ಅದೊಂದು ಕಾರಣಕ್ಕೆ ಆದಿಪುರುಷ್ ನೋಡಲು 10,000 ಉಚಿತ ಟಿಕೆಟ್: ಕಾಶ್ಮೀರ್ ಫೈಲ್ಸ್ ನಿರ್ಮಾಪಕನ ನಿರ್ಧಾರ

0 1

Adipurush Movie : ಆದಿಪುರುಷ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜೂನ್ 16 ಕ್ಕೆ ಸಿನಿಮಾ ಮಿಂಚಲು, ಅಬ್ಬರಿಸಲು ಸಜ್ಜಾಗಿದೆ. ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾವನ್ನು 3ಡಿ ಯಲ್ಲೂ ಸಹಾ ಪ್ರೇಕ್ಷಕರು ನೋಡಿ ಆನಂದಿಸಬಹುದಾಗಿದೆ. ಆರಂಭದಿಂದಲೂ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದು, ಬಿಡುಗಡೆ ನಂತರ ಪ್ರೇಕ್ಷಕರು ಸಿನಿಮಾವನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದರ ನಡುವೆಯೇ ಮೊದಲ ದಿನವೇ ಸಿನಿಮಾ ಕಲೆಕ್ಷನ್ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಸಹಾ ಮೂಡಿದೆ.

ನಿರ್ಮಾಪಕರಿಗೆ ಹಾಕಿರುವ ಬಹುಕೋಟಿ ಬಂಡವಾಳಕ್ಕೆ ತಕ್ಕ ಹಾಗೆ ಲಾಭ ಸಿಗುವುದೇ ಎಂದೆಲ್ಲಾ ಚರ್ಚೆಗಳು ಸಹಾ ನಡೆಯುತ್ತಿದೆ. ಇವೆಲ್ಲವುಗಳ ನಡುವೆ ಈಗ ಮತ್ತೊಂದು ಹೊಸ ವಿಷಯ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಈಗ ಹೊರ ಬಂದಿರುವ ಹೊಸ ಅಪ್ಡೇಟ್ ಪ್ರಕಾರ ಪ್ರಭಾಸ್ (Prabhas) ನಾಯಕನಾಗಿರುವ ಆದಿಪುರುಷ್ ಸಿನಿಮಾದ ಬರೋಬ್ಬರಿ 10 ಸಾವಿರ ಟಿಕೆಟ್ ಗಳನ್ನು ಉಚಿತವಾಗಿ ಹಂಚಲು ನಿರ್ಮಾಪಕರೊಬ್ಬರು ಸಜ್ಜಾಗಿದ್ದಾರೆ. ಇದನ್ನೂ ಓದಿ: ಸಕ್ಸಸ್ ಗಾಗಿ ಬಾಲಿವುಡ್ ಬಿಟ್ಟು ಟಾಲಿವುಡ್ ಗೆ ಅಮೀರ್ ಖಾನ್ ? ಈ ಕಾಂಬಿನೇಷನ್ ಕ್ಲಿಕ್ ಆಗುತ್ತಾ?

ತೆಲುಗಿನಲ್ಲಿ ಕಾರ್ತಿಕೇಯ 2’ (Kartikeya 2), ಹಿಂದಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ (The Kashmir Files), ಸಿನಿಮಾಗಳನ್ನು ನಿರ್ಮಾಣ ಮಾಡಿರುವಂತಹ ನಿರ್ಮಾಪಕ ಮಾಡಿರುವ ಅಭಿಷೇಕ್ ಅಗರ್​ವಾಲ್ (Abhishek Agarwal) ಅವರು ಆದಿಪುರುಷ್ ಸಿನಿಮಾದ 10+ ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚುವ ನಿರ್ಧಾರವನ್ನು ಮಾಡಿದ್ದಾರೆ. ಅಲ್ಲದೇ ಅವರು ತಾವು ಇಂತಹ ನಿರ್ಧಾರ ಮಾಡಿರುವುದಕ್ಕೆ ಕಾರಣ ಏನು? ಎನ್ನುವುದನ್ನು ಸಹಾ ವಿವರಿಸಿದ್ದಾರೆ.

ನಿರ್ದೇಶಕ ಅಭಿಷೇಕ್ ಅಗರ್ವಾಲ್ ಅವರು ರಾಮನ ಪರಮ (Sri Rama) ಭಕ್ತರಾಗಿದ್ದಾರೆ. ಆದ್ದರಿಂದಲೇ ರಾಮಾಯಣದ ಕಥೆಯನ್ನು ಆಧರಿಸಿ ಬರುತ್ತಿರುವ ಆದಿಪುರುಷ್ ಸಿನಿಮಾವನ್ನು ಹೆಚ್ಚು ಜನರಿಗೆ ನೋಡುವ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕೆ ಅವರು ಉಚಿತ ಟಿಕೆಟ್ ಗಳನ್ನು ಹಂಚುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ‘ಆದಿಪುರುಷ್ ಜೀವಮಾನದಲ್ಲೊಮ್ಮೆ ನೋಡಲೇಬೇಕಾದ ಸಿನಿಮಾ ಆಗಿದೆ.

ಈ ಸಿನಿಮಾವನ್ನು ಪ್ರತಿಯೊಬ್ಬರೂ ಸಹಾ ಸಂಭ್ರಮಿಸಬೇಕು ಎಂದಿರುವ ಅಭಿಷೇಕ್ ಅವರು ತೆಲಂಗಾಣದಲ್ಲಿರುವ (telangana) ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ಮಾಡಿದ್ದಾರೆ. ಉಚಿತ ಟಿಕೆಟ್ ಗಳನ್ನು ಪಡೆಯಲು ವಿವರಗಳ ಜೊತೆಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ಸೂಚನೆಯನ್ನು ನೀಡಲಾಗಿದೆ. ಅಲ್ಲದೇ ಅವರು ತಮ್ಮ ಟ್ವೀಟ್ ನಲ್ಲಿ ಜೈ ಶ್ರೀ ರಾಮ್ ಎನ್ನುವ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲೂ ಮೊಳಗಲಿ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.