KGF-2 ಗೆಲುವು: ವಿಶೇಷ ಟ್ರೀಟ್ ಕೇಳಿದ ಗೂಗ್ಲಿ ಬೆಡಗಿಗೆ ರಾಕಿಂಗ್ ಸ್ಟಾರ್ ಕೊಟ್ಟ ಉತ್ತರ ಏನು??

0 1

ಸಿನಿಮಾ ರಂಗದಲ್ಲಿ ಈಗ ಎಲ್ಲೆಲ್ಲೂ ಸಹಾ ಕೆಜಿಎಫ್-2 ಸಿನಿಮಾದ್ದೇ ಅಬ್ಬರ. ಕೆಜಿಎಫ್-2 ಸಿನಿಮಾ ಎಲ್ಲಾ ಭಾಷೆಗಳಲ್ಲಿಯೂ ಸಹಾ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಹೆಸರು ಮಾಡುತ್ತಿರುವ ಈ ಸಿನಿಮಾ‌ ಮತ್ತೊಮ್ಮೆ ಕನ್ನಡ ಚಿತ್ರ ರಂಗದ ಕಡೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಪರಭಾಷೆಗಳಲ್ಲೂ ಸಹಾ ಜನರು ಸಿನಿಮಾ ನೋಡಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ನಟ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ದೊಡ್ಡ ಸದ್ದು ಮಾಡಿದ್ದು, ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ.‌

ಕೆಜಿಎಫ್-2 ಸಾಧಿಸಿರುವ ಗೆಲುವಿನ ಹಿನ್ನೆಲೆಯಲ್ಲಿ ನಟಿ ಕೃತಿ ಕರಬಂಧ ತಮ್ಮದೇ ಆದ ರೀತಿಯಲ್ಲಿ ಚಿತ್ರ ತಂಡಕ್ಕೆ ಹಾಗೂ ನಟ ಯಶ್ ಅವರಿಗೆ ಸಿನಿಮಾ ಗೆಲುವಿನ ಅಭಿನಂದನೆಯನ್ನು ತಿಳಿಸಿದ್ದಾರೆ. ನಟಿ ಕೃತಿ ಕರಬಂಧ ಯಶ್ ಅವರ ಜೊತೆಗೆ ಗೂಗ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಕೆಜಿಎಫ್-2 ಸಿನಿಮಾಕ್ಕೆ ಅಭಿನಂದನೆ ಯನ್ನು ತಿಳಿಸುವ ಮೂಲಕ ನಟಿ ಕೃತಿ ಕರಬಂಧ ಅವರು ಗೂಗ್ಲಿ ಸಿನಿಮಾವನ್ನು ಮತ್ತೊಮ್ಮೆ ಎಲ್ಲರಿಗೂ ನೆನಪಾಗುವಂತೆ ಮಾಡಿದ್ದಾರೆ.

ನಟಿ ಕೃತಿ ಕರಬಂಧ ಟ್ವೀಟ್ ಮಾಡಿ, “ಯಶ್ ಇದು ಕಬ್ಬಿನ ಹಾಲಿನ ಟ್ರೀಟ್ ಕೊಡಿಸುವ ಸಮಯ. ಕೆಜಿಎಫ್-2 ಸಿನಿಮಾದ ದೊಡ್ಡ ಗೆಲುವಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ. ಇದಕ್ಕೆ ನಟ ಯಶ್ ಅವರು ಪ್ರತಿಕ್ರಿಯೆ ನೀಡುತ್ತಾ, ಧನ್ಯವಾದಗಳು ಎಂದು ಹೇಳಿದ್ದಾರೆ.‌ ಕೃತಿ ಅವರು ಮಾಡಿದ ಟ್ವೀಟ್ ನೋಡಿದ ಅನೇಕರಿಗೆ ಇದು ಗೂಗ್ಲಿ ಸಿನಿಮಾದ ಒಂದು ದೃಶ್ಯವನ್ನು ನೆನಪು ಮಾಡಿದೆ, ಅನೇಕರು ಕಾಮೆಂಟ್ ನಲ್ಲಿ ಅದನ್ನು ನೆನಪಿಸಿಕೊಂಡಿದ್ದಾರೆ.

ಗೂಗ್ಲಿ ಸಿ‌ನಿಮಾದ ಒಂದು ದೃಶ್ಯದಲ್ಲಿ ನಾಯಕ ನಾಯಕಿ ಭೇಟಿಯಾದಾಗ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುವ ವೇಳೆ, ಕಬ್ಬಿನ ಹಾಲು ಕಾಫಿಗಿಂತ ಹೀಟ್ ಎಂದಾಗ, ನಾಯಕ ಯಶ್ ಯುವಕರು ಯಾವಾಗಲೂ ಹೀಟ್ ನಲ್ಲೇ ಇರಬೇಕು ಎನ್ನುವ ಡೈಲಾಗ್ ಹೇಳುತ್ತಾರೆ. ಅವರ ಈ ಡೈಲಾಗ್ ಸಖತ್ ಫೇಮಸ್ ಸಹಾ ಆಗಿತ್ತು. ಈಗ ಕೃತಿ ಅವರು ಮಾಡಿದ ಟ್ವೀಟ್ ಮತ್ತೊಮ್ಮೆ ಅಭಿಮಾನಿಗಳಿಗೆ ಗೂಗ್ಲಿ ಸಿನಿಮಾವನ್ನು ನೆನಪಿಸಿದೆ.

Leave A Reply

Your email address will not be published.