ಕೌನ್ ಬನೇಗಾ ಕರೋಡ್ ಪತಿ ಕ್ವಿಜ್ ಶೋ ದೇಶಾದ್ಯಂತ ಜನ ಮನ್ನಣೆಯನ್ನು ಪಡೆದಿರುವ ವಿಶೇಷ ಜ್ಞಾನಾಧಾರಿತ ಕಾರ್ಯಕ್ರಮವಾಗಿ ಅಪಾರ ಜನ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡು, ಭರ್ಜರಿ ಹನ್ನೆರಡು ಸೀಸನ್ ಗಳನ್ನು ಮುಗಿಸಿ, ಇದೀಗ ಹದಿಮೂರನೇ ಸೀಸನ್ ಸಹಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜ್ಞಾನ ವನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಹಣ ಗೆಲ್ಲುವ ಅವಕಾಶ ಇರುವ ಈ ಶೋ ಮೂಲಕ ಅದೆಷ್ಟೋ ಜನರ ಜೀವನದಲ್ಲಿ ಒಂದು ಹೊಸ ಹುರುಪು ಮೂಡಿದೆ, ಹೊಸ ಬದುಕನ್ನು ಕಟ್ಟಿಕೊಳ್ಳಲು ಈ ಕಾರ್ಯಕ್ರಮ ಕಾರಣವಾಗಿದೆ.
ಈ ಹೊಸ ಸೀಸನ್ ನಲ್ಲಿ ಶಾನ್ದಾರ್ ಶುಕ್ರವಾರ್ ಎನ್ನುವ ಹೊಸ ಕಾನ್ಸೆಪ್ಟ್ ಕೂಡಾ ಇದ್ದು, ಪ್ರತಿ ಶುಕ್ರವಾರ ಸೆಲೆಬ್ರಿಟಿಗಳು, ವಿಶೇಷ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಶೋ ನಲ್ಲಿ ಗೆದ್ದ ಹಣವನ್ನು ಅವರು ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಅಥವಾ ಟ್ರಸ್ಟ್ ಗಳಿಗೆ ದೇಣಿಗೆಯಾಗಿ ನೀಡುವುದು ವಾಡಿಕೆಯಾಗಿದೆ. ಶಾನ್ದಾರ್ ಶುಕ್ರವಾರ್ ನ ಮೊದಲ ಎಪಿಸೋಡ್ ಗೆ ಕ್ರಿಕೆಟ್ ತಾರೆಯರು ಆಗಮಿಸಿದ್ದರು.
ಮೊದಲ ಶಾನ್ದಾರ್ ಶುಕ್ರವಾರ್ ಗೆ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಕಳೆದ ವಾರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕಿ, ನಟಿ, ನೃತ್ಯ ಸಂಯೋಜಕಿಯು ಆಗಿರುವ ಪರ್ಹಾ ಖಾನ್ ಅತಿಥಿಗಳಾಗಿ ಆಗಮಿಸಿ ಜನರನ್ನು ರಂಜಿಸಿದ್ದರು. ಇನ್ನು ಈ ವಾರ ಒಲಂಪಿಕ್ಸ್ ನ ಪದಕ ವಿಜೇತರು ಆಗಮಿಸಿ ಕಾರ್ಯಕ್ರಮದ ಮೆರೆದು ಹೆಚ್ಚಿಸಲಿದ್ದಾರೆ.
ಹೌದು ಈ ವಾರದ ಶಾನ್ದಾರ್ ಶುಕ್ರವಾರ್ ಗಾಗಿ ಒಲಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಭಾರತದ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ. ಶ್ರೀಜಿತ್ ಭಾಗವಹಿಸಲಿದ್ದಾರೆ. ಈ ವಿಶೇಷ ಎಪಿಸೋಡ್ ನ ಪ್ರೊಮೋ ವನ್ನು ವಾಹಿನಿ ಬಹಳ ರೋಚಕ ವಾಗಿರುವ ಹಾಗೆ ರೂಪಿಸಿ ಶೇರ್ ಮಾಡಿಕೊಂಡಿದೆ.
ಚಾನೆಲ್ ಬಿಡುಗಡೆ ಮಾಡಿರುವ ಪ್ರೋಮದಲ್ಲಿ ನೀರಜ್ ಮತ್ತು ಶ್ರೀಜಿತ್ ಇಬ್ಬರೂ ಕಾರ್ಯಕ್ರಮಕ್ಕೆ ಆಗಮಿಸುವ ವೀಡಿಯೋ ತುಣುಕು ಇದ್ದು, ಕಾರ್ಯಕ್ರಮದ ನಿರೂಪಕ ಹಿರಿಯ ನಟ ಅಮಿತಾಬ್ ಅವರು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಇದು ವೀಕ್ಷಕರಿಗೆ ರೋಮಾಂಚನದ ಅನುಭವವಾಗುತ್ತದೆ. ಪ್ರೋಮೋ ನೋಡಿ ವೀಕ್ಷಕರ್ ಬಹಳ ಥ್ರಿಲ್ ಫೀಲ್ ಆಗುತ್ತಿದ್ದಾರೆ.
ಪ್ರೋಮೋ ವೀಕ್ಷಣೆ ಮಾಡಿದ ಅನೇಕ ಮಂದಿ ನೆಟ್ಟಿಗರು ಹಾಗೂ ಶೋ ನ ಅಭಿಮಾನಿಗಳಂತೂ ಬಹಳ ಖುಷಿ ಪಟ್ಟಿದ್ದು, ಕಾಮೆಂಟ್ ಗಳ ಮಳೆಯನ್ನು ಹರಿಸುತ್ತಾ, ಮುಂದಿನ ವಾರ ಪ್ರಸಾರವಾಗಲಿರುವ ಶೋ ವೀಕ್ಷಣೆಗಾಗಿ ನಿರೀಕ್ಷೆಯಲ್ಲಿ ಇದ್ದೇವೆ ಎಂದಿದ್ದಾರೆ. ಇನ್ನೂ ಅನೇಕರು ಇದೊಂದು ವಿಶೇಷ ಎಪಿಸೋಡ್ ಆಗಲಿದೆ ಎಂದು ಖುಚಿ ವ್ಯಕ್ತಪಡಿಸಿದ್ದಾರ