Tata New SUV’s ಹಣ ಸೇವ್ ಮಾಡಿ ಇಟ್ಕೊಳ್ಳಿ, ಹಬ್ಬದ ಸೀಸನ್ ಗೆ ನಿಮ್ ಬಜೆಟ್ ಗೆ ಸಿಗೋ 3 SUV ಗಳು ಎಂಟ್ರಿ ಕೊಡಲಿವೆ

Written by Soma Shekar

Published on:

---Join Our Channel---

Car News : ಭಾರತೀಯ ಮಾರುಕಟ್ಟೆಯಲ್ಲಿ ಹಲವು ಪ್ರಬಲ ಹಾಗೂ ಜನಪ್ರಿಯ ವಾಹನ ತಯಾರಿಕಾ ಕಂಪನಿಗಳಿವೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕಂಪನಿಗಳು ಪ್ರತಿ ತಿಂಗಳು ತಮ್ಮ ವಾಹನಗಳನ್ನು ಲಾಂಚ್ ಮಾಡುತ್ತವೆ ಹಾಗೂ ಲಕ್ಷಗಟ್ಟಲೆ ವಾಹನಗಳ ಮಾರಾಟವೂ ನಡೆಯುತ್ತದೆ. ಈಗ ದೇಶದಲ್ಲಿ ಮಾರಾಟವಾಗುವ ಕಾರುಗಳಲ್ಲಿ ಎಸ್‌ ಯು ವಿ (SUV) ಗಳ ಸಂಖ್ಯೆ ಬಹಳ ವೇಗವಾಗಿ ಏರಿಕೆಯಾಗುತ್ತಿದೆ.

ಜನರು ಸಹ ಎಸ್‌ ಯು ವಿಗಳನ್ನು ಹೆಚ್ಚು ಇಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬೇಡಿಕೆ ಹೆಚ್ಚುತ್ತಿದ್ದು, ಕಂಪನಿಗಳು ಸಹಾ ಈ ಕಾರುಗಳ ಉತ್ಪಾದನೆಯನ್ನು ಹೆಚ್ಚಿಸುವ ಕಡೆಗೆ ಒತ್ತು ನೀಡಿದ್ದು, ಹಲವು ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಮೂರು ಹೊಸ ಎಸ್ ಯುವಿಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, ಅವುಗಳ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇದ್ದು, ಅವುಗಳ ಆಸಕ್ತಿಕರ ಮಾಹಿತಿಗಳನ್ನು ನಿಮಗಾಗಿ ತಂದಿದ್ದೇವೆ.

ಟಾಟಾ ಸಫಾರಿ ಫೇಸ್‌ ಲಿಫ್ಟ್ (Tata Safari Facelift) : ಟಾಟಾ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನು ಟಾಟಾ ಸಫಾರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಈಗ ಟಾಟಾ ಸಫಾರಿ ಫೇಸ್‌ ಲಿಫ್ಟ್ ಮಾದರಿಯನ್ನು ಮಾರುಕಟ್ಟೆಗೆ ತರಲು ಬಹಳ ಸಮಯದಿಂದ ಸಿದ್ಧತೆಗಳನ್ನು ನಡೆಸಿದೆ.

ಜನರು ಸಹಾ ಬಹಳ ಸಮಯದಿಂದ ಈ ಕಾರಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಈ ಹೊಸ ಕಾರನ್ನು ಈ ವರ್ಷದ ಹಬ್ಬದ ಋತುವಿನಲ್ಲಿ ಲಾಂಚ್ ಮಾಡಬಹುದು ಎನ್ನಲಾಗುತ್ತಿದ್ದು, ಈ ಕಾರಿನಲ್ಲಿ ಅನೇಕ ಕಾಸ್ಮೆಟಿಕ್ ಮತ್ತು ಹಾರ್ಡ್ ವೇರ್ ಬದಲಾವಣೆಗಳನ್ನು ಕಾಣಬಹುದು ಎನ್ನಲಾಗಿದೆ. ಪ್ರಸ್ತುತ, ಕಂಪನಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ, ಆದರೆ ಪರೀಕ್ಷೆಯ ಸಮಯದಲ್ಲಿ ಇದು ಹಲವು ಬಾರಿ ಕಾಣಿಸಿಕೊಂಡಿದೆ.

ಟಾಟಾ ಹ್ಯಾರಿಯರ್ ಫೇಸ್‌ ಲಿಫ್ಟ್ (Tata Harrier facelift) : ಕಂಪನಿಯು ಈ ಕಾರಿನ ಫೇಸ್‌ ಲಿಫ್ಟ್ ಆವೃತ್ತಿಯನ್ನು ಹಬ್ಬದ ಋತುವಿನಲ್ಲಿ ಮಾತ್ರವೇ ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅದರ ಪವರ್‌ ಟ್ರೇನ್‌ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವಾದರೂ, ಅದರ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಬದಲಾವಣೆಗಳನ್ನು ನೋಡಬಹುದೆನ್ನಲಾಗಿದೆ. ಶೀಘ್ರದಲ್ಲೇ ಕಂಪನಿ ಈ ಹೊಸ ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಬಹುದೆನ್ನುವ ನಿರೀಕ್ಷೆಗಳಿವೆ.

ಬೊಲೆರೋ ನಿಯೋ ಪ್ಲಸ್ (Bolero Nio Plus) ಮುಂದಿನ ಕೆಲವೇ ತಿಂಗಳುಗಳಲ್ಲಿ Bolero Neo Plus ಗೂ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಕಂಪನಿಯು ಇನ್ನೂ ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಶೇರ್ ಮಾಡಿಲ್ಲ. ಆದರೆ ಮಾದ್ಯಮ ವರದಿಗಳ ಪ್ರಕಾರ ಅದು ಬರುವ ನಿರೀಕ್ಷೆಗಳು ಮಾತ್ರ ದಟ್ಟವಾಗಿದೆ.

ಇದು ಈಗಿರುವ ಬೊಲೆರೊ ನಿಯೊಗಿಂತ ಹೆಚ್ಚಿನ ಆಸನ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗುತ್ತಿದೆ ಮತ್ತು ಆರಂಭಿಕ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರಬಹುದೆನ್ನುವ ನಿರೀಕ್ಷೆಗಳು ಸಹಾ ಇದೆ. ಇದರ ಮುಂಭಾಗ ಮತ್ತು ನೈಜ ವಿನ್ಯಾಸದಲ್ಲೂ ಹಲವು ಬದಲಾವಣೆಗಳು ಆಗಬಹುದು.‌ಆದರೆ ಇಂಜಿನ್ ಹಿಂದಿನಂತೆಯೇ ಇರಲಿದ್ದು, ಗ್ರಾಹಕರ ಅನುಕೂಲಕ್ಕಾಗಿ ವೈಶಿಷ್ಟ್ಯಗಳನ್ನು ಹೆಚ್ಚಿಸಬಹುದು ಎನ್ನಲಾಗಿದೆ.

Leave a Comment