KGF-2 ಗೆ ಬಿಗ್ ಶಾಕ್!! ನಿನ್ನೆಯಷ್ಟೇ ಚಿತ್ರ ತಂಡ ಈ ವಿಚಾರ ಹೇಳಿತ್ತು: ಚಿತ್ರ ತಂಡದ ಕಳಕಳಿಗೆ ಇದೆಂತ ಪ್ರತಿಫಲ

Written by Soma Shekar

Published on:

---Join Our Channel---

ಪೈರಸಿ ಎನ್ನುವುದು ಚಿತ್ರರಂಗಕ್ಕೆ ಬಹು ದೊಡ್ಡ ತಲೆ ನೋವಿನ ವಿಚಾರವಾಗಿದೆ. ಏನೆಲ್ಲಾ, ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಸಹಾ ಪೈರಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವಷ್ಟರ ಮಟ್ಟಕ್ಕೆ ಇದು ಸಿನಿಮಾ ರಂಗವನ್ನು ಕಾಡುತ್ತಿದೆ. ಶ್ರಮವಹಿಸಿ ತೆರೆಗೆ ಬಂದ ಸಿನಿಮಾಗಳು ಕೆಲವೇ ಗಂಟೆಗಳಲ್ಲಿ ಪೈರಸಿ ಆದಾಗ ಸಿನಿಮಾಕ್ಕಾಗಿ ಹಾಕಿದ ಶ್ರಮ ಮಣ್ಣು ಪಾಲಾಗುವಂತೆ ಆಗುತ್ತಿದೆ. ಪೈರಸಿ ವಿ ರು ದ್ಧ ಯಾವುದೇ ಪರಿಣಾಮಕಾರ ಕ್ರಮ ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದೀಗ ಇದೇ ಪೈರಸಿ ಕಾಟವು ಕೆಜಿಎಫ್-2 ಸಿನಿಮಾಕ್ಕೂ ಕೂಡಾ ಕಾಡಿದೆ.

ನಿನ್ನೆ ತಾನೇ ಕೆಜಿಎಫ್-2 ಸಿನಿಮಾ ತಂಡ ಪೈರಸಿ ಬಗ್ಗೆ ಮಾತನಾಡಿತ್ತು. ಅಲ್ಲದೇ ಎಲ್ಲಾದರೂ ಇಂತದ್ದು ಕಂಡು ಬಂದರೆ ಈ ವಿಳಾಸಕ್ಕೆ ಫೋನ್ ಮಾಡಿ ಸಂಪರ್ಕಿಸಿ ಎನ್ನುವ ಪೋಸ್ಟರ್ ಒಂದನ್ನು ಸಹಾ ಬಿಡುಗಡೆ ಮಾಡಲಾಗಿತ್ತು. ಆದರೆ ಇದೆಲ್ಲದರ ಹೊರತಾಗಿಯೂ ಸಹಾ ಕಿಡಿಗೇಡಿಗಳು ಸಿನಿಮಾ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಕೆಜಿಎಫ್-2 ಸಿನಿಮಾವನ್ನು ಪೈರಸಿ ಮಾಡಿದ್ದಾರೆ. ಈಗ ಇಡೀ ಸಿನಿಮಾ ಆನ್ಲೈನ್ ನಲ್ಲಿ ಲಭ್ಯವಿದೆ ಎನ್ನಲಾಗುತ್ತಿದೆ.

ನಿನ್ನೆ ಈ ಸಿನಿಮಾದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಮಾತನಾಡುತ್ತಾ, ಸಿನಿಮಾದ ದೃಶ್ಯಗಳನ್ನು ಯಾರೂ ಮೊಬೈಲ್ ಗಳಲ್ಲಿ ಸೆರೆ ಹಿಡಿಯಬೇಡಿ, ಸಿನಿಮಾದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬೇಡಿ, ಒಂದು ವೇಳೆ ಪೈರಸಿ ಮಾಡಿದ್ದಾರೆ ಎಂದು ತಿಳಿದರೆ ಕೂಡಲೇ ದೂರು ನೀಡಿ. ಕೋಟಿ ಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಿ ಎನ್ನುವ ಮಾತುಗಳನ್ನು ಹೇಳಿದ್ದರು.

ಆದರೆ ಅವರ ಈ ಎಲ್ಲಾ ಮಾತು, ಮನವಿಯ ನಂತರವೂ ಸಹಾ ಸಿನಿಮಾ‌ ಪೈರಸಿಯಾಗಿದೆ. ಇನ್ನು ಪೈರಸಿ ತಡೆಯುವುದಕ್ಕಾಗಿ ಈಗಾಗಲೇ ಕಾನೂನಿನ ಕ್ರಮಗಳನ್ನು ಜಾರಿಗೊಳಿಸಲಾಗಿದ್ದರೂ ಅದು ಸಮಸ್ಯೆಯಾಗಿದೆ. ವಿದೇಶಗಳಿಂದ ಪೈರಸಿ ಮಾಡುವವರನ್ನು ನಿಯಂತ್ರಣ ಮಾಡುವುದು ಕಠಿಣವಾದ ಕಾರಣದಿಂದಾಗಿ ಎಗ್ಗಿಲ್ಲದೇ ಪೈರಸಿ ಎನ್ನುವುದು ನಡೆಯುತ್ತಿದೆ. ಈಗಾಗಲೇ ಅನೇಕ ಬಾರಿ ಅನೇಕ ಸಿನಿ ಕಲಾವಿದರು ಇದರ ವಿರುದ್ಧ ದನಿ ಎತ್ತಿದ್ದರೂ ಸಹಾ ಪ್ರಯೋಜನವಾಗಿಲ್ಲ.

Leave a Comment