KBC ಹಾಟ್ ಸೀಟ್ ಏರಿ ಲಕ್ಷಾಧಿಕಾರಿಯಾದ ರಾಜಸ್ಥಾನದ ಶಾಲಾ ಶಿಕ್ಷಕಿ: ಗೆದ್ದ ಹಣ ಏನು ಮಾಡುವರೆಂದು ಹೇಳಿದ್ದು ಹೀಗೆ
ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೆಗ ಕರೋಡ್ ಪತಿ ಕಾರ್ಯಕ್ರಮವು ಭಾರತೀಯರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಜ್ಞಾನದ ಜೊತೆಗೆ ಹಣವನ್ನು ಗಳಿಸುವ ಅವಕಾಶವನ್ನು ನೀಡುವ ಗೇಮ್ ಶೋ ಇದಾಗಿದ್ದು, ಈ ಶೋ ಪ್ರತಿಯೊಂದು ಸೀಸನ್ ನಲ್ಲಿ ಸಹಾ ಬಹಳಷ್ಟು ಜನರಿಗೆ ಇದು ಮರೆಯಲಾಗದ ಅನುಭೂತಿಯನ್ನು ನೀಡಿದೆ. ಬಹಳಷ್ಟು ಅದ್ಭುತ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಕಾರ್ಯಕ್ರಮವು ಸಾಕ್ಷಿಯಾಗಿದೆ. ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳ ಜೀವನದ ಕನಸುಗಳನ್ನು ನನಸು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕೆಬಿಸಿಯಲ್ಲಿ ಪಾಲ್ಗೊಂಡ ಮೇಲೆ ಅನೇಕರ ಬದುಕಿನಲ್ಲಿ ಒಂದು ಹೊಸ ಬದಲಾವಣೆ ಮೂಡಿದೆ, ಅವರ ಜೀವನದ ದಿಕ್ಕು ಬದಲಾಗಿದೆ. ಹೊಸ ಬದುಕನ್ನು ಅನೇಕರು ಕಟ್ಟಿಕೊಂಡಿದ್ದಾರೆ. ಇತ್ತೀಚಿಗೆ ಅಂತಹದೇ ಒಂದು ಅಭೂತಪೂರ್ವ ಕ್ಷಣಕ್ಕೆ ಕೆಬಿಸಿ ವೇದಿಕೆ ಸಾಕ್ಷಿಯಾಯಿತು.
ರಾಜಸ್ಥಾನದ ಭರತ್ ಪುರದಿಂದ ಆಗಮಿಸಿದ್ದ ಶಾಲಾ ಶಿಕ್ಷಕಿ ಆಯೇಷಾ ಅವರು ಹಾಟ್ ಸೀಟ್ ನಲ್ಲಿ ಕೂರುವ ಅದೃಷ್ಟವನ್ನು ಪಡೆದುಕೊಂಡರು. ಹಾಟ್ ಸೀಟ್ ಗೆ ಆಯ್ಕೆಯಾದ ಆಯೇಷಾ ಆ ಕ್ಷಣದಲ್ಲಿ ಭಾವುಕರಾದರು. ನಂತರ ಅವರು ಅಮಿತಾಬ್ ಬಚ್ಚನ್ ಅವರ ಜೊತೆ ಮಾತನಾಡುತ್ತಾ ತಮ್ಮ ಗ್ರಾಮದ ವಿಶೇಷತೆಗಳನ್ನು ಹೇಳಿದ್ದು ಮಾತ್ರವೇ ಅಲ್ಲದೇ, ಇಂದಿಗೂ ಅಲ್ಲಿನ ಸಮಾಜದಲ್ಲಿ ಇರುವ ಲಿಂಗ ತಾರತಮ್ಯದ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆ ಇಲ್ಲದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಯೇಷಾ ಅವರು ಪ್ರಸ್ತುತ ಶಾಲೆಯೊಂದರಲ್ಲಿ ಹತ್ತನೇ ತರಗತಿಯವರೆಗೆ ಜೀವಶಾಸ್ತ್ರ ವಿಷಯವನ್ನು ಬೋಧಿಸುತ್ತಾರೆ.
2003ರಲ್ಲಿ ತರಬೇತಿ ಅವಧಿಯಲ್ಲಿ ಅವರು ಭೇಟಿಯಾದ ನೀರಜ್ ಅವರನ್ನು ಪ್ರೀತಿಸಿದ್ದರು. ಆದರೆ ಮದುವೆಯಾಗಲು ಬರೋಬ್ಬರಿ 17 ವರ್ಷಗಳು ಬೇಕಾಯಿತು ಎನ್ನುವ ವಿಚಾರವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರೀತಿಯೇನೋ ಆಯಿತು, ಆದರೆ ಆಯೇಷಾ ಮುಸ್ಲಿಂ ಹಾಗೂ ನೀರಜ್ ಹಿಂದೂ ಆದ್ದರಿಂದ, ಧರ್ಮಗಳು ಬೇರೆ ಬೇರೆ ಎನ್ನುವ ಕಾರಣದಿಂದ ಎಲ್ಲರನ್ನು ಒಪ್ಪಿಸಿ ಮದುವೆಯಾಗಲು ಅಷ್ಟು ವರ್ಷಗಳ ಕಾಲ ಹಿಡಿಯಿತು ಎಂದು ಹೇಳಿದ್ದಾರೆ. ಇನ್ನು ಕೆ ಬಿಸಿ ಯಲ್ಲಿ 12.5 ಲಕ್ಷ ರೂಪಾಯಿಗಳ ಪ್ರಶ್ನೆಗೆ ಉತ್ತರದಲ್ಲಿ ಅನುಮಾನ ಉಂಟಾದ ಕಾರಣ ಯಾವುದೇ ಲೈಫ್ ಲೈನ್ ಇರಲಿಲ್ಲವಾದ್ದರಿಂದ ಆಯೇಷಾ ಅಲ್ಲಿಗೆ ಕ್ಟಿವ್ ಮಾಡಿದರು. ಕೆಬಿಸಿಯಲ್ಲಿ ಅವರು 6.4 ಲಕ್ಷ ರೂಪಾಯಿಗಳನ್ನು ಗೆಲ್ಲುವ ಮೂಲಕ ಲಕ್ಷ ಅಧಿಕಾರಿಯಾದರು. ಇನ್ನು ಅಮಿತಾಬ್ ಬಚ್ಚನ್ ಅವರು ಆಯೇಷಾ ಗೆದ್ದ ಹಣವನ್ನು ಹೇಗೆ ಬಳಸುತ್ತಾರೆ,ಆ ಹಣವನ್ನು ಏನು ಮಾಡುವಿರಿ ಎಂದು ಪ್ರಶ್ನೆ ಕೇಳಿದಾಗ, ಆಕೆ ತಾನು ಗೆದ್ದ ಹಣದಲ್ಲಿ ಒಂದಷ್ಟು ಹಣವನ್ನು ಶಾಲೆಗೆ ಮತ್ತು ಕೋವಿಡ್ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದಾರೆ. ಅದಾದ ಮೇಲೆ ಉಳಿದ ಹಣದಲ್ಲಿ ಪತಿಯ ಜೊತೆಗೆ ಹನಿಮೂನ್ ಹೋಗುವುದಾಗಿ ಹೇಳಿಕೊಂಡು ನಕ್ಕಿದ್ದಾರೆ ಆಯೇಷಾ.