ ಇಂಡಿಯಾ ಹೊಸ ದಾಖಲೆಗಳನ್ನು ಬರೆಯಲಿದೆ ಎನ್ನುವುದು ಸದ್ಯಕ್ಕೆ ಎಲ್ಲರ ನಿರೀಕ್ಷೆಗಳಾಗಿದೆ. ಬಾಲಿವುಡ್ ವಲಯದಲ್ಲಿ ಕೆಜಿಎಫ್-2 ಮೋಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ.

Leave a Comment