KGF-2: ಹೊರ ಬಿತ್ತು ಸಿನಿಮಾದ ಮೊಟ್ಟ ಮೊದಲ ವಿಮರ್ಶೆ!! 5 ಸ್ಟಾರ್ ನೀಡಿ ವಿದೇಶಿ ವಿಮರ್ಶಕ ಹೇಳಿದ್ದೇನು?

Entertainment Featured-Articles News

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಕೆಜಿಎಫ್ ಚಾಪ್ಟರ್ ಟು ಕೂಡಾ ಸೇರಿದೆ. ಸಿನಿಮಾ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ನಿರೀಕ್ಷೆಗಳನ್ನು ನಿಜ ಮಾಡಲು ಏಪ್ರಿಲ್ 14ರಂದು ಕೆಜಿಎಫ್-2  ತೆರೆ ಮೇಲೆ ಬರಲು ಸಜ್ಜಾಗಿದೆ. ಈ ವೇಳೆಯಲ್ಲೇ ಸಿನಿಮಾ ಟಿಕೆಟ್ ಮುಂಗಡ ಬುಕ್ಕಿಂಗ್ ನಲ್ಲೂ ಸಹಾ ಹೊಸ ದಾಖಲೆಯನ್ನು ಬರೆದಿದೆ ಎನ್ನುವುದು ಸುದ್ದಿಗಳಾಗಿವೆ. ಕೆಜಿಎಫ್-2 ಹವಾ ಎಲ್ಲೆಲ್ಲೂ ತುಂಬಿದೆ ಎಂದರೆ ಅದು ಸುಳ್ಳಲ್ಲ. ವಿಶ್ವದಾದ್ಯಂತ ಏಪ್ರಿಲ್ 14 ರಂದು ಸಿನಿಮಾ ತೆರೆ ಕಾಣಲಿದೆ.

ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಭರ್ಜರಿ ಆಕ್ಷನ್ ಥ್ರಿಲ್ಲರ್ ರೂಪದಲ್ಲಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿರುವ ಕೆಜಿಎಫ್ ಚಾಪ್ಟರ್ ಟು ಸಿನಿಮಾದ ಮೊದಲ ವಿಮರ್ಶೆ ಹೊರಬಂದಿದೆ. ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯರಾಗಿರುವ ಉಮೈರ್ ಸಂದು ಕೆಜಿಎಫ್ ಚಾಪ್ಟರ್ ಟು ಸಿನಿಮಾದ ವೀಕ್ಷಣೆಯನ್ನು ಮಾಡಿದ್ದು ಸಿನಿಮಾಕ್ಕೆ ಅವರು ಐದಕ್ಕೆ 5 ಸ್ಟಾರ್ ಗಳನ್ನು ನೀಡುವ ಮೂಲಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಎರಡೂ ಕಡೆಗಳಲ್ಲಿ ಅವರು ಕೆಜಿಎಫ್-2 ಬಗ್ಗೆ ಬರೆದುಕೊಂಡಿದ್ದಾರೆ.

ಉಮೈರ್ ಸಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಸಿನಿಮಾ ಅದ್ಭುತವಾಗಿದೆ. ಸಿನಿಮಾದ ವಿಶ್ಯುಯಲ್ಸ್ ಸ್ಟನ್ನಿಂಗ್ ಆಗಿದ್ದು, ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತದೆ. ಸಿನಿಮಾವನ್ನು ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಜನರ ದೃಷ್ಟಿಯು ಹೀರೋ ಮತ್ತು ಮಿಲನ್ ಮೇಲೆ ಇರುತ್ತದೆ. ಯಶ್ ಅವರ ನಟನೆ ದೇಹದಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡುತ್ತದೆ. ಸಂಜಯ್ ದತ್ ನಟನೆ ಕೂಡ ಅತ್ಯದ್ಭುತ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಕೆಜಿಎಫ್-2 ಸಿನಿಮಾ ಅದ್ಭುತ ಎನ್ನುವ ರಿವ್ಯೂ ನೀಡಿದ್ದಾರೆ.

Leave a Reply

Your email address will not be published.