KGF-2 ಸಿನಿಮಾದಲ್ಲಿ ಯಾವ ಕಲಾವಿದರು ಮಾಡದಂತಹ ವಿಶೇಷ ಕೆಲಸ ಮಾಡಿದ ನಟ ಪ್ರಕಾಶ್ ರೈ!!

Entertainment Featured-Articles News

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವು ದಿನಗಳು ಮಾತ್ರವೇ ಉಳಿದಿದೆ. ಈ ಬಾರಿ ಕೆಜಿಎಫ್-2 ನಲ್ಲಿ ದಕ್ಷಿಣದ ಪ್ರಖ್ಯಾತ ನಟ ಪ್ರಕಾಶ್ ರೈ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಪ್ರಕಾಶ್ ರೈ ಕೆಜಿಎಫ್-2 ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕೂಡಲೇ ಅದೊಂದು ದೊಡ್ಡ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಯನ್ನು ಸಹಾ ಇದು ಹುಟ್ಟು ಹಾಕಿತ್ತು. ಈ ಚರ್ಚೆಗೆ ಕಾರಣವಾಗಿದ್ದು ಕೆಜಿಎಫ್ ಒಂದರಲ್ಲಿ ಅನಂತ್ ನಾಗ್ ಅವರು ನಿರ್ವಹಿಸಿದ್ದ ಪಾತ್ರಕ್ಕೆ ಪ್ರಕಾಶ್ ರೈ ಬಂದಿದ್ದಾರೆ ಎನ್ನುವುದು.

ಆಗ ಎದ್ದ ಪ್ರಶ್ನೆಗೆ ಚಿತ್ರತಂಡದ ಕಡೆಯಿಂದ ಇನ್ನೂ ಉತ್ತರ ಸಿಕ್ಕಿಲ್ಲವಾದರೂ ಏಪ್ರಿಲ್ 14 ರಂದು ತೆರೆಯ ಮೇಲೆ ಖಂಡಿತ ಎಲ್ಲರಿಗೂ ಸಿಗಲಿದೆ. ನಟ ಯಶ್ ಅವರು ಸಹಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅನಂತನಾಗ್ ಅವರು ಲೆಜೆಂಡರಿ ನಟ, ಅವರು ಕೆಜಿಎಫ್ ಸಿನಿಮಾಕ್ಕೆ ಒಂದು ಘನತೆಯನ್ನು ತಂದು ಕೊಟ್ಟಿದ್ದು, ಅವರ ಬಗ್ಗೆ ನಾನೇನು ಹೇಳಲಾರೆ.. ಇನ್ನು ಪ್ರಕಾಶ್ ರೈ ಅವರ ಪಾತ್ರದ ಬಗ್ಗೆ ಸಿನಿಮಾ ಬಿಡುಗಡೆ ನಂತರ ಆ ಪಾತ್ರದ ಹಿನ್ನಲೆ ಏನೆಂದು ತಿಳಿಯುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆಯೇ ಹೊರತು ಪಾತ್ರದ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ.

ಇನ್ನು ಕೆಜಿಎಫ್-2 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ದಕ್ಷಿಣದ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಮೂಡಿ ಬಂದಿದೆ. ಐದು ಭಾಷೆಗಳಲ್ಲಿ ಮೂಡಿ ಬಂದಿರುವ ಸಿನಿಮಾಕ್ಕೆ ಸಿನಿಮಾದ ಕಲಾವಿದರು ಡಬ್ಬಿಂಗ್ ಮಾಡಿದ್ದಾರೆ. ಆದರೆ ಕೆಲವರು ಒಂದು ಭಾಷೆಗೆ, ಇನ್ನೂ ಕೆಲವರು ಎರಡು, ಮೂರು ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದರೆ, ವಿಶೇಷ ಎಂದರೆ ರಾವ್ ರಮೇಶ್ ಅವರು ಸಿನಿಮಾದ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ.

ಆದರೆ ನಟ ಪ್ರಕಾಶ್ ರೈ ಅವರು ಸಿನಿಮಾದ ಐದು ಭಾಷೆಗಳಲ್ಲೂ ಡಬ್ಬಿಂಗ್ ಮಾಡುವ ಮೂಲಕ ಐದು ಭಾಷೆಗಳಲ್ಲಿ ತಮ್ಮ ಪಾತ್ರಕ್ಕೆ ತಾವೇ ದನಿ ನೀಡಿದ್ದು, ಎಲ್ಲಾ ಭಾಷೆಗಳಲ್ಲೂ ಸಹಾ ಪ್ರೇಕ್ಷಕರಿಗೆ ಪ್ರಕಾಶ್ ರೈ ಅವರ ದನಿಯೇ ಮನರಂಜನೆಯನ್ನು ನೀಡಲಿದೆ ಎನ್ನುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕೆಜಿಎಫ್-2 ಸಿನಿಮಾದ ಕ್ರೇಜ್ ಈಗಾಗಲೇ ಎಲ್ಲೆಡೆ ಸದ್ದು ಮಾಡಿದ್ದು, ಈಗಾಗಲೇ ಟಿಕೆಟ್ ಮುಂಗಡ ಬುಕ್ಕಿಂಗ್ ಎಲ್ಲೂ ಕೆಜಿಎಫ್-2 ದಾಖಲೆಯನ್ನು ಬರೆದಿದೆ ಎನ್ನಲಾಗಿದೆ.

Leave a Reply

Your email address will not be published.