KGF-2 ಟ್ರೈಲರ್ ಬಿಡುಗಡೆ ಸಮಾರಂಭ: ನಿರೂಪಣೆ ಮಾಡೋದು ಬಾಲಿವುಡ್ ನ ಈ ಖ್ಯಾತ ನಿರ್ಮಾಪಕ, ನಿರ್ದೇಶಕ!!

Entertainment Featured-Articles News

ಬಾಲಿವುಡ್ ಚಿತ್ರ ಜಗತ್ತಿನಲ್ಲಿ ನಿರ್ಮಾಪಕ, ನಿರ್ದೇಶಕ, ಬರಹಗಾರನಾಗಿ ಹಾಗೂ ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ, ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ನಿರೂಪಕನಾಗಿಯೂ ಸಹಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕರಣ್ ಜೋಹರ್ ಹೆಸರು ಬಹಳ ಚಿರಪರಿಚಿತ. ಕರಣ್ ಜೋಹರ್ ಹೆಸರಿಗೆ ಬಾಲಿವುಡ್ ಚಿತ್ರ ಸೀಮೆ ಯಲ್ಲಿ ಪ್ರತ್ಯೇಕವಾದ ಪರಿಚಯದ ಅಗತ್ಯ ಇಲ್ಲ. ‌ನಿರ್ಮಾಪಕ ಕರಣ್ ಜೋಹರ್ ಜನಪ್ರಿಯತೆ ಜೊತೆಯಲ್ಲಿ ಬಾಲಿವುಡ್‌ ನ ಸ್ಟಾರ್ ಕಿಡ್ ಗಳಿಗೆ ಗಾಡ್ ಫಾದರ್ ಎನ್ನುವ ಟೀಕೆಗೆ ಸಹಾ ಜನರಿಂದ ಗುರಿಯಾಗಿದ್ದಾರೆ. ಟೀಕೆ, ಟಿಪ್ಪಣಿ ಗಳ‌ ಹೊರತಾಗಿಯೂ ಕರಣ್ ಜೋಹರ್ ಜನಪ್ರಿಯತೆ ಮಾತ್ರ ಕುಂದಿಲ್ಲ.

ಇಂತಹ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿ ಇದೇ ಮೊದಲ ಬಾರಿಗೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ಕಾರ್ಯಕ್ರಮಕ್ಕೆ ನಿರೂಪಣೆಯನ್ನು ಮಾಡಲು ಬರುತ್ತಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಸಿನಿಮಾದ ಟ್ರೈಲರ್ ಇದೇ ಮಾರ್ಚ್ 27 ರಂದು ಬಹಳ ಅದ್ದೂರಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ಈ ಅದ್ದೂರಿ ಸಮಾರಂಭದಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಕರಣ್ ಜೋಹರ್ ಹೊತ್ತು ಕೊಂಡಿದ್ದು, ಈ ವಿಷಯ ಈಗ ಎಲ್ಲರ ಕುತೂಹಲವನ್ನು ಕೆರಳಿಸಿದೆ.

ಮಾರ್ಚ್ 27 ರ ಸಂಜೆ 6:45 ಕ್ಕೆ ಕೆಜಿಎಫ್-2 ಸಿನಿಮಾದ ಟ್ರೈಲರ್ ಬಿಡುಗಡೆ ಅಗಲಿದ್ದು, ಕರಣ್ ಜೋಹರ್ ಈ ಕಾರ್ಯಕ್ರಮಕ್ಕಾಗಿ ಮುಂಬೈನಿಂದ ಬಂದಿಳಿಯಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಸಿನಿರಂಗದ ಪ್ರಮುಖ ಸೆಲೆಬ್ರಿಟಿಗಳು, ಮಂತ್ರಿಗಳು, ಸಿನಿಮಾದ ತಂತ್ರಜ್ಞರು, ಕಲಾವಿದರು ಎಲ್ಲರೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ದಕ್ಷಿಣ ಸಿನಿಮಾವೊಂದರ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ಕರಣ್ ಜೋಹರ್ ಗೆ ಇದೇ ಮೊದಲು ಎನ್ನಬಹುದು. ಕೆಜಿಎಫ್-2 ಟ್ರೈಲರ್ ಹೇಗಿರಲಿದೆ ಎನ್ನುವುದು ಇನ್ನಷ್ಡು ಕುತೂಹಲವನ್ನು ಕೆರಳಿಸಿದೆ.

Leave a Reply

Your email address will not be published.