Kasturi Shankar: ಎಷ್ಟು ಅಂತ ತಡ್ಕೊಳ್ತಾರೆ, ದರ್ಶನ್ ಪರ ದನಿ ಎತ್ತಿದ ಪರಭಾಷಾ ನಟಿ, ಅಚ್ಚರಿ ಮೂಡಿಸಿದ ನಟಿ

Written by Soma Shekar

Published on:

---Join Our Channel---

Kasturi Shankar: ರೇಣುಕಾ ಸ್ವಾಮಿ ಕೊ ಲೆ ಪ್ರಕರಣ ದೇಶ ವ್ಯಾಪಿಯಾಗಿ ಒಂದು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ವಿಷಯ ಇಷ್ಟೊಂದು ದೊಡ್ಡ ಸುದ್ದಿಯಾಗಲು ಕಾರಣವಾಗಿದ್ದು ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು. ಈ ಕೊ ಲೆ ಪ್ರಕರಣದಲ್ಲಿ ಅವರು ಎರಡನೇ ಆರೋಪಿಯಾಗಿದ್ದು ಅವರು ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿ ಇದ್ದು, ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ. ಈ ಪ್ರಕರಣದ ವಿಚಾರವಾಗಿ ಸ್ಯಾಂಡಲ್ವುಡ್ ನಲ್ಲಿ ಸೆಲೆಬ್ರಿಟಿಗಳು ಇನ್ನು ಮೌನವಾಗಿ ಇದ್ದರೂ ಕನ್ನಡ ಸೇರಿದಂತೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಸ್ತೂರಿ ಶಂಕರ್ (Kasturi Shankar) ಅವರು ಇದರ ಕುರಿತಾಗಿ ಮಾತನಾಡಿದ್ದಾರೆ.

ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಕಸ್ತೂರಿ, ಆತ (ರೇಣುಕಾಸ್ವಾಮಿ) ನಟಿಗೆ ಕಿರುಕುಳ ನೀಡುತ್ತಿದ್ದ. ಆತನಿಗೆ ಅದರ ಅಗತ್ಯ ಏನಿತ್ತು ? ದರ್ಶನ್ ಮಾಡಿದ್ದು ತಪ್ಪೇ ಆದರೆ ಈ ರೀತಿ ಆದಾಗ ಇದನ್ನು ಹ್ಯಾಂಡಲ್ ಮಾಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅಶ್ಲೀಲ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಹೀಗಿರುವಾಗ ಮೆಸೇಜ್ ಗಳನ್ನು ಯಾಕೆ ಮಾಡಬೇಕು? ದರ್ಶನ್ ಬದುಕಿನಲ್ಲಿ ಏನಾದ್ರೂ ತೊಂದರೆ ಇದ್ದರೆ ಅದನ್ನ ನೋಡಿಕೊಳ್ಳೋದಕ್ಕೆ ಅವರ ಮೊದಲ ಪತ್ನಿ ಇದ್ದಾರೆ. ಅದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ ನಟಿ ಕಸ್ತೂರಿ.

ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಪವಿತ್ರ (Pavithra Gowda) ಬಂದರು ಅನ್ನೋ ಕೋಪ ರೇಣುಕಾ ಸ್ವಾಮಿಗೆ ಇತ್ತು ಎನ್ನಲಾಗಿದ್ದು ಅದಕ್ಕೆ ಕಸ್ತೂರಿ ಅವರು ಈ ಮಾತನ್ನು ಹೇಳಿದ್ದಾರೆ. ಸೆಲೆಬ್ರಿಟಿಗಳಿಗೆ ಅ ಶ್ಲೀ ಲ ಮೆಸೇಜ್ ಗಳನ್ನು ಕಳಿಸುವ ಹಕ್ಕನ್ನ ಸಾರ್ವಜನಿಕರಿಗೆ ಕೊಟ್ಟವರ್ಯಾರು? ದರ್ಶನ್ ಶಾರ್ಟ್ ಟೆಂಪರ್ ವ್ಯಕ್ತಿ, ಆ ವ್ಯಕ್ತಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳು ಹೊಡೆದು ಪಾಠ ಕಲಿಸಬೇಕು ಎಂದುಕೊಂಡಿದ್ದರೇನೋ ಆ ವೇಳೆ ಆತ ಮೃತಪಟ್ಟಿದ್ದಾನೆ.

ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಿ ಡೀಪ್ ಫೇಕ್ ವಿಡಿಯೋ ಮೂಲಕ ಅವರಿಗೆ ಸಾಕಷ್ಟು ತೊಂದರೆಯನ್ನು ಕೊಡಲಾಗಿದೆ. ಎಲ್ಲರೂ ಈ ರೀತಿ ಮಾಡುತ್ತಿದ್ದಾರೆ ಎಂದರೆ ಯಾರಿಗೂ ಅದನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ನಟಿ ಸಿಟ್ಟಾಗಿದ್ದಾರೆ. ಉದ್ಯಮಿ, ರಾಜಕಾರಣಿಗಳಿಗೆ ಈ ರೀತಿ ಆದರೆ ಅದನ್ನು ಮಾಡಿದವರು ಕಣ್ಮರೆಯಾಗಿ ಬಿಡುತ್ತಾರೆ. ಆದರೆ ಫಿಲಂ ಸ್ಟಾರ್ಸ್ ಗೆ ಈ ರೀತಿ ಮಾಡಿದರೆ ಸೆಲೆಬ್ರಿಟಿಗಳು ಅದನ್ನ ತಡೆದುಕೊಳ್ಳಬೇಕು.

ಎಷ್ಟು ಅಂತ ತಡ್ಕೊಳ್ಳೋಕೆ ಆಗುತ್ತೆ. ಒಮ್ಮೆ ಸಿಡಿಯುತ್ತಾರೆ. ಜನರು ಕೊಂಚ ಕರುಣೆ ತೋರಿಸಬೇಕು ಎಂದು ಅವರು ಹೇಳಿದ್ದಾರೆ. ಪವಿತ್ರ ಗೌಡಗೆ ರೇಣುಕಾ ಸ್ವಾಮಿ ಅ ಶ್ಲೀ ಲ ಸಂದೇಶ ಕಳಿಸಿದ್ದರು ಎನ್ನುವ ಕಾರಣದಿಂದಲೇ ದರ್ಶನ್ ಸಿಡಿದೆದ್ದರು. ತಮ್ಮ ಗ್ಯಾಂಗ್ ಜೊತೆ ಸೇರಿ ರೇಣುಕಾ ಸ್ವಾಮಿಯ ಹ ತ್ಯೆ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊತ್ತಿದ್ದಾರೆ ಎನ್ನುವ ಮಾತುಗಳನ್ನು ಹೇಳುವ ಮೂಲಕ ಕಸ್ತೂರಿಯವರು ದರ್ಶನ್ ಪರವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Leave a Comment